ಪೇಜಾವರ ಶ್ರೀಗಳ ವಿರುದ್ಧ ಮೈಸೂರು ಮಾಜಿ ಮೇಯರ್ ಕಿಡಿ

Posted By: ಯಶಸ್ವಿನಿ
Subscribe to Oneindia Kannada

ಮೈಸೂರು, ನವೆಂಬರ್ 27 : ಉಡುಪಿಯಲ್ಲಿ ನಡೆದ ಧರ್ಮ ಸಂಸತ್ತಿನ ಮೂಲಕ ದೇಶದಲ್ಲಿರುವ ಸಾಮರಸ್ಯವನ್ನು ಕದಡಿ ಕೋಮುಭಾವನೆಯನ್ನು ಪೇಜಾವರ ಶ್ರೀಗಳು ಮೂಡಿಸುತ್ತಿದ್ದಾರೆಂದು ಮಾಜಿ ಮೇಯರ್ ಪುರುಷೋತ್ತಮ ತೀವ್ರ ವಾಗ್ದಾಳಿ ನಡೆಸಿದರು.

ಧರ್ಮ ಸಂಸತ್ತಿನಲ್ಲಿ ಅಷ್ಟಮಠದ ನಿಯಮಕ್ಕೆ ಪೇಜಾವರರಿಂದ ಅಪಚಾರ?

ಸೋಮವಾರ(ನ.27) ಪತ್ರಕರ್ತರ ಭವನದ ಗೋಷ್ಠಿಯಲ್ಲಿ ಮಾತನಾಡಿ, ಪೇಜಾವರ ಶ್ರೀಗಳು ಸಂವಿಧಾನದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ದೇಶಕ್ಕೆ ಅವಮಾನವೆಸಗಿದ್ದಾರೆ, ಸಂವಿಧಾನದ ಬಗ್ಗೆ ಅಸಮಾಧಾನವಿದ್ದರೆ ಬಹಿರಂಗ ಚರ್ಚೆ ಮಾಡೋಣ ಬನ್ನಿ ಎಂದು ಆಹ್ವಾನ ನೀಡಿದ ಅವರು, ಮೂಲ ನಿವಾಸಿಗಳ ತಾಳ್ಮೆಯನ್ನು ಪದೇ ಪದೇ ಪರೀಕ್ಷಿಸಲಾಗುತ್ತಿದ್ದು ನಾವು ಸಿಡಿದೆದ್ದರೆ ತರಗೆಲೆಗಳಂತೆ ಹುರಿದು ಹೋಗುವಿರಿ ಎಂದು ಆಕ್ರೋಶಭರಿತರಾಗಿ ನುಡಿದು, ದಲಿತರನ್ನು ಕೀಳಾಗಿ ಕಾಣುವ ಪೇಜಾವರ ಶ್ರೀಗಳ ನಡೆಗೆ ದಿಕ್ಕಾರವೆಂದರು.

ಕೇಂದ್ರ, ಉ.ಪ್ರ.ದಲ್ಲಿ ಮಂದಿರ ನಿರ್ಮಾಣಕ್ಕೆ ಪೂರಕ ಸರಕಾರ: ಪೇಜಾವರ ಶ್ರೀ

The condemnation of the anti-constitutional statements of Pajavar Shree

ಸಂವಿಧಾನದಲ್ಲಿ ಲೋಪವಿದ್ದರೆ ಆ ಬಗ್ಗೆ ಸಂಸತ್ ನಲ್ಲಿ ಚರ್ಚೆ ನಡೆಸಿ ತಿದ್ದುಪಡಿ ತರಬೇಕೆ ಹೊರತು ಹಾದಿ ಬೀದಿಯಲ್ಲಿ ಕೇವಲ ಪ್ರಚೋದನೆಗಾಗಿ ಸಂವಿಧಾನದ ಅಪಮಾನ ಮಾಡುವುದು ತರವಲ್ಲ, ದಲಿತರನ್ನು, ಅಲ್ಪ ಸಂಖ್ಯಾತರನ್ನು ದೂರ ಮಾಡುವ ಹಿಡನ್ ಅಜೆಂಡಾ ನಡೆಯುತ್ತಿದ್ದು ಇದನ್ನು ಕೈಗೂಡಲು ಬಿಡುವುದಿಲ್ಲವೆಂದ ಅವರು, ಸಂವಿಧಾನದ ಬಗ್ಗೆ ಬೃಹತ್ ಬಹಿರಂಗ ವೇದಿಕೆಯಲ್ಲಿ ಚರ್ಚಿಸೋಣ ಬನ್ನಿ ಎಂದು ಪಂಥಾಹ್ವಾನ ನೀಡಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The former Mysore Mayor Pusrushottam n has been a vocal critic of Pejavar Shree's allegation that the harmony was being made by the parliament.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ