ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶ್ರೀರಂಗಪಟ್ಟಣದ ದರಸಗುಪ್ಪೆ ಬೆಣ್ಣೆಇಡ್ಲಿ ಸೂಪರೋ.. ರಂಗ!

By ಬಿ.ಎಮ್.ಲವಕುಮಾರ್
|
Google Oneindia Kannada News

ತಟ್ಟೆ ಇಡ್ಲಿ, ಮಲ್ಲಿಗೆ ಇಡ್ಲಿ, ರವೆ ಇಡ್ಲಿ ಮೊದಲಾದ ಇಡ್ಲಿ ಬಗ್ಗೆ ನೀವು ಕೇಳಿರಬಹುದು. ಅಷ್ಟೇ ಅಲ್ಲ ಅವುಗಳ ರುಚಿಯನ್ನು ಸವಿದಿರಲೂ ಬಹುದು. ಆದರೆ ದರಸಗುಪ್ಪೆ ಬೆಣ್ಣೆ ಇಡ್ಲಿ ಹೆಸರು ಕೇಳಿದ್ದೀರಾ? ಅದರ ರುಚಿಯನ್ನು ಸವಿದಿದ್ದೀರಾ? ಅಚ್ಚರಿಯಾಗಿರಬಹುದಲ್ಲವೇ? ಇದ್ಯಾವುದಪ್ಪಾ ನಾವು ಕೇಳದ ದರಸಗುಪ್ಪೆ ಬೆಣ್ಣೆ ಇಡ್ಲಿ ಅಂಥ.

ಇಷ್ಟಕ್ಕೂ ಇದೇನಪ್ಪಾ ದರಸಗುಪ್ಪೆ ಬೆಣ್ಣೆ ಇಡ್ಲಿ ಅಂಥ ತಲೆಕೆಡಿಸಿಕೊಳ್ಳಬೇಡಿ. ಅಷ್ಟೇ ಅಲ್ಲ ಯಾವುದೋ ದೊಡ್ಡ ಹೋಟೆಲ್‍ ನ ಇಡ್ಲಿ ಇದಾಗಿರಬಹುದು ಎಂದು ಕಲ್ಪಿಸಿಕೊಳ್ಳಬೇಡಿ. ಶ್ರೀರಂಗಪಟ್ಟಣಕ್ಕೆ ಬಂದು ದಾರಿ ಕೇಳಿದರೆ ದರಸಗುಪ್ಪೆ ಗ್ರಾಮದ ದಾರಿ ಮತ್ತು ಅಲ್ಲಿನ ಪುಟ್ಟ ಹೋಟೆಲ್‍ ತೋರಿಸುತ್ತಾರೆ. ಅದೇ ದರಸಗುಪ್ಪೆ ಶಿವಣ್ಣನ ಬೆಣ್ಣೆ ಇಡ್ಲಿ ಸೆಂಟರ್.

ನೀವು ಶ್ರೀರಂಗಪಟ್ಟಣಕ್ಕೆ ಬಂದು ದರಸಗುಪ್ಪೆ ಗ್ರಾಮದ ಶಿವಣ್ಣ ಎಂಬುವರ ಹೋಟೆಲ್‍ನಲ್ಲಿ ತಯಾರಾಗೋ ಈ ಇಡ್ಲಿ ತಿನ್ನೋಕೆ ಮೈಸೂರು ಸೇರಿದಂತೆ ಸುತ್ತಮುತ್ತಲ ಪ್ರದೇಶದ ನೂರಾರು ಗ್ರಾಹಕರು ಬರುತ್ತಾರೆ. ಕಾರಣ ಇಲ್ಲಿನ ಜನಕ್ಕೆ ದರಸಗುಪ್ಪೆ ಬೆಣ್ಣೆ ಇಡ್ಲಿ ಅಂದರೆ ಪಂಚಪ್ರಾಣ. ಈಗಾಗಲೇ ರುಚಿ ಮತ್ತು ಶುಚಿಯ ಮೂಲಕ ಸುತ್ತಮುತ್ತಲ ಜನರಲ್ಲಿ ಮನೆಮಾತಾಗಿರುವ ದರಸಗುಪ್ಪೆ ಬೆಣ್ಣೆ ಇಡ್ಲಿಗಾಗಿ ಜನ ಸರತಿ ಸಾಲಿನಲ್ಲಿ ನಿಲ್ಲುತ್ತಾರೆ.

ಸುಮಾರು 65 ರ ಆಸುಪಾಸಿನ ಶಿವಣ್ಣ ಹಲವು ವರ್ಷಗಳಿಂದ ಬೆಣ್ಣೆ ಇಡ್ಲಿ ತಯಾರಿಸುತ್ತಾ ಬಂದಿದ್ದಾರೆ. ಪುಟ್ಟದಾದ ಕೊಠಡಿಯಲ್ಲಿ ಹೋಟೆಲ್ ಆರಂಭಿಸಿದ ಇವರು ರುಚಿ ಮತ್ತು ಶುಚಿಗೆ ಆದ್ಯತೆ ನೀಡಿದರಲ್ಲದೆ, ಗ್ರಾಹಕರಿಗೆ ಕಡಿಮೆ ಬೆಲೆಗೆ ಹೊಟ್ಟೆ ತುಂಬುವಂತೆ ಇಡ್ಲಿ ನೀಡಲು ಆರಂಭಿಸಿದರು.

ಬೆಣ್ಣೆ ಇಡ್ಲಿಯ ವಿಶೇಷತೆ

ಬೆಣ್ಣೆ ಇಡ್ಲಿಯ ವಿಶೇಷತೆ

ಬೆಣ್ಣೆ ಹಾಕಿರುವ ಚಟ್ನಿಯನ್ನು ಮಿಶ್ರಮಾಡಿ ಇಡ್ಲಿಯನ್ನು ಅದಕ್ಕೆ ಅದ್ದಿ ತಿಂದರೆ ಅದರ ರುಚಿಗೆ ಮಾರುಹೋಗುವುದರಲ್ಲಿ ಸಂಶಯವೇ ಇಲ್ಲ. ಹೋಟೆಲ್ ಚಿಕ್ಕದಾಗಿದ್ದರೂ ಗ್ರಾಹಕರು ಇಡ್ಲಿ ತಿನ್ನಲು ಮುಗಿಬೀಳುತ್ತಾರೆ. ಮೊದಲಿನಿಂದಲೂ ಅದೇ ರುಚಿಯನ್ನು ಉಳಿಸಿಕೊಂಡು ಬಂದಿದ್ದಾರೆ.

ದರಸಗುಪ್ಪೆ ಬೆಣ್ಣೆ ಇಡ್ಲಿ ಫೇಮಸ್

ದರಸಗುಪ್ಪೆ ಬೆಣ್ಣೆ ಇಡ್ಲಿ ಫೇಮಸ್

ಈ ಊರಿನ ಪುಟ್ಟ ಹೋಟೆಲ್‍ನಲ್ಲಿ ಸಿಗೋ ಬೆಣ್ಣೆ ಇಡ್ಲಿ ರುಚಿಗೆ ಗ್ರಾಹಕರು ಮನಸೋತಿದ್ದಾರೆ. ಅಲ್ಲದೆ ಈ ಬೆಣ್ಣೆ ಇಡ್ಲಿಗೆ ಕೊಡುವ ಕಾಸು ಕೇವಲ 20 ರೂ. ಮಾತ್ರ. ಈ 20 ರೂ.ಗೆ 8 ಇಡ್ಲಿ ಜೊತೆಗೆ ಒಂಚೂರು ಬೆಣ್ಣೆ ಕೊಡಲಾಗುತ್ತೆ. ಬೆಣ್ಣೆ ಜೊತೆ ಚಟ್ನಿ ಮಿಕ್ಸ್ ಮಾಡ್ಕೊಂಡು ತಿನ್ನುತ್ತಿದ್ದರೆ ಮತ್ತೊಂದು ಪ್ಲೇಟ್ ಇಡ್ಲಿ ತಿನ್ನದೇ ಹೋಗೋಕೆ ಮನಸೇ ಬರಲ್ಲ. ಅಷ್ಟು ರುಚಿ-ಶುಚಿಯಾಗಿರುತ್ತದೆ ಎನ್ನುತ್ತಾರೆ ಇಲ್ಲಿಗೆ ಬರುವ ಗ್ರಾಹಕರು.

ಒಂದು ಪ್ಲೇಟ್ ಗೆ ಎಷ್ಟು?

ಒಂದು ಪ್ಲೇಟ್ ಗೆ ಎಷ್ಟು?

ತಟ್ಟೆಗೆ ಎಂಟು ಇಡ್ಲಿ ಹಾಕಿ ಒಂದಷ್ಟು ಚಟ್ನಿ ಹಾಕಿ ಅದರ ಮೇಲೊಂದು ಚೂರು ಬೆಣ್ಣೆ ಹಾಕಿ ಗ್ರಾಹಕರಿಗೆ ನೀಡುತ್ತಾರೆ. ಇಷ್ಟಕ್ಕೆ 20 ರೂ ತೆಗೆದುಕೊಳ್ಳುತ್ತಾರೆ. ಅಂದರೆ ಕೇವಲ 20 ರೂಪಾಯಿಗೆ ಒಂದು ಪ್ಲೇಟ್ ಬೆಣ್ಣೆ ಇಡ್ಲಿ ಇವರ ಬಳಿ ಸಿಗುತ್ತದೆ. ಹೀಗಾಗಿ ಗ್ರಾಹಕರು ಹುಡುಕಿಕೊಂಡು ಬಂದು ಇಡ್ಲಿ ಸಿಗೋ ತನಕ ಕಾದು ತಿಂದು ಹೋಗುತ್ತಾರೆ.

ಬೆಣ್ಣೆ ಇಡ್ಲಿ ಸವಿಯಲು ಹೋಗುವ ಮಾರ್ಗ

ಬೆಣ್ಣೆ ಇಡ್ಲಿ ಸವಿಯಲು ಹೋಗುವ ಮಾರ್ಗ

ನೀವೂ ಶ್ರೀರಂಗಪಟ್ಟಣಕ್ಕೆ ಬಂದು ದರಸಗುಪ್ಪೆ ಗ್ರಾಮದ ಶಿವಣ್ಣನ ಬೆಣ್ಣೆ ಇಡ್ಲಿ ಬಗ್ಗೆ ಕೇಳಿ ನೋಡಿ ಜನ ದಾರಿ ತೋರಿಸುತ್ತಾರೆ. ಇನ್ನೇಕೆ ತಡ ನೀವೂ ಒಂದು ಸಲಾ ದರಸಗುಪ್ಪೆಗೆ ಹೋಗಿ ಈ ಇಡ್ಲಿ ರುಚಿ ಸವಿದು ಬನ್ನಿ.

English summary
Dasaraguppe a small town near Srirangapatna is becoming hot hub for Idly lovers. Shivanna's small canteen is very famous for Butter Idly. Here is an article about he Shivanna's journey
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X