ಆಪ್ತ ಸಹಾಯಕನಿಂದ ಶೂ ಧರಿಸಿಕೊಂಡ ಸಿಎಂ ಸಿದ್ದರಾಮಯ್ಯ

Posted By:
Subscribe to Oneindia Kannada

ಮೈಸೂರು, ಡಿಸೆಂಬರ್ 25: ವಿವಿಧ ಕಾರ್ಯಕ್ರಮ ಉದ್ಘಾಟನೆಗಾಗಿ ಮೈಸೂರಿಗೆ ಬಂದಿದ್ದ ಸಿಎಂ ಸಿದ್ದರಾಮಯ್ಯನವರು ತಮ್ಮ ಆಪ್ತ ಸಹಾಯಕನಿಂದ ಶೂ ಧರಿಸಿಕೊಂಡ ಪ್ರಸಂಗ ಶನಿವಾರ ನಡೆಯಿತು. ಇದು ಸಾಮಾಜಿಕ ಜಾಲ ತಾಣ ಮತ್ತು ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಕಾರಣವಾಗಿದೆ.

ಸಾಂಸ್ಕೃತಿಕ ನಗರೀಯಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯನವರು ಹಿರಿಯ ನಟ ಚೇತನ್ ರಾಮ್ ರಾವ್ ನಿಧನದ ಹಿನ್ನೆಲೆ ಅಂತಿಮ ದರ್ಶನ ಪಡೆದರು. ನಂತರ ರಾಮ್‌ರಾವ್‌ ಮನೆಯಿಂದ ಹೊರಬಂದ ಸಿದ್ದರಾಮಯ್ಯ, ಹೊರಗೆ ಬಿಟ್ಟಿದ್ದ ಶೂ ಅನ್ನು ತಮ್ಮ ಆಪ್ತ ಸಹಾಯಕ ಕುಮಾರ್‌ ಅವರಿಂದ ಸಾರ್ವಜನಿಕರ ಎದುರಲ್ಲೇ ಹಾಕಿಸಿಕೊಂಡರು. ಈ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಕಾರಣವಾಗಿದ್ದು, ಕೆಲವರು ಮುಖ್ಯಮಂತ್ರಿಗಳು ಹೀಗೆ ಮಾಡಬಾರದಿತ್ತು ಎಂದರೆ ಕೆಲವರು ಅವರ ಕ್ರಿಯೆಯನ್ನು ಸಮರ್ಥಿಸಿಕೊಂಡಿದ್ದಾರೆ.['ಸಿಯಾಚಿನ್' ಬಗ್ಗೆ ಸಿಎಂ ಸಿದ್ದರಾಮಯ್ಯ ಟ್ವೀಟ್ ಪ್ರಮಾದ]

The shoe donning a close assistant CM in mysuru

ಇನ್ನು ಸಿದ್ದರಾಮಯ್ಯನವರ ಕಾಲಿಗೆ ಶೂ ಹಾಕಿದ್ದು ಅವರ ಆಪ್ತ ಸಹಾಯಕ ಅಲ್ಲ ಅವರ ದೂರದ ಸಂಬಂಧಿ ಎಂದು ಮುಖ್ಯಮಂತ್ರಿಯವರ ಕಚೇರಿ ಸ್ಪಷ್ಟಪಡಿಸಿದೆ. ಆಪ್ತ ಸಹಾಯಕ ಹೀರಾ ನಾಯಕ್ ಎಂದು ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.[ಸುಪ್ರ ಸುಂದರಿಗೆ ಸಿಎಂ ಸಿದ್ದರಾಮಯ್ಯ ಅಭಿನಂದನೆ]

ದಲಿತರ, ಹಿಂದುಳಿದವರ, ಅಲ್ಪಸಂಖ್ಯಾರತ ಪರವಾಗಿ ಜೀತ ಪದ್ಧತಿ ವಿರೋಧವಾಗಿ ಅಹಿಂದಾ, ಸಮಾಜವಾದಿಯಾಗಿ ಶ್ರಮಿಸುತ್ತಿರುವವ ಮುಖ್ಯಮಂತ್ರಿಗಳಿಗೆ ಕೈಗೊಬ್ಬರು , ಕಾಲಿಗೊಬ್ಬರು ಇಲ್ಲದಿದ್ದರೆ ಹೇಗೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The shoe donning a close assistant CM in mysuru. The public debate on this topic in few days.
Please Wait while comments are loading...