ಮೈಸೂರಿನ ಜಾಂಬೂರಿ ಉತ್ಸವವೇ ಮಹದೇವ ಪ್ರಸಾದ್ ಕೊನೆ ಕಾರ್ಯಕ್ರಮ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಜನವರಿ 4: ಹೃದಯಾಘಾತದಿಂದ ವಿಧಿವಶರಾದ ಎಚ್.ಎಸ್. ಮಹದೇವ ಪ್ರಸಾದ್ ಅವರು ಮೈಸೂರಿನ ಜಾಂಬೂರಿ ಉತ್ಸವದ ಐದನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ನೇಹಿತ ಸಿಂಧ್ಯಾ ಅವರನ್ನು ನೆನಪಿಸಿಕೊಂಡಿದ್ದರು. ರಾಜಕೀಯವಾಗಿ ಇದೇ ಅವರ ಅಂತಿಮ ಕಾರ್ಯಕ್ರಮ.

ಮೈಸೂರಿನ ನಂಜನಗೂಡಿನ ರಸ್ತೆಯಲ್ಲಿರುವ ಅಡಕನಹಳ್ಳಿಯ 17 ನೇ ಜಾಂಬೂರಿ ಸ್ಕೌಟ್ ಮತ್ತು ಗೈಡ್ಸ್ ಸಮಾವೇಶದ 5ನೇ ದಿನ ವಿವಿಧ ರಾಜ್ಯಗಳ ಆಹಾರ ಮೇಳಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಸಚಿವ ಮಹದೇವ ಪ್ರಸಾದ್, ಕಾರ್ಯಕ್ರಮ ಉದ್ಘಾಟನೆ ಮಾಡಿದ್ದರು.[ಮಹದೇವ ಪ್ರಸಾದ್ ಸ್ಥಾನ ತುಂಬುವವರು ಯಾರು?]

The last program of minister HS Mahadeva prasad

ಬಳಿಕ ಮಾತನಾಡಿ, ಭಾರತದ ಎಲ್ಲಾ ಸಂಸ್ಕೃತಿಯ ಆಹಾರಗಳು ಮೈಸೂರಿನ ಅಡಕನಹಳ್ಳಿಯಲ್ಲಿ ತೆರೆದುಕೊಂಡಿದೆ. ಮಿನಿ ಭಾರತವೇ ಮೈಸೂರಿನಲ್ಲಿದೆ ಎಂದು ಪ್ರಸಂಶೆಯ ಮಾತುಗಳನ್ನಾಡಿದ್ದರು. ಅಲ್ಲದೆ ಜಾಂಬೂರಿ ಸಮಾವೇಶದ ರೂವಾರಿ ಹಾಗೂ ಜನತಾ ಪರಿವಾರದ ಸ್ನೇಹಿತ ಪಿ.ಜಿ.ಆರ್. ಸಿಂಧ್ಯಾ ನೆನಪಿಸಿಕೊಂಡಿದ್ದರು.[ಮಹದೇವ ಪ್ರಸಾದ್ ನಿಧನ : ಮುಖಂಡರ ಅಂತಿಮ ನುಡಿ]

The last program of minister HS Mahadeva prasad

ಜಿಲ್ಲೆಯಲ್ಲಿ 17ನೇ ಸ್ಕೌಟ್ಸ್ ಮತ್ತು ಗೈಡ್ಸ್ ಜಾಂಬೂರಿ ಸಮಾವೇಶದ ಆಹಾರ ಮೇಳ ಇನ್ನು ನಡೆಯುತ್ತಿದೆ. ಆದರೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಹಕಾರಿ ಸಚಿವ ಮಹದೇವ ಪ್ರಸಾದ್ ಅವರು ಮಾತ್ರ ನಮ್ಮೊಂದಿಗಿಲ್ಲ ಆಹಾರ ಮೇಳಗಳ ಉದ್ಘಾಟನೆಯೇ ಅವರ ಕೊನೆಯ ಕಾರ್ಯಕ್ರಮ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mysore, in the fifth day of the festival jamburi, Co-operative minister HS Mahadeva prasad inaugurated Food Fair program. This is the last program of Mahadeva prasad.
Please Wait while comments are loading...