ಮೈಸೂರಲ್ಲಿ ತಮಿಳು ಚಿತ್ರೀಕರಣಕ್ಕೆ ಕರವೇ ಕಾರ್ಯಕರ್ತರ ತಡೆ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಸೆಪ್ಟೆಂಬರ್ 13: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪ್ರತಿಭಟನೆ, ತಮಿಳು ಚಿತ್ರೀಕರಣಕ್ಕೆ ಅಡ್ಡಿಪಡಿಸಿರುವುದು ಹೊರತು ಪಡಿಸಿದಂತೆ ಯಾವುದೇ ಅಹಿತಕರ ಘಟನೆ ನಡೆದ ವರದಿಗಳಾಗಿಲ್ಲ.

ಇಡೀ ನಗರ ಸದ್ಯದ ಮಟ್ಟಿಗೆ ಶಾಂತಿಯುತವಾಗಿದೆ. ಮಂಗಳವಾರ ಬಕ್ರೀದ್ ಹಿನ್ನೆಲೆಯಲ್ಲಿ ಅಂಗಡಿಗಳನ್ನು ಬಂದ್ ಮಾಡಿದ್ದರಿಂದ ಕೆಲವೆಡೆ ಬಿಕೋ ಎನ್ನುವಂತೆ ವಾತಾವರಣ ಇತ್ತು. ಕೆಲ ಸಂಘಟನೆಗಳು ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿವೆ. ನಗರದಲ್ಲಿ 144 ಸೆಕ್ಷನ್ ಜಾರಿಯಲ್ಲಿರುವ ಕಾರಣ ಸದ್ಯ ಯಥಾಸ್ಥಿತಿಯಲ್ಲಿದೆ.['ಗಂಟೆಗೊಂದು ಮಾತಾಡುವ ಸಿದ್ದರಾಮಯ್ಯನ್ನ ನಾವು ನಂಬಲ್ಲ']

Protest

ತಾಲೂಕು ಕೇಂದ್ರಗಳಲ್ಲೂ ಯಾವುದೇ ಅಹಿತಕರ ಘಟನೆ ನಡೆದ ಬಗ್ಗೆ ವರದಿಯಾಗಿಲ್ಲ. ಈ ಮಧ್ಯೆ ಮೈಸೂರಿನ ಲಲಿತಮಹಲ್ ಅರಮನೆಯಲ್ಲಿ ತಮಿಳು ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ವಿಷಯ ತಿಳಿದ ಕರವೇ ಕಾರ್ಯಕರ್ತರು ಮಾದೇಶ ಅವರ ನೇತೃತ್ವದಲ್ಲಿ ತೆರಳಿ, ಚಿತ್ರೀಕರಣಕ್ಕೆ ಅಡ್ಡಿಪಡಿಸಿದ್ದಾರೆ.

ನಟ ರಾಘವ ಲಾರೆನ್ಸ್ ಹಾಗೂ ನಟಿ ಭಾನುಪ್ರಿಯ 'ಶಿವಲಿಂಗ' ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ನಟ ಶಿವರಾಜ್ ಕುಮಾರ್ ಅಭಿನಯದ ಶಿವಲಿಂಗ' ಸಿನಿಮಾದ ತಮಿಳು ರಿಮೇಕ್ ನ ಚಿತ್ರೀಕರಣ ಇದಾಗಿತ್ತು. ಚಿತ್ರೀಕರಣವು ಕೆಲವು ದಿನಗಳಿಂದ ಮೈಸೂರು ಸುತ್ತಮುತ್ತ ನಡೆಯುತ್ತಿತ್ತು. ಗಲಾಟೆ ಹಿನ್ನಲೆಯಲ್ಲಿ ಲಲಿತ್ ಮಹಲ್ ನಲ್ಲಿ ತಂಡ ತಂಗಿತ್ತು.[ಕಾವೇರಿ ಕಿಚ್ಚು : ಸಿದ್ದರಾಮಯ್ಯ ಪತ್ರಿಕಾಗೋಷ್ಠಿ ವಿವರ]

Mysuru

ಅಲ್ಲದೆ ಅಲ್ಲಿ ಚಿತ್ರೀಕರಣಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದರು. ಇದನ್ನು ಅರಿತ ಕರವೇ ಕಾರ್ಯಕರ್ತರು ಸ್ಥಳಕ್ಕೆ ತೆರಳಿ, ಪ್ರತಿಭಟನೆ ನಡೆಸಿ ಬಾವುಟ ಕಿತ್ತು ಹಾಕಿದರು. ಬೆಂಕಿ ಹಾಕುವ ಪ್ರಯತ್ನ ಮಾಡಿದರಾದರೂ ಪೊಲೀಸರು ತಡೆದು, ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ಲಾಠಿ ಚಾರ್ಜ್ ಮಾಡಿ ಕಾರ್ಯಕರ್ತರನ್ನು ಚದುರಿಸಿದ್ದಾರೆ. ಸದ್ಯ ಲಲಿತ್ ಮಹಲ್ ಪ್ಯಾಲೆಸ್ ಗೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Tamil movie 'Shivalinga' shooting interupted by Karave protesters in Lalithamahal, Mysuru. This movie is the remake of Kannada movie 'Shivalinga'.
Please Wait while comments are loading...