ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶಿಕ್ಷಕರೇ ಸ್ವಯಂ ಸೇವಕರು

Posted By:
Subscribe to Oneindia Kannada

ಮೈಸೂರು, ನವೆಂಬರ್ 17: 83ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲೆಯ ಸುಮಾರು 2 ಸಾವಿರ ಶಿಕ್ಷಕರು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಸಮ್ಮೇಳನದ ಪೂರ್ವಸಿದ್ಧತೆ ಸಂಬಂಧ ಜಿಲ್ಲಾಧಿಕಾರಿ ರಂದೀಪ್ ಸಾರಥ್ಯದಲ್ಲಿ ನಡೆದ ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿ ಶಿವರಾಂ ಮಾಹಿತಿ ನೀಡಿದರು.

ಕನ್ನಡ ಸಾಹಿತ್ಯ ಸಮ್ಮೇಳನ ಆಮಂತ್ರಣದಲ್ಲಿಲ್ಲ ಮೈಸೂರು ಮೇಯರ್ ಹೆಸರು!

2 ಸಾವಿರ ಶಿಕ್ಷಕರನ್ನು ಸಮ್ಮೇಳನಕ್ಕೆ ನಿಯೋಜಿಸುತ್ತೇವೆ. ವೇದಿಕೆ, ವಸತಿ , ಸಾರಿಗೆ ಹಾಗೂ ಪುಸ್ತಕ ಮಳಿಗೆ ಸಂಬಂಧಿಸಿದ ಕೆಲಸ ಕಾರ್ಯಗಳಿಗೆ ಅವರನ್ನು ಬಳಸಿಕೊಳ್ಳಬಹುದು ಎಂದರು .ಆಹಾರ ಸಮಿತಿ ಹಾಗೂ ವಸತಿ ಸಮಿತಿಗೆ ಹೆಚ್ಚು ಸ್ವಯಂ ಸೇವಕರ ಅಗತ್ಯವಿದೆ ಎಂಬ ವಿಚಾರ ಸಭೆಯಲ್ಲಿ ಪ್ರಸ್ತಾಪವಾಯಿತು. ತಲಾ 1 ಸಾವಿರ ಸ್ವಯಂ ಸೇವಕರನ್ನು ನಿಯೋಜಿಸುವಂತೆ ಸಮಿತಿಗಳ ಅಧಿಕಾರಿಗಳು ಕೋರಿದರು.

Teachers are volunteers at a 83rd kannada literary conference

ಸ್ವಯಂಸೇವಕರಾಗಿ ಕಾರ್ಯ ನಿರ್ವಹಿಸಲಿರುವ ಶಿಕ್ಷಕರಿಗೆ ನವೆಂಬರ್ 20 ರಂದು ಕಲಾಮಂದಿರದಲ್ಲಿ ಎರಡು ಪಾಳಿಯಲ್ಲಿ ಮಾಹಿತಿ ನೀಡಬೇಕು. ಸ್ವಯಂ ಸೇವಕರನ್ನಾಗಿ ಎನ್ಎಸ್ಎಸ್, ಎನ್ ಸಿ ಸಿ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಬಹುದು. ಅಲ್ಲದೇ ಅವರಿಗೆ ಗುರುತಿನ ಚೀಟಿ, ಕ್ಯಾಪ್ ಒದಗಿಸಬೇಕು ಎಂದು ಸೂಚನೆ ನೀಡಿದರು.

ಪದವಿ ಪೂರ್ವ ಕಾಲೇಜುಗಳ ವತಿಯಿಂದ ಸುಮಾರು 300 ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಸಮ್ಮೇಳನದಲ್ಲಿ ಭಾಗವಹಿಸುವ ಅತಿಥಿಗಳಿಗೆ 72 ರಿಂದ 75 ಕೊಠಡಿ ಒದಗಿಸಲು ವಿವಿಧ ಶಾಲಾ - ಕಾಲೇಜುಗಳು ಮುಂದೆ ಬಂದಿವೆ. ಅಲ್ಲದೆ ಜೆಎಸ್ಎಸ್ ಮಠದಿಂದಲೂ ಕೊಠಡಿಗಳು ಲಭ್ಯವಾಗಲಿದೆ. ವಸತಿ ವ್ಯವಸ್ಥೆಯ ಬಗ್ಗೆ ಮಾಹಿತಿ ಇರುವ ಕಿರು ಪುಸ್ತಕ ಹೊರತರುವಂತೆ ರಂದೀಪ್ ಹೇಳಿದ್ದಾರೆ.

ಆಶಯ ಭಾಷಣ ಮಾಡುವುದಿಲ್ಲವೆಂದ ನಂಜರಾಜೇ ಅರಸ್
ಕನ್ನಡ ಸಾಹಿತ್ಯ ಪರಿಷತ್‌ನ ರಾಜ್ಯಾಧ್ಯಕ್ಷ ಮನು ಬಳಿಗಾರ ಅವರು ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ನಡೆದಿರುವ ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ನೀಡಿದ ಭರವಸೆಯನ್ನು ಈಡೇರಿಸದ ಕಾರಣ ಸಮ್ಮೇಳನದಲ್ಲಿ ಆಶಯ ಮಾಡುವುದಿಲ್ಲ ಎಂದು ಇತಿಹಾಸ ತಜ್ಞ ಪ್ರೊ.ಪಿ.ವಿ.ನಂಜರಾಜೇ ಅರಸ್‌ ಅವರು ತಿಳಿಸಿದ್ದಾರೆ.

ತಿಂಗಳ ಹಿಂದೆ ಮನು ಬಳಿಗಾರ್ ಅವರು ದೂರವಾಣಿ ಮಾಡಿ 'ಮೈಸೂರಿಗೆ ರಾಜರ ಕೊಡುಗೆ' ವಿಷಯದ ಕುರಿತು ಆಶಯ ಭಾಷಣ ಮಾಡುವಂತೆ ಕೋರಿದ್ದರು. ಈ ಸಂದರ್ಭ ವಿಜಯನಗರದಲ್ಲಿರುವ ಕಸಾಪದ ಕಟ್ಟಡದ ಬಾಡಿಗೆ ಹಣ ಯಾರಿಗೆ ಹೋಗುತ್ತಿದೆ ಎನ್ನುವ ಬಗ್ಗೆ ತನಿಖೆ ಆಗಬೇಕಿದೆ. ಬಳಿಕ ಆಶಯ ಭಾಷಣ ಮಾಡುತ್ತೇನೆ ಎಂದು ಮನು ಬಳಿಗಾರ್ ಅವರಿಗೆ ಹೇಳಿದ್ದೆ. ಅವರು ಮೈಸೂರಿಗೆ ಸಂದರ್ಭ ಈ ಬಗ್ಗೆ ಚರ್ಚೆ ಮಾಡುವುದಾಗಿ ತಿಳಿಸಿದ್ದರು. ಆದರೆ ಈ ಬಗ್ಗೆ ಗಮನ ಹರಿಸದೆ ಏಕಾಏಕಿ ಒಪ್ಪಿಗೆ ಪಡೆಯದೆ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಮುದ್ರಿಸಲಾಗಿದೆ. ಇದರಿಂದ ಬೇಸರವಾಗಿದೆ. ಸಿದ್ಧಾಂತ, ಕಸಾಪದ ಈ ಧೋರಣೆ ಖಂಡಿಸಿ ನಾನು ಆಶಯ ಭಾಷಣ ಮಾಡುತ್ತಿಲ್ಲ ಎಂದು ಪ್ರೊ.ಪಿ.ವಿ.ನಂಜರಾಜೇ ಅರಸ್‌ ಅವರು ಮನು ಬಳಿಗಾರ್‌ ಅವರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ. ಮಾಡುವುದಿಲ್ಲ ಎಂದು ಇತಿಹಾಸ ತಜ್ಞ ಪ್ರೊ.ಪಿ.ವಿ.ನಂಜರಾಜೇ ಅರಸ್‌ ಅವರು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In the 83rd Kannada Sahitya Sammelanama, about 2,000 teachers in the Mysusru district will be volunteers on 24th to 26th November.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ