ಸಾಹಿತ್ಯ ಸಮ್ಮೇಳನದಲ್ಲಿ ಅಕ್ಷರದ ಘಮಲಿನೊಂದಿಗೆ ನಾಲಿಗೆಗೆ ಭೂರಿಭೋಜನ

Posted By:
Subscribe to Oneindia Kannada

ಮೈಸೂರು, ನವೆಂಬರ್ 6 :ಸಾಂಸ್ಕೃತಿಕ ನಗರಿ ಎಂದಾಗಲೇ ಮೊದಲು ಮೂಡುವುದು ಆತಿಥ್ಯದ ಅತಿಥಿಯ ಸ್ಥಾನದಲ್ಲಿ. ಇದೇ ನವೆಂಬರ್ 24 ರಿಂದ ನಡೆಯಲಿ ರುವ ಕನ್ನಡ ಹಬ್ಬ' 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅದ್ಧೂರಿ ಹಾಗೂ ಅರ್ಥಗರ್ಭಿತವಾಗಿ ನಡೆಸಲು ರಾಜ್ಯ ಸರ್ಕಾರ ಸಜ್ಜಾಗಿದೆ.

83ನೇ ಕನ್ನಡ ಸಾಹಿತ್ಯ ಸಮ್ಮೇಳನದ ಹೆಸರಿನಲ್ಲಿ ಅಕ್ರಮ ವಸೂಲಿ?

ಸಹಾಯವಾಣಿ ವ್ಯವಸ್ಥೆಗೆ ತಯಾರಿ :
ನಗರಕ್ಕೆ ದೂರದೂರಿನಿಂದ ಆಗಮಿಸುವ ಕನ್ನಡಾಭಿಮಾನಿಗಳಿಗಾಗಿ ವಸತಿ, ಸಾರಿಗೆ, ಆಹಾರ ಸಮಿತಿ ಕೆಲಸಗಳು ಮಹತ್ವ ದ್ದಾಗಿದ್ದು, ಸಮ್ಮೇಳನಕ್ಕೆ ಬರುವ ಪ್ರತಿನಿಧಿಗಳು, ಸಾಹಿತಿಗಳು ಅವರ ವಾಸ್ತವ್ಯದ ವ್ಯವಸ್ಥೆ ಬಗ್ಗೆ ತಿಳಿದುಕೊಳ್ಳಲು ಬಸ್ ಹಾಗೂ ರೈಲ್ವೆ ನಿಲ್ದಾಣದ ಬಳಿಯೇ ಮಾಹಿತಿ ಕೇಂದ್ರ ಹಾಗೂ ಸಹಾಯವಾಣಿ ತೆರೆಯಬೇಕೆಂದು ಈಗಾಗಲೇ ಸಭೆ ನಡೆಸಿ ಜಿಲ್ಲಾಡಳಿತ ಸೂಚನೆ ನೀಡಿದೆ. ಸಂಜೆ 6ರಿಂದ ರಾತ್ರಿ 9ರವರೆಗೆ 6 ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಮುಖ್ಯವೇದಿಕೆಯಲ್ಲಿ 12, ಉಳಿದ ವೇದಿಕೆಗಳಲ್ಲಿ 75 ನಾಡು, ನುಡಿ, ಕಲೆ, ಸಂಸ್ಕೃತಿ ಕುರಿತ ಕಾರ್ಯಕಮಗಳನ್ನು ಆಯೋಜಿಸಲಾಗಿದೆ.

ಸಮ್ಮೇಳನದ ಸಭಾಂಗಣಕ್ಕೆ ನಾಲ್ವಡಿ ಕೃಷ್ಣರಾಜರ ಹೆಸರು :
ಸಮ್ಮೇಳನ ಸ್ಥಳಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣ ಎಂದು, ಕುವೆಂಪು ವೇದಿಕೆ, ಮಲೆ ಮಹದೇಶ್ವರ ಮಹಾದ್ವಾರ ಎಂದೂ ಹೆಸರಿಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ

Tasty foods will be there in Kannada Sahitya Sammelana in Mysuru

ಸಮ್ಮೇಳನದ ಸರ್ವಾಧ್ಯಕ್ಷ ಪೊ.ಚಂದ್ರಶೇಖರ ಪಾಟೀಲ (ಚಂಪಾ) ಅವರನ್ನು ಅದ್ಧೂರಿ ಮೆರವಣಿಗೆ ಮೂಲಕ ಕರೆತರಲಾಗುವುದು. ಕೋಟೆ ಆಂಜನೇಯಸ್ವಾಮಿ ದೇವಾಲಯದಿಂದ ಹೊರಡುವ ಮೆರವಣಿಗೆಯಲ್ಲಿ 600 ಕಲಾವಿದರು ಪಾಲ್ಗೊಳ್ಳಲಿದ್ದಾರೆ., ವಿವಿಧ ಜನಪದ ಕಲಾಪ್ರಕಾರಗಳು, ಸ್ತಬ್ಧಚಿತ್ರಗಳು, ವಾದ್ಯವೃಂದ ಮೆರವಣಿಗೆಯಲ್ಲಿ ಸಾಗಲಿವೆ ಎಂದು ವಿವರಿಸಿದರು. ಸಭೆಯಲ್ಲಿ ಕನ್ನಡ ಸಂಘಟನೆಗಳ ಪದಾಧಿಕಾರಿಗಳು, ಸಾಹಿತಿಗಳು, ಅಧಿಕಾರಿಗಳು ಅನೇಕ ಸಲಹೆ ಸೂಚನೆಗಳನ್ನು ನೀಡಿದ್ದು, ಅವನ್ನೆಲ್ಲಾ ಪರಿಗಣಿಸಿ ಕೆಲವು ಮಾರ್ಪಾಡುಗಳನ್ನು ಮಾಡಲಾಗಿದೆ.

ಸಮ್ಮೇಳನದಲ್ಲಿ ಭೂರಿ ಭೋಜನ:
ನ.24ರಿಂದ 26ರವರೆಗೆ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವವರಿಗೆ ಶುಚಿ ರುಚಿ ಊಟ ಉಣಬಡಿಸಲು ಪಟ್ಟಿ ಸಿದ್ಧವಾಗಿದೆ. ಗಣ್ಯರಿಗೆ, ನೋಂದಾಯಿಸಿಕೊಂಡವರಿಗೆ ಹಾಗೂ ಸಾರ್ವಜನಿಕರಿಗೆ ಒಂದೇ ಬಗೆ ಊಟವಿರುತ್ತದೆ. ಆದರೆ, 3 ಪ್ರತ್ಯೇಕ ಸ್ಥಳಗಳಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ.

ಸಾಹಿತ್ಯ ಸಮ್ಮೇಳನಕ್ಕೆ ದಿನಗಣನೆ ಶುರು: ಅಕ್ಷರ ಜಾತ್ರೆಗೆ ಕುಂದಿತೇ ಉತ್ಸಾಹ!?

ಮೆನು ಇಂತಿದೆ :
ನ.24: ಬೆಳಿಗ್ಗೆ ಉಪಹಾರ-ಇಡ್ಲಿ, ವಡೆ, ಖಾರಪೊಂಗಲ್, ಕಾಫಿ/ಟೀ,
ಮಧ್ಯಾಹ್ನದ ಊಟ-ರಾಗಿ ಮುದ್ದೆ, ಹುರುಳಿಕಟ್ಟು, ಕಜ್ಜಾಯ, ಬಾಳೆಹಣ್ಣು, ಮೆಂತ್ಯ ಬಾತ್, ಅನ್ನ ಸಾಂಬಾರ್, ತಿಳಿಸಾರು, ಮಜ್ಜಿಗೆ, ಹಪ್ಪಳ, ಉಪ್ಪಿನಕಾಯಿ.

ರಾತ್ರಿ: ಊಟ-ಪೂರಿ, ಸಾಗು, ಅಕ್ಕಿ ಪಾಯಸ, ಅನ್ನ ಸಾಂಬಾರ್, ತಿಳಿಸಾರು, ಗಟ್ಟಿ ಮಜ್ಜಿಗೆ, ಹಪ್ಪಳ ಉಪ್ಪಿನಕಾಯಿ,

ನ.25ರ ಮಧ್ಯ ದಿನ:
ಬೆಳಿಗ್ಗೆ ಉಪಹಾರ- ಉಪ್ಪಿಟ್ಟು, ಕೇಸರಿಬಾತ್, ಮಸಾಲೆ ವಡೆ ಕಾಫಿ/ಟೀ
ಮಧ್ಯಾಹ್ನದ ಊಟ-ಚಪಾತಿ, ಈರನಗೆರೆ ಬದನೆಕಾಯಿ ಪಲ್ಯ, ಹೋಳಿಗೆ, ತುಪ್ಪ, ಮೇಲುಕೋಟೆ ಪುಳಿಯೋಗರೆ, ಅನ್ನ ಸಾಂಬರ್, ತಿಳಿಸಾರು, ಗಟ್ಟಿ ಮಜ್ಜಿಗೆ, ಹಪ್ಪಳ ಉಪ್ಪಿನಕಾಯಿ.

ರಾತ್ರಿ ಊಟ- ಸಿರಿಧಾನ್ಯ ಪಾಯಸ, ವೆಜ್ ಪಲಾವ್, ಅನ್ನ ಸೊಪ್ಪಿನ ಸಾಂಬಾರ್, ತಿಳಿಸಾರು, ಗಟ್ಟಿ ಮಜ್ಜಿಗೆ, ಹಪ್ಪಳ ಉಪ್ಪಿನಕಾಯಿ.

ನ.26ರ ಕೊನೆಯ ದಿನ :
ಬೆಳಿಗ್ಗೆ ಉಪಾಹಾರ- ಶಾವಿಗೆ ಬಾತ್, ರೈಸ್‍ಬಾತ್, ಚಟ್ನಿ, ಕಾಫಿ/ಟೀ.
ಮಧ್ಯಾಹ್ನದ ಊಟ-ರಾಗಿ/ಜೋಳ/ಅಕ್ಕಿ ರೊಟ್ಟಿ, ಮೈಸೂರು ಪಾಕ್, ಕಡಲೆಹುಳಿ, ಹುಚ್ಚೆಳ್ಳಿನ ಚಟ್ನಿ, ಬಿಸಿಬೇಳೆ ಬಾತ್, ಅನ್ನ ಸಾಂಬಾರ್, ರಸಂ, ಗಟ್ಟಿ ಮಜ್ಜಿಗೆ, ಹಪ್ಪಳ ಉಪ್ಪಿನಕಾಯಿ.
ರಾತ್ರಿ ಊಟ- ವಾಂಗಿಬಾತ್, ರಾಯ್ತ, ಲಡ್ಡು, ಅನ್ನ ಸಾಂಬಾರ್, ತಿಳಿಸಾರು, ಹಪ್ಪಳ ಉಪ್ಪಿನಕಾಯಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
People who come to attend 83rd Kannada sahitya sammelana will have tasty dishes of North Karnataka style. The sammelana will be taking place in Mysuru from November 24 to26.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ