ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗು ಸಂತ್ರಸ್ತರಿಗೆ ಸುತ್ತೂರು ಮಠದಿಂದ 50ರೂ ಲಕ್ಷ ನೆರವು

By Nayana
|
Google Oneindia Kannada News

Recommended Video

Kodagu Floods : ಕೊಡಗು ಸಂತ್ರಸ್ತರಿಗೆ ಸುತ್ತೂರು ಮಠದಿಂದ 50 ಲಕ್ಷ ರೂ ನೆರವು | Oneindia Kannada

ಮೈಸೂರು, ಆಗಸ್ಟ್ 28: ನೆರೆ ಸಂಕಷ್ಟಕ್ಕೆ ಒಳಗಾಗಿರುವ ಕೊಡಗು ಹಾಗೂ ರಾಜ್ಯ ಇತರೆ ಭಾಗದ ಜನರ ಪುನಶ್ಚೇತನ ಕಾರ್ಯಕ್ರಮಕ್ಕೆ ಸುತ್ತೂರು ಶ್ರೀ ವೀರಸಿಂಹಾಸನ ಮಠದಿಂದ 50 ಲಕ್ಷ ರೂ. ದೇಣಿಗೆಯನ್ನು ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಮಂಗಳವಾರ ನೀಡಲಾಯಿತು.

ಜಗದ್ಗುರು ಶ್ರೀ ದೇಶೀಕೇಂದ್ರ ಮಹಾಸ್ವಾಮಿಗಳು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಚೆಕ್ ಹಸ್ತಾಂತರಿಸಿದರು. ಕೇರಳ ರಾಜ್ಯಕ್ಕೆ 10 ಲಕ್ಷ ರೂ. ದೇಣಿಗೆ ನೀಡಿದರು.ಸುತ್ತೂರು ಮಠ, ಜೆಎಸ್ ಎಸ್ ಸಂಸ್ಥೆಗಳಲ್ಲಿ ಪ್ರತಿ ವರ್ಷ ಜಯಂತೋತ್ಸವ ಆಚರಣೆ ಮಾಡಲಾಗುತ್ತಿದೆ.

ಯಡಿಯೂರಪ್ಪ-ಎಚ್ಡಿಕೆ ಪರಸ್ಪರ ಎದುರಾದಾಗ ಏನಾಯಿತು ನೋಡಿ?ಯಡಿಯೂರಪ್ಪ-ಎಚ್ಡಿಕೆ ಪರಸ್ಪರ ಎದುರಾದಾಗ ಏನಾಯಿತು ನೋಡಿ?

ಈ ಬಾರಿ ಕೊಡಗು ಜಿಲ್ಲೆಯಲ್ಲಿ ಪ್ರವಾಹ ಬಂದಿರುವ ಹಿನ್ನೆಲೆಯಲ್ಲಿ. ಸರಳವಾಗಿ ಜಯಂತಿ ಆಚರಣೆ ಮಾಡಲು ನಿರ್ಧರಿಸಲಾಗಿದೆ ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

Suttur mutt donates Rs.50 lakhs to Kodagu flood victims

ಜಯಂತಿ ಆಚರಣೆಗೆ ಖರ್ಚಾಗುತ್ತಿದ್ದ ಹಣ ಪರಿಹಾರ ನಿಧಿಗೆ ನೀಡಿದ್ದೇವೆ. ಕೊಡಗು ಜಿಲ್ಲೆಯ ನೆರೆ ಪರಿಹಾರಕ್ಕೆ ವಿನಿಯೋಗಿಸಲಾಗುವುದು. ಲಿಂಗೈಕ್ಯ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರು ಸಾಮಾಜಿಕ ಬದ್ಧತೆಯುಳ್ಳ ಸರಳ, ಸಜ್ಜನಿಕೆಯ ರೂಪವಾಗಿದ್ದರು. ಅವರು ಆಶಯದಂತೆ ಮಠ ಮುನ್ನಡೆಯುತ್ತಿದೆ ಎಂದರು.

ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?

ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಸಚಿವ ಸಿ.ಎಸ್. ಪುಟ್ಟರಾಜು,ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಪುಟ್ಟರಂಗಶೆಟ್ಟಿ. ವಿರೋಧ ಪಕ್ಷದ ನಾಯಕ ಬಿ.ಎಸ್ ಯಡಿಯೂರಪ್ಪ ಶಾಸಕರಾದ ಅಡಗೂರು ಎಚ್‌ ವಿಶ್ವನಾಥ್, ಡಾ. ಯತೀಂದ್ರ ಸಿದ್ದರಾಮಯ್ಯ, ಮಾಜಿ ಸಚಿವರಾದ ಪಿ.ಜಿ.ಆರ್. ಸಿಂಧ್ಯಾ ಉಪಸ್ಥಿತರಿದ್ದರು.

English summary
Suttur Shivaratri Deshikendra Swamiji has handed over Rs.50 lakhs cheque to chief minister H.D.Kumarswamy for Kodagu district flood victims welfare.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X