ಮೈಸೂರು ದಸರೆಗೆ ಬರಲಿದೆ ಸುವರ್ಣ ರಥ

Posted By:
Subscribe to Oneindia Kannada

ಮೈಸೂರು, ಆಗಸ್ಟ್ 16: ನಾಡಹಬ್ಬ ದಸರಾ ಮಹೋತ್ಸವವನ್ನು ಪ್ರವಾಸೋದ್ಯಮದ ಬೆಳವಣಿಗೆಗೆ ಪೂರಕವಾಗಿ ಬಳಸಿಕೊಳ್ಳಲು ಮುಂದಾಗಿರುವ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆ(ಕೆಎಸ್ ಟಿಡಿಸಿ) ದಸರಾ ಸಂದರ್ಭದಲ್ಲಿ 2 ಟ್ರಿಪ್ ಗೋಲ್ಡನ್ ಚಾರಿಯಟ್ (ಸುವರ್ಣ ರಥ) ಅನ್ನು ಪರಿಚಯಿಸಲು ನಿರ್ಧರಿಸಿದೆ.
ಗಾಲಿಗಳ ಮೇಲಿನ ಸುವರ್ಣ ರಥ ಎಂದೇ ಕರೆಯುವ ಗೋಲ್ಡನ್ ಚಾರಿಯಟ್ ದಕ್ಷಿಣ ಸಕ್ರ್ಯೂಟ್ ನಲ್ಲಿ ಕರ್ನಾಟಕದ ಪ್ರಮುಖ ಪ್ರವಾಸಿ ಧಾಮಗಳನ್ನು ಸಂಪರ್ಕಿಸಲಾಗುತ್ತದೆ.

ಕೆಎಸ್ ನಿಸಾರ್ ಅಹ್ಮದ್ ರಿಂದ ಈ ಬಾರಿ ದಸರಾ ಉದ್ಘಾಟನೆ

7 ರಾತ್ರಿಗಳ ಈ ಪ್ರವಾಸದಲ್ಲಿ ಮೈಸೂರು ಅರಮನೆ, ಸುತ್ತಮುತ್ತಲಿನ ಪ್ರವಾಸಿ ತಾಣಗಳು, ಕಬಿನಿ ಹಿನ್ನೀರಿನಲ್ಲಿ ಮೋಜು, ಅರಣ್ಯ ಸಫಾರಿ, ವಿಜಯ ನಗರ ವೈಭವವನ್ನು ಸಾರುವ ಹಂಪಿ, ಬೀಚ್‍ಗಳಮನಮೋಹಕ ತಾಣ ಗೋವಾ ಭೇಟಿ ಇದ್ದು ಇದು ಪ್ರವಾಸವನ್ನು ಅವಿಸ್ಮರಣೀಯಗೊಳಿಸಲಿದೆ.

The Golden chariot is coming to Mysuru Dasara

ವಿದೇಶಿ ಪ್ರವಾಸಿಗರು ಹಾಗೂ ನೆರೆ ರಾಜ್ಯದ ಪ್ರವಾಸಿಗಳನ್ನು ಆಕರ್ಷಿಸುವ ಗೋಲ್ಡನ್ ಚಾರಿಯಟ್ ಅನ್ನು ದಸರಾ ದರ್ಶನಕ್ಕೆ ಅನುಗುಣವಾಗಿ ಆಯೋಜಿಸುತ್ತಿದ್ದು, ಇದು ದಸರಾದ ವೈಭವವನ್ನು ಹೆಚ್ಚಿಸಲಿದೆ. ಸಾಹಸ ಕ್ರೀಡೆ (ಅಡ್ವೆಂಚರ್ ಸ್ಪೋಟ್ರ್ಸ್)ಯನ್ನು ಏರ್ಪಡಿಸಿದೆ.

ಚಿತ್ರನಗರಿಗಾಗಿ ಮೀಸಲಿಟ್ಟಿರುವ ನಂಜನಗೂಡು ತಾಲ್ಲೂಕು ಇಮ್ಮಾವು ಗಾಮದಲ್ಲಿ ಪ್ಯಾರಾಸ್ಕೈಲಿಂಗ್ ಆಯೋಜಿಸಲಾಗಿದೆ. ಇದೇ ಮೊದಲ ಬಾರಿಗೆ ಪ್ರವಾಸೋದ್ಯಮ ದಸರಾ ಸಂದರ್ಭದಲ್ಲಿ 3 ಡಿ ಪ್ರೊಜೆಕ್ಷನ್ ಅನ್ನು ಪ್ರವಾಸೋದ್ಯಮ ಇಲಾಖೆ ವಿಶೇಷವಾಗಿ ಆಯೋಜಿಸುತ್ತಿದ್ದು, ಇದು ದಸರಾ ವೈಭವ ಹಾಗೂ ಮೈಸೂರಿನ ಇತಿಹಾಸವನ್ನು ಬಿಂಬಿಸಲಿದೆ.

ಇದೇ ಮೊದಲ ಬಾರಿಗೆ ಪ್ರವಾಸೋದ್ಯಮ ಇಲಾಖೆಯನ್ನು ದಸರಾ ಮಹೋತ್ಸವದ ಅವಿಭಾಜ್ಯ ಅಂಗವಾಗಿ ಪರಿಗಣಿಸಲಾಗಿದ್ದು, ಎಲ್ಲಾ ಆಹ್ವಾನ ಪತ್ರಿಕೆಗಳು, ಪ್ರಚಾರದಲ್ಲಿ ಪ್ರವಾಸೋದ್ಯಮ ಇಲಾಖೆಗೆ ಪಾಶಸ್ತ್ಯ ನೀಡಲಾಗಿದೆ. ಅದರ ಲಾಂಛನವನ್ನು ಬಳಸಲಾಗುತ್ತಿದೆ.

ದಸರಾ ಪ್ರಚಾರದ ಸಂಪೂರ್ಣ ಹೊಣೆ ಹೊತ್ತಿರುವ ಪವಾಸೋದ್ಯಮ ಇಲಾಖೆ ್ರ ದಸರಾವನ್ನು ಅನುಭವಿಸಿ, ಆಸ್ವಾದಿಸಿ, ಆನಂದಿಸಿ ಎಂಬ ಶೀರ್ಷಿಕೆಯಲ್ಲಿ ಪ್ರಚಾರದ ಭಿತ್ತಿ ಪತ್ರಗಳನ್ನು ಸಿದ್ಧಪಡಿಸಿದ್ದು, ಇದನ್ನು ಈಗಾಗಲೇ ದೇಶದ ವಿವಿಧ ವಿಮಾನ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು, ಬಸ್ ನಿಲ್ದಾಣಗಳಲ್ಲಿ ಪ್ರದರ್ಶಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka State Tourism Department (KSTDC) has decided to introduce 2 Trip Golden Chariot during Dasara.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ