ಮೈಸೂರಲ್ಲಿ 10 ಮಂದಿ ದರೋಡೆಕೋರರ ಬಂಧನ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಜನವರಿ 13 : 10 ಮಂದಿ ದರೋಡೆಕೋರರು, 3 ಮಂದಿ ಕೇಬಲ್ ವೈರ್ ಕಳ್ಳರು ಒಬ್ಬ ಬಾಲಕನನ್ನು ಬಂಧಿಸುವಲ್ಲಿ ಮೈಸೂರು ನಗರ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಪೊಲೀಸ್ ಆಯುಕ್ತ ಡಾ.ಸುಬ್ರಹ್ಮಣ್ಯೇಶ್ವರರಾವ್ ತಿಳಿಸಿದರು.

ಬಂಧಿತರಿಂದ ಒಟ್ಟುರು 18,98 ಲಕ್ಷ ನಗದು, ಕಾರು, ದ್ಚಿಚಕ್ರ ವಾಹನಗಳು ಮತ್ತು ಕೇಬಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರು ಮಂಡ್ಯ ಮೂಲದ ಭಾಗ್ಯ, ಮೈಸೂರು ಮೂಲದ ಮಧುಸೂಧನ, ಶರತ್ ಕುಮಾರ್, ಕಾರ್ತಿಕ್ ಸಿ, ಅರ್ಜುನ್ ಸಿ, ಮಂಡ್ಯದ ಎಂ.ಡಿ ರವಿಕುಮಾರ್, ಮೈಸೂರಿನವರಾದ ದರ್ಶನ್ ಎನ್, ಮಂಜುನಾಥ್ ಆರ್, ಸತೀಶ್, ಶ್ರೀರಂಗಪಟ್ಟಣದ ಬಿ.ಸಿ ಸುನಿಲ್ ಎಂದು ವಿಚಾರಣೆ ವೇಳೆ ತಿಳಿಸಿದ್ದಾರೆ ಎಂದು ಡಾ.ಸುಬ್ರಹ್ಮಣ್ಯೇಶ್ವರರಾವ್ ಹೇಳಿದರು.[ಬೆಂಗಳೂರಲ್ಲಿ 5 ದರೋಡೆಕೋರರ ಬಂಧನ, 12 ಪ್ರಕರಣಗಳು ಪತ್ತೆ]

The Mysuru Police has successful to arrest the 10 Bandits

ದ್ವಾರಕೀಶ್ ಎಂಬುವರಿಂದ ದರೋಡೆ ಮಾಡಿದ್ದ ರು. 3.5 ಲಕ್ಷ, 2 ಇನ್ನೋವಾ ಕಾರು, 2 ಡ್ಯ್ರಾಗರ್, 3 ಲಾಂಗ್ ಗಳು, 1 ಕಬ್ಬಿಣದ ರಾಡು, 12 ಮೊಬೈಲ್ ಫೋನ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.[ಭರ್ಜರಿ ಬೇಟೆ : ಬೆಂಗಳೂರಲ್ಲಿ 13 ದರೋಡೆಕೋರರ ಬಂಧನ]

The Mysuru Police has successful to arrest the 10 Bandits

ಪ್ರಮುಖ ಆರೋಪಿಯಾಗಿರುವ ಭಾಗ್ಯ ಸ್ಥಳೀಯವಾಗಿ ಯುವಕರನ್ನು ಸಂಘಟನೆ ಮಾಡಿ ದರೋಡೆ ನಡೆಸುತ್ತಿದ್ದ ಸಂಗತಿ ಪೋಲೀಸರ ವಿಚಾರಣೆ ವೇಳೆ ಬಹಿರಂಗಗೊಂಡಿದೆ ಎಂದು ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Mysuru Police has successful to arrest the 10 Bandits, 3 Thiefs and Boy says Police Commissioner Dr.Subrahmanyeswara rao in Mysuru
Please Wait while comments are loading...