ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾರತೀಯ ಪರಂಪರೆಯ ಹೆಮ್ಮೆಯ ಪ್ರತೀಕ ಈ 'ಮೈಸೂರು ಪೇಟ'

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಸೆಪ್ಟೆಂಬರ್ 12 : ಮೈಸೂರು ಪೇಟಾ ಎಂದರೆ ಯಾರು ತಾನೇ ಅರಿಯರು ಹೇಳಿ? ದಸರೆ ಸಮೀಪಿಸುತ್ತಿದೆ. ಮೈಸೂರು ಪೇಟಾ ದ ಕೂಡಲೇ ಥಟ್ಟೆಂದು ನೆನಪಾಗುವುದೇ ಹಿಂದಿನ ರಾಜರು ಧರಿಸಿರುವ ಶಾಸ್ತ್ರೀಯ ರಾಯಲ್ ಭಾರತೀಯ ಉಡುಪು, ಇದು ಮೈಸೂರು ಸಾಮ್ರಾಜ್ಯದ ಒಡೆಯರ್ ಮನೆತನದವರು ತಮ್ಮ ಉಡುಪಿನ ಉಡುಪಿನ ಉತ್ಕೃಷ್ಟ ಭಾಗವಾಗಿ ಅಳವಡಿಕೊಂಡಿದ್ದರು. ಹಾಗಾದರೆ ಈ ಮೈಸೂರು ಪೇಟಾದ ಹಿನ್ನೆಲೆ ಏನೆಂಬ ಕುತೂಹಲ ನಿಮಗಿರಲೇಬೇಕು . ಅದಕ್ಕೆ ಇಲ್ಲಿದೆ ಉತ್ತರ.

ಮೈಸೂರು ಪೇಟ ಪರಂಪರೆ ಮತ್ತು ಸಾಂಸ್ಕೃತಿಕ ಪೂರ್ವವರ್ತಿಗಳ ಸಂಕೇತವಾಗಿ ಇಂದಿಗೂ ಉಳಿಸಿಕೊಳ್ಳಲಾಗಿದೆ. ಮಹಾರಾಜರ ಭವ್ಯ ಪೋಷಾಕಿನಲ್ಲಿ ಅತಿ ಹೆಚ್ಚು ಘನತೆಯನ್ನು ಪಡೆದಿರುವುದು ಝರಿ ಪೇಟ . ಸಣ್ಣ ಹಾಗೂ ಕುಶಲ ಕಲೆಗಾರಿಕೆ , ಬಣ್ಣ ಬಣ್ಣದ ಅಂಚಿನ ರೇಶಿಮೆಯ ಬಟ್ಟೆಯಿಂದ ತಯಾರಿಸಲಾದ ಮುಂಡಾಸನ್ನು ಮೈಸೂರು ಪೇಟ ಎಂದು ಕರೆಯಲಾಗುತ್ತದೆ ಮಹಾರಾಜರು ಈ ಪೇಟವನ್ನು ಧರಿಸಿದ್ದ ಕಾರಣಕ್ಕಾಗಿ ಇದೊಂದು ರಾಜ ಮನ್ನಣೆ ಸಿಕ್ಕಿದೆ.

ಮೈಸೂರು ದಸರಾದಲ್ಲಿ ಶಿವಣ್ಣ, ದರ್ಶನ್: ರಂಗೇರಲಿದೆ ನಾಡಹಬ್ಬಮೈಸೂರು ದಸರಾದಲ್ಲಿ ಶಿವಣ್ಣ, ದರ್ಶನ್: ರಂಗೇರಲಿದೆ ನಾಡಹಬ್ಬ

ಅರಮನೆಯ ರಾಜ ಪರಿವಾರ, ದಿವಾನರು ಹಿರಿಯ ಅಧಿಕಾರಿಗಳು ಈ ಪೇಟವನ್ನು ಧರಿಸುತ್ತಿದ್ದರು. ಮೈಸೂರು ಪೇಟದ ಮೂಲ ಯಾವುದು ಎನ್ನುವುದನ್ನು ನಿರ್ದಿಷ್ಟವಾಗಿ ಹೇಳುವುದು ಕಷ್ಟವಾದರೂ 1399 ರಲ್ಲಿ ‍ಮೈಸೂರು ರಾಜ್ಯ ವಂಶ ಆರಂಭವಾದ ನಂತರವಷ್ಟೇ ಈ ಪೇಟವನ್ನು ಧರಿಸುತ್ತಿರುವ ಬಗ್ಗೆ ಮಾಹಿತಿ ಸಿಗುತ್ತದೆ.

ಮೈಸೂರು ಯುವ ಸಂಭ್ರಮಕ್ಕೆ ನಿರೂಪಕರು ಬೇಕಾಗಿದ್ದಾರೆ!ಮೈಸೂರು ಯುವ ಸಂಭ್ರಮಕ್ಕೆ ನಿರೂಪಕರು ಬೇಕಾಗಿದ್ದಾರೆ!

ಅತಿ ಹೆಚ್ಚು ಕಾಲ ರಾಜ್ಯಭಾರ ಮಾಡಿದ ರಾಜವಂಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮೈಸೂರು ಒಡೆಯರ್ ವಂಶಸ್ಥರ ಗುರುತಿನ ಸಂಕೇತವಾಗಿ ಈ ಪೇಟವನ್ನು ಇಂದಿಗೂ ನಮ್ಮ ರಾಜ್ಯದಲ್ಲಿ ಬಳಕೆ ಮಾಡಲಾಗುತ್ತದೆ . ಈ ಪೇಟವನ್ನು ಧರಿಸದೇ ಇರುವ ಮೈಸೂರು ರಾಜರನ್ನು ಕಲ್ಪಿಸಿಕೊಳ್ಳುವುದು ಕಷ್ಟ ಎನ್ನುವಷ್ಟರ ಮಟ್ಟಿಗೆ ಇದು ತನ್ನ ಮಹತ್ವನ್ನು ಉಳಿಸಿಕೊಂಡಿದೆ .

ಪೇಟ ತಯಾರು ಮಾಡಿದವರು

ಪೇಟ ತಯಾರು ಮಾಡಿದವರು

ಮೈಸೂರು ರಾಜವಂಶಸ್ಥರು ಅರಮನೆಗೆ ಸಂಬಂಧಿಸಿದ ಕೆಲಸವನ್ನು ಮಾಡುವ ಸಂದರ್ಭದಲ್ಲಿ ಈ ಪೇಟವನ್ನು ಕಡ್ಡಾಯವಾಗಿ ಧರಿಸಿರುವುದನ್ನು ನೋಡಿರುತ್ತೇವೆ. ರಾಜರ ವಂಶಸ್ಥರಿಗೆ ಪೇಟಾ ತಯಾರಿಸುವಲ್ಲಿ ಪ್ರಮುಖರಾದವರು ದೇವಯ್ಯ ನವರು .ಪೇಟದ ದೇವಯ್ಯ ಎಂದೇ ಖ್ಯಾತಿ ಹೊಂದಿದವರು ಆ ಕಲೆಯನ್ನು ಈವರೆಗೂ ಮುಂದುವರಿಸಿಕೊಂಡು ಬಂದಿದ್ದಾರೆ ಅವರು. ಮೈಸೂರು ಅರಸರ ಪೈಕಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಿಂದ ಇಂದಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ನಂತರವೂ ಈ ಕುಟುಂಬ ನಿರಂತರ ಪೇಟದ ಸೇವೆ ಸಲ್ಲಿಸಿದೆ.

ವಂಶಪಾರಂಪರ್ಯವಾಗಿ ಬಂತು ಪೇಟಾ ಕಟ್ಟುವ ಕಲೆ

ವಂಶಪಾರಂಪರ್ಯವಾಗಿ ಬಂತು ಪೇಟಾ ಕಟ್ಟುವ ಕಲೆ

ಕೃಷ್ಣರಾಜ ಒಡೆಯರ್ ಆಡಳಿತಾವಧಿಯಲ್ಲಿ ಪೇಟಾ ತಯಾರಿಕೆಯಲ್ಲಿ ಛಾಪು ಮೂಡಿಸಿದ್ದ ಪೇಟದ ದೇವಯ್ಯ ಅವರ ಮೊಮ್ಮಗ ಪರಮೇಶ್, ಪ್ರಸ್ತುತ ಮೈಸೂರು ರಾಜವಂಶಸ್ಥರಿಗೆ ಪೇಟ ಮಾಡುತ್ತಿರುವ ಮೂರನೇ ತಲೆಮಾರಿನ ಕುಡಿ. ಪೇಟದ ದೇವಯ್ಯ ಅವರಿಂದ ಪ್ರೇರಣೆಗೊಂಡು ಅಳಿಯ ಶಿವರಾಮ ಪೇಟ ಕಟ್ಟುವಲ್ಲಿ ನಿಪುಣತೆ ಸಾಧಿಸಿದ್ದರು. ಸುಮಾರು 30 ವರ್ಷಗಳ ಕಾಲ ಪೇಟಾ ಕಟ್ಟಿದ ಶಿವರಾಮ್ ಕಾಲವಾದರು. ಈ ಅವಧಿಯಲ್ಲಿ ಮಗನಿಗೂ ಪೇಟಾ ಕಟ್ಟುವ ಕಲೆ ಕಲಿಸಿಕೊಟ್ಟ ಪರಿಣಾಮ ಹಾಗೂ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಪೂರಕ ಬೆಂಬಲದಿಂದಾಗಿ ಈಗ ಪೇಟಾ ಕಟ್ಟುವ ಜವಾಬ್ದಾರಿ ಪರಮೇಶ್ ಗೆ ವರ್ಗಾಯಿಸಲಾಗಿದೆ .

ಯದುವೀರ್ ಗೂ ಪೇಟಾ ಕಟ್ಟುವವರು ಇವರು

ಯದುವೀರ್ ಗೂ ಪೇಟಾ ಕಟ್ಟುವವರು ಇವರು

ನವರಾತ್ರಿ ಆರಂಭವಾಗುವ ಮುನ್ನ ದಿನವಿಡೀ ಪೇಟಾ ಸಿದ್ಧಪಡಿಸುವುದು ಇವರ ಕಾಯಕ. ಇನ್ನುಈ ಬಾರಿಯ ದಸರಾ ಸಂದರ್ಭದಲ್ಲಿ ಪರಮೇಶ್ ಅವರಿಗೆ ಬಿಡುವಿಲ್ಲದ ಕೆಲಸ . ಯದುವೀರ್ ರವರ ಒಡೆಯರ್ ಅವರ ತಲೆಯ ಅಳತೆಗೆ ತಕ್ಕಂತೆ ಸಿದ್ಧಪಡಿಸ ಬೇಕಾದ ಹಿನ್ನೆಲೆಯಲ್ಲಿ ಅವರ ಅವರ ಸಮ್ಮುಖವೇ ಕೆಲಸ ಮಾಡಬೇಕು . ಸುಮಾರು 54 ಬಗೆಯ ಪೇಟ ಮಾಡುವ ಪರಮೇಶ್ , ಒಡೆಯರ್ ಅವರಿಗಾಗಿ ಚಿನ್ನ ಹಾಗೂ ಬೆಳ್ಳಿ ಝರಿ ಹೊಂದಿದ ಪೇಟ ಸಿದ್ಧಪಡಿಸುತ್ತಾರೆ .ರಾಜವಂಶಸ್ಥರು ಧರಿಸುವ ಪೇಟ ಚಿನ್ನ ಬೆಳ್ಳಿ ರಿಯೊಗೆ ಮುತ್ತಿನ ಕುಚ್ಚು ಹಾಗೂ ವಜ್ರದ ಅಲಂಕಾರದಿಂದ ಕೂಡಿರುತ್ತದೆ .

ವಿಶೇಷ ಸ್ಥಾನಮಾನ

ವಿಶೇಷ ಸ್ಥಾನಮಾನ

ಅರಮನೆ ಚಾಮುಂಡಿ ಬೆಟ್ಟ ದಸರಾ ಇಂತಹ ಹತ್ತು ಹಲವು ಖ್ಯಾತಿ ಗಳೊಂದಿಗೆ ಸಾಂಸ್ಕೃತಿಕ ನಗರಿ ಮೈಸೂರಿಗೆ ಪೇಟದ ಮಹತ್ವವೂ ಇದೆ . ಮೈಸೂರು ಸಂಸ್ಥಾನದಲ್ಲಿ ಮಹಾರಾಜ ರಾಜಿಯಾಗಿ ಎಲ್ಲರೂ ಪೇಟಾ ಧರಿಸುತ್ತಿದ್ದ ದ್ದು ಗೊತ್ತೇ ಇದೆ . ಹೊರಗಿನಿಂದ ಸಾಂಸ್ಕೃತಿಕ ಮೈಸೂರಿಗೆ ಯಾರೇ ಆಗಮಿಸಲು ಅವರಿಗೆ ಶಾಲು ಹೊದಿಸಿ ಮೈಸೂರು ಪೇಟ ತೊಡಿಸಿ ಗೌರವಿಸುವುದು ಪ್ರತೀತಿ. ಇನ್ನು ಒನ್ ಇಂಡಿಯಾದೊಂದಿಗೆ ಮಾತನಾಡಿದ ಪೇಟದ ಪರಮೇಶ್, ನಮಗೆ ಪೇಟಾ ಕಟ್ಟುವ ಕಲೆ ಸುಲಭವಾಗಿ ಗೊತ್ತಿದೆ. ಇದನ್ನು ಮುಂದುವರೆಸಿಕೊಂಡು ಹೋಗಬೇಕಿದೆ. ಮಹರಾಜರ ಒಂದು ಪೇಟಾ ತಯಾರಿಸಲು ನಮಗೆ 10 ದಿನಗಳು ಬೇಕಾಗುತ್ತದೆ. ಈಗಾಗಲೇ ಕೆಲಸ ಶುರು ಮಾಡಲಾಗಿದೆ ಎನ್ನುತ್ತಾರೆ.

ಘನತೆಯ ಪ್ರತೀಕ

ಘನತೆಯ ಪ್ರತೀಕ

ಅತಿಥಿಗಳ ಸನ್ಮಾನ ಸಂದರ್ಭದಲ್ಲಿಯೂ ಈ ಪೇಟವನ್ನು ತರಿಸುವುದು ಹೆಚ್ಚು ಗೌರವ ಸಲ್ಲಿಸಿದಂತೆ ಮೈಸೂರಿನಲ್ಲಿ ಮಾತ್ರ ಇದ್ದ ಈ ನಂಬಿಕೆ ಈಗ ರಾಜ್ಯ ಸರ್ಕಾರಕ್ಕೂ ವಿಸ್ತರಣೆಗೊಂಡಿದೆ ರಾಜ್ಯ ಸರ್ಕಾರ ಕೂಡ ಪ್ರಶಸ್ತಿ ಗೌರವವನ್ನು ನೀಡುವ ಸಂದರ್ಭದಲ್ಲಿ ಮೈಸೂರು ಪೇಟ ತೊಡಿಸುತ್ತಾರೆ, ಇದು ಮೈಸೂರು ಪೇಟಕ್ಕೆ ನೀಡುವ ಗೌರವ. ಈ ಭಾಗದಲ್ಲಿ ಮದುವೆ ನಡೆಯುವ ಸಂದರ್ಭದಲ್ಲಿಯೂ ಮೈಸೂರು ಪೇಟವನ್ನು ಮಧು ಮಗನಿಗೆ ತೊಡಿಸುವುದು ವಾಡಿಕೆಯಾಗಿದೆ . ಇನ್ನು ನಮ್ಮ ಮೈಸೂರಿನ ಪೇಟ ಭಾರತದಲ್ಲಷ್ಟೇ ಅಲ್ಲದೇ ವಿದೇಶದಲ್ಲಿಯೂ ಸಹ ರಾರಾಜಿಸುತ್ತಿರುವುದು ಹೆಮ್ಮೆಯ ವಿಚಾರವೇ ಸರಿ.

English summary
Mysore peta (turban), which reflects the legacy of Maharajas of Mysore, has remained an integral part of all special occasions in the royal family.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X