ದಸರಾ ಹಬ್ಬಕ್ಕಾಗಿ ಮೈಸೂರಿಗೆ ತತ್ಕಾಲ್ ರೈಲು ಓಡಲಿದೆ!

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 04: ನೈಋತ್ಯ ವಲಯದಿಂದ ದಸರಾ ಹಬ್ಬದ ಸಂದರ್ಭದಲ್ಲಿ ತತ್ಕಾಲ್ ರೈಲು ಓಡಿಸುತ್ತಿದೆ.ಹಂಪಿ ಎಕ್ಸ್ ಪ್ರೆಸ್, ಹುಬ್ಬಳ್ಳಿ-ತಿರುಪತಿ ಫಾಸ್ಟ್ ಪ್ಯಾಸೆಂಜರ್ ರೈಲು ಕೊಪ್ಪಳದಲ್ಲಿ ತಾತ್ಕಾಲಿಕ ನಿಲುಗಡೆ ಕೊಡಲಿವೆ.

ಕೊಪ್ಪಳ: ಸಂಸದ ಕರಡಿ ಸಂಗಣ್ಣ ಅವರು ಬನ್ನಿಕೊಪ್ಪ ರೈಲೈ ನಿಲ್ದಾಣದಲ್ಲಿ ಈ ಎರಡು ರೈಲುಗಳ ನಿಲುಗಡೆಗೆ ರೈಲ್ವೆ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನೆಲೆ ರೈಲ್ವೆ ಇಲಾಖೆ ಸಮ್ಮತಿಸಿದ್ದು, ಅಕ್ಟೋಬರ್ 5 ರಿಂದ ಹಂಪಿ ಎಕ್ಸ್ ಪ್ರೆಸ್ ಗಾಡಿ ಸಂಖ್ಯೆ-16591/16592 ಹಾಗೂ ಹುಬ್ಬಳ್ಳಿ-ತಿರುಪತಿ ಫಾಸ್ಟ್ ಪ್ಯಾಸೆಂಜರ್ ಗಾಡಿ ಸಂಖ್ಯೆ-57273/57274 ರೈಲುಗಳು ನಿಲುಗಡೆಯಾಗುವಂತೆ ರೈಲ್ವೆ ಇಲಾಖೆ ವೇಳಾಪಟ್ಟಿ ಪ್ರಕಟಿಸಿದೆ.

ಪ್ರಯಾಣಿಕರ ಅನುಕೂಲಕ್ಕಾಗಿ ಹಂಪಿ ಎಕ್ಸ್ ಪ್ರೆಸ್ ರೈಲಿಗೆ ಹೆಚ್ಚುವರಿಯಾಗಿ 3 ಎಸಿ ಮತ್ತು 1 ಸ್ಲೀಪರ್ ರಿಜರ್ವೆಶನ್ ಬೋಗಿಗಳನ್ನು ಜೋಡಣೆ ಮಾಡಲು ಇಲಾಖೆ ಕ್ರಮ ವಹಿಸಿದೆ.

Tatkal trains for festival | Hampi Express and Tirupathi rain Trains stoppage at Koppal SWR Zone

ತತ್ಕಾಲ್ ರೈಲು: ಅಕ್ಟೋಬರ್ 31ರ ತನಕ ಈ ತತ್ಕಾಲ್ ರೈಲು ಸೌಲಭ್ಯ ಲಭ್ಯ. ಸಿಕಂದರಾಬಾದ್ -ಮೈಸೂರು- 07073 -ಸಿಕಂದರಾಬಾದ್= ಮೈಸೂರು ವಿಶೇಷ ರೈಲು ಭಾನುವಾರದಂದು ಸಿಕಂದರಾಬಾದ್ ಪ್ರತಿ ಭಾನುವಾರ 9 PM ಗೆ ಹೊರಟು ಮೈಸೂರನ್ನು ಸೋಮವಾರ 12.15 PM ಗೆ ತಲುಪಲಿವೆ.

ಇದು 15 ಕೋಚ್ ಗಳುಳ್ಳ ಎಸಿ 2 ಟಯರ್, 3 ಟಯರ್, 10 ಸ್ಲೀಪರ್ ಕ್ಲಾಸ್ ಕೋಚ್ ಹಾಗೂ 2 ಸೆಕೆಂಡ್ ಕ್ಲಾಸ್ ಲಗೇಜ್ ಕಮ್ ಬ್ರಕೆವಾನ್ ಗಳನ್ನು ಹೊಂದಿವೆ.

ಮೈಸೂರಿನಿಂದ 07074 ರೈಲು 6.15 PM ಪ್ರತಿ ಸೋಮವಾರದಂದು ಬಿಡಲಿದ್ದು, ಸಿಕಂದರಾಬಾದ್ 10 AM ಮಂಗಳವಾರ ತಲುಪಲಿದೆ.

ನಿಲ್ದಾಣಗಳು: ಲಿಂಗಂಪಲ್ಲಿ, ಯಾದಗಿರಿ, ರಾಯಚೂರು, ಮಂತ್ರಾಲಯ ರಸ್ತೆ, ಅದೋನಿ, ಗುಂತಕಲ್, ಅನಂತಪುರ, ಧರ್ಮಾವರಂ, ಹಿಂದೂಪುರ, ಯಶವಂತಪುರ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ ಬೆಂಗಳೂರು ಹಾಗೂ ಮಂಡ್ಯ (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
South-Western Railways will operate a tatkal special train between Secunderabad and Mysuru till October 31. and Hampi Express and Tirupathi rain Trains stoppage at Bannikoppa, Koppal from October 05.
Please Wait while comments are loading...