ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿರುವ ಜಯಲಲಿತಾ ಮನೆ ಈಗ ಏನಾಗಿದೆ?

By ಯಶಸ್ವಿನಿ ಎಂ.ಕೆ, ಮೈಸೂರು
|
Google Oneindia Kannada News

ಮೈಸೂರು, ಡಿಸೆಂಬರ್. 07 : ಜೆ.ಜಯಲಲಿತಾ ನಮ್ಮನಗಲಿದ್ದಾರೆ. ಅವರು ಹುಟ್ಟಿ ಆಡಿ ಬೆಳೆದ ಊರು ಮೈಸೂರು. ಸಾಂಸ್ಕೃತಿಕ ನಗರಿ ಮೈಸೂರಿನದ್ದು ಹಾಗೂ ಜಯಾರವರದ್ದು ಅವಿನಾಭಾವ ನಂಟು. ಈಗ ಏನಾಗಿವೆ. ಆ ಮನೆಯಲ್ಲಿ ಈಗ ಯಾರಿದ್ದಾರೆ ಎಂಬುವುದನ್ನು ಒಂದಿಷ್ಟು ಮಾಹಿತಿ ಇಲ್ಲಿದೆ.

ಅವರು ಆಡಿ ಬೆಳೆದ ಮೈಸೂರಿನ ಲಕ್ಷ್ಮಿಪುರಂನ ಎರಡನೇ ಮೇನ್ ನಲ್ಲಿದ್ದ ಲಲಿತಾ ವಿಲಾಸ, ರಾಮವಿಲಾಸ ಮನೆಗಳು ಹಾಗೂ ಸರಸ್ವತಿಪುರಂನ ಮೊದಲನೇ ಮೇನ್ ನ 3ನೇ ಕ್ರಾಸ್‌ನಲ್ಲಿರುವ ಮನೆಯನ್ನು ಜಯಲಲಿತಾಗೆಂದೇ ಖರೀದಿಸಿದ್ದರೂ ಅವರ ಪೋಷಕರು. ಜಯಲಲಿತಾ ಅವರಿಗೆ ಖರೀದಿಸಿದ್ದ ಮನೆ ಈಗಿನ ಸ್ಥಿತಿ ಕೇಳಿದಲ್ಲಿ ಒಮ್ಮೆ ನೀವು ದಿಗ್ಬ್ರಾಂತರಾಗೊದಂತೂ ನಿಜ. [ಚಿತ್ರಗಳಲ್ಲಿ: ಜಯಲಲಿತಾಗೂ ಮೈಸೂರಿಗೂ ಅವಿನಾಭಾವ ಸಂಬಂಧ]

Take a look at Jayalalithaa's ancestral houses in Mysuru

ನಂ940 ಸ್ವರ್ಣ ವಿಲಾಸ ಹೆಸರಿನ ಮನೆ ಈಗ ಸ್ಪೋರ್ಟ್ಸ್ ಕ್ಲಬ್ ಹಾಗೂ ನಶೆ ಏರಿಸುವ ಮದ್ಯದಂಗಡಿ ಇರುವ ಸ್ಥಳವಾಗಿ ಮಾರ್ಪಟ್ಟಿದೆ. ಹೌದು, ಇಲ್ಲಿ ದಿನನಿತ್ಯ ಲಕ್ಷಾಂತರ ರೂಪಾಯಿ ವ್ಯವಹಾರ ನಡೆಯುತ್ತದೆ.

ಈ ಮನೆಗೆ ತೆರಳಿ ಜಯಾ ಅವರ ಆ ದಿನಗಳ ಮೆನೆ ಹೇಗಿದೆ ಎಂದು ಆ ಮನೆಯನ್ನೊಮ್ಮೆ ಹೊಕ್ಕರೆ ನಿಮ್ಮ ಕಣ್ಣಿಗೆ ಬೀಳೋದು ಬರೀ ಮದ್ಯದ ಬಾಟಲಿಗಳು ಜತೆಗ ಗಗನ ಚುಂಬಿಸುವಂತೆ ಹೊಗೆ ಬಿಡುವ ಧೂಮಪಾನವ್ಯಸನಿಗಳು.

Take a look at Jayalalithaa's ancestral houses in Mysuru

ಆ ಮನೆಯಲ್ಲಿ ಜಯಾ ಫೋಟೋ ಇದೆ ಎಂಬ ಮಾಹಿತಿಯನ್ನರಿತು ಒಳಹೊಕ್ಕರೆ ನೀವು ಬೇಸರಗೊಂಡು ಹೊರಬರುವಂತಹದ್ದು ನಿಜ. ಕಾರಣ ಅಲ್ಲಿ ಯಾವ ಕುರುಹು ಕಾಣೋದಿಲ್ಲ.

ಈ ಬಗ್ಗೆ ಕ್ಲಬ್ ಡೈರೆಕ್ಟರ್ ಗೆ ಕೇಳಿದ್ದಲ್ಲಿ ಅವರ ಮಾತಿನ ವರಸೆಯೇ ಬೇರೆ, ಜಯಲಲಿತಾ ಹುಟ್ಟಿ ಬೆಳೆದ ಮನೆಯನ್ನು ನಮ್ಮ ಕ್ಲಬ್ ನವರು ಕೊಂಡುಕೊಂಡದ್ದಾಗಿದೆ. ಇನ್ನೇನಿದ್ರು ವ್ಯವಹಾರವಷ್ಟೇ.

Take a look at Jayalalithaa's ancestral houses in Mysuru

ನಾವು ಇದನ್ನು ಖರೀದಿಸಿ 25 ವಸಂತಗಳು ಕಳೆದಿವೆ. ಆಗಿನಿಂದಲೂ ಕ್ಲಬ್ ಚೆನ್ನಾಗಿಯೇ ನಡೆಯುತ್ತಿದೆ. ಯಾರು ಕೂಡ ಇದು ಜಯಾರ ಜಾಗ ಎಂದು ಕೇಳಿಕೊಂಡು ಬರುವುದಿಲ್ಲ ಎನ್ನುತಿದ್ದಾರೆ.

1950ರಿಂದೀಚೆಗೆ ಸುಮಾರು 4 ವಷಗಳ ಕಾಲ ಕೋಮಲವಲ್ಲಿ ವಾಸವಿದ್ದ ಮನೆ ಈಗ ಬದಲಾಗಿರುವುದು ನೆರೆಹೊರೆಯವರಿಗಂತೂ ಮುಜುಗರ ತಂದಿದೆ. ತಮಿಳುನಾಡಿನ ಅಮ್ಮಾ ಎಂದೇ ಪ್ರಖ್ಯಾತಿಗೊಂಡಿರುವ ಜಯಾರ ಸಮಾಜಮುಖಿ ಕಾರ್ಯವನ್ನು ಇಂದಿಗೂ ತಮಿಳರು ಮರೆಯುವಂತೆಯೇ ಇಲ್ಲ.

Take a look at Jayalalithaa's ancestral houses in Mysuru

ಹಾಗಾಗಿಯೇ ಆಕೆಯನ್ನು ದೈವತಾ ಸ್ವರೂಪಿಯೆಂದು ಅವರು ಕರೆಯುವುದುಂಟು. ಆದರೆ ಮೂಲತಃ ನಮ್ಮ ರಾಜ್ಯದವವರೇ ಆದ ಜಯಾ ಹುಟ್ಟಿ ಬೆಳೆದ ಇಂತಹ ಜಾಗವನ್ನು ಅವ್ಯವಸ್ಥೆಯ ಕೂಪವನ್ನಾಗಿಸುವ ಬದಲು, ನಾಳಿನ ಪೀಳಿಗೆಗೆ ಪರಿಚಯಿಸುವ ಸ್ಥಳವನ್ನಾಗಿಸಬೇಕೆಂದೇ ನಮ್ಮ ಆಶಯ.

English summary
Take a look at Jayalalithaa's ancestral houses in Mysuru. Jaya vilas and Lalitha vilas named after her has become place for all kind of illegal activities
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X