ಹೃದಯಾಘಾತದಿಂದ ಮೈಸೂರಿನ ಹಿರಿಯ ಪತ್ರಕರ್ತ ಅನೂಪ್ ಕುಮಾರ್ ನಿಧನ

Posted By:
Subscribe to Oneindia Kannada

ಮೈಸೂರು, ಜನವರಿ 1: 'ದಿ ಹಿಂದೂ' ಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಹಿರಿಯ ಪತ್ರಕರ್ತ ಅನೂಪ್ ಕುಮಾರ್(50) ಹೃದಯಾಘಾತದಿಂದ ಇಂದು(ಜ.1) ಮೃತಪಟ್ಟಿದ್ದಾರೆ.

ಗೌರಿ ಲಂಕೇಶ್ ಮಾದರಿಯಲ್ಲಿ ಉತ್ತರ ಪ್ರದೇಶದಲ್ಲಿ ಪತ್ರಕರ್ತನ ಗುಂಡಿಕ್ಕಿ ಹತ್ಯೆ

ಕೆಲ ವರ್ಷಗಳಿಂದ ದೆಹಲಿಯಲ್ಲಿ ಕೆಲಸ ನಿರವಹಿಸುತ್ತಿದ್ದ ಅನೂಪ್ ಅವರು ಮೂಲತಃ ಮೈಸೂರಿನವರು.

ಪ್ರವಾಸಕ್ಕೆಂದು ಕುಟುಂಬ ಸಮೇತ ಚಂಡಿಗಢ ಮನಾಲಿಗೆ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಅವರ ಪಾರ್ಥಿವ ಶರೀರವನ್ನು ಮೈಸೂರಿಗೆ ತಂದು, ಇಂದು ಸಂಜೆ ಇಲ್ಲಿನ ವಿಜಯನಗರದ ಅವರ ನಿವಾಸದ ಬಳಿ ಸಾರ್ವಜನಿಕ ದರ್ಶನಕ್ಕಾಗಿ ಇರಿಸಲಾಗುತ್ತದೆ ಎಂದು ಅವರ ಕುಟುಂಬ ವರ್ಗದವರು ಮಾಹಿತಿ ನೀಡಿದ್ದಾರೆ.

, Anoop Kumar

ಮೈಸೂರಿನ ಗೋಕುಲಂ ಬಡಾವಣೆಯ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ.ಅನೂಪ್ ಅವರ ಅಕಾಲಿಕ ಮರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
'The Hindu' journalist Anoop Kumar(50) passed awamy on Jan 1st. He was basically from Mysuru, and had been working in Delhi since many years. He was on a family tour to Chandigarh's Manali.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ