ಜ.13 ರಿಂದ ಸುತ್ತೂರಿನಲ್ಲಿ ಮೇಳೈಸಲಿದೆ ವೈಭವದ ಜಾತ್ರೆ

Posted By:
Subscribe to Oneindia Kannada

ಮೈಸೂರು, ಜನವರಿ 12 : ಕೃಷಿಕರು, ವಿದ್ಯಾರ್ಥಿಗಳು, ಯುವಜನರು, ಎಲ್ಲರನ್ನೂ ಒಳಗೊಳ್ಳುವ, ನಮ್ಮ ಶ್ರೀಮಂತ ಜಾನಪದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ, ದೇಸಿ ಆಟಗಳು, ಕುಸ್ತಿ ಪಂದ್ಯಾವಳಿ ಮೊದಲಾದವುಗಳ ಮೂಲಕ ನಾಡಿನ ಜನರ ಮನಸೆಳೆಯುತ್ತಿರುವ ಸುತ್ತೂರು ಜಾತ್ರೆಗೆ ಇದೇ ಜ.13 ರಂದು ಚಾಲನೆ ದೊರೆಯಲಿದೆ.

ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಜ.13ರಿಂದ 18ರವರೆಗೆ 6 ದಿನಗಳ ಕಾಲ ಸುತ್ತೂರಿನಲ್ಲಿ ನಡೆಯಲಿದ್ದು, ರಾಜ್ಯದ ವಿವಿಧೆಡೆಯಿಂದ ಆಗಮಿಸುವ ಲಕ್ಷಾಂತರ ಜನರನ್ನು ಆಕರ್ಷಿಸಲಿದೆ. ರಥೋತ್ಸವ, ತೆಪ್ಪೋತ್ಸವ, ಕೊಂಡೋತ್ಸವ, ಲಕ್ಷ ದೀಪೋತ್ಸವ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳೂ ಜತೆ ಜತೆಗೆ ಜರುಗಲಿವೆ.
ಸುತ್ತೂರು ಜಾತ್ರಾ ಮಹೋತ್ಸವದ ಬಗ್ಗೆ ಸುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಜೆಎಸ್ ಎಸ್ ಮಹಾವಿದ್ಯಾ ಪೀಠದ ಗೌರವ ಕಾರ್ಯದರ್ಶಿ ಎಸ್.ಪಿ.ಮಂಜುನಾಥ್ ವಿವರ ನೀಡಿದರು.

ಜ.12 ರಿಂದ ಮಡಿಕೇರಿಯಲ್ಲಿ ರೈತಸಂತೆ: ಉಳುವ ಯೋಗಿಗೆ ವೇದಿಕೆ

ಕೃಷಿ ಮೇಳ
ರೈತರಿಗೆ ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಲು ಮೇಳ ಏರ್ಪಡಿಸಿದ್ದು, ಇದರಲ್ಲಿ ಸಮಗ್ರ ಬೆಳೆ ನಿರ್ವಹಣೆ, ಕೃಷಿ ಪ್ರದರ್ಶನ, ಪಶು ಸಂಗೋಪನೆ ಬಗ್ಗೆ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿದೆ. ಸಿರಿಧಾನ್ಯಗಳ ಪ್ರಾತ್ಯಕ್ಷಿಕೆಗಳು, ಮಾರಾಟ ವ್ಯವಸ್ಥೆ ಇದೆ. ಜತೆಗೆ ಇದೇ ಮೊದಲ ಬಾರಿಗೆ ಸಿರಿಧಾನ್ಯಗಳಿಂದ ಆಹಾರ ತಯಾರಿಸುವ ಸ್ಪರ್ಧೆಯನ್ನು ಜ.16ರಂದು ಬೆಳಿಗ್ಗೆ 11 ಗಂಟೆಗೆ ಏರ್ಪಡಿಸಲಾಗಿದೆ. ಈ ಬಾರಿ 42 ಬಗೆಯ ರಾಗಿ ತಳಿಗಳ ಪ್ರದರ್ಶನ ಏರ್ಪಡಿಸಿರುವುದು ವಿಶೇಷ. ವೈವಿಧ್ಯತೆಯ ಅಂಶಗಳುಳ್ಳ ಈ ತಳಿಗಳು ರೈತರನ್ನು ಸೆಳೆಯಲಿವೆ.

Suttur fair in Mysuru will start from Jan 13th to 18th

ಭಜನಾ ಮೇಳ
ಈ ಬಾರಿಯ 26ನೇ ರಾಜ್ಯಮಟ್ಟದ ಭಜನಾ ಮೇಳದಲ್ಲಿ ರಾಜ್ಯ ಮತ್ತು ನೆರೆ ರಾಜ್ಯಗಳಿಂದಲೂ ತಂಡಗಳು ಭಾಗವಹಿಸಲಿದ್ದು, ಒಟ್ಟು 800ಕ್ಕೂ ಹೆಚ್ಚು ತಂಡಗಳು ಭಾಗವಹಿಸಲಿವೆ. ಕೈಗಾರಿಕೆ, ವಿಜ್ಞಾನ, ಶಿಕ್ಷಣ, ಆರೋಗ್ಯ, ತಾಂತ್ರಿಕ, ಚಿತ್ರಕಲೆ, ಸಾಂಸ್ಕೃತಿಕ ವಿಭಾಗಗಳನ್ನು ಒಳಗೊಂಡ ವಸ್ತುಪ್ರದರ್ಶನ ನಡೆಯಲಿದೆ.

ಸಂಕ್ರಾಂತಿ ವಿಶೇಷ ಪುಟ

ಸಾಮೂಹಿಕ ವಿವಾಹ
ಈ ಬಾರಿಯ ಉಚಿತ ಸಾಮೂಹಿಕ ವಿವಾಹ ಕಾರ್ಯಕಮ ಜ.14ರಂದು ನಡೆಯಲಿದೆ. ಎಲ್ಲಾ ಧರ್ಮದವರೂ ಇದರಲ್ಲಿ ಭಾಗವಹಿಸುವುದು ವಿಶೇಷ. ಈಗಾಗಲೇ 150ಕ್ಕೂ ಹೆಚ್ಚು ಜೋಡಿಗಳು ನೋಂದಣಿ ಮಾಡಿಸಿಕೊಂಡಿವೆ. ಗ್ರಾಮೀಣ ಕಲೆಗಳಾದ ಸೋಬಾನೆ ಪದ, ರಂಗೋಲಿ ಸ್ಪರ್ಧೆಗಳು ಜ.13ರಂದು ಮಕ್ಕಳಿಗಾಗಿ ಗಾಳಿಪಟ ಸ್ಪರ್ಧೆ ಜ.16ರಂದು ನಡೆಯಲಿದೆ. ಜ.17ರಂದು ಕುಸ್ತಿ ಪಂದ್ಯಾವಳಿ ಜರುಗಲಿದ್ದು, ಈ ಬಾರಿ 2 ಮಾರ್ಪಿಟ್ ಕುಸ್ತಿ ನಡೆಯಲಿದೆ.

ದೇಸಿ ಆಟಗಳ ಸೊಬಗು
ಗೋಲಿ, ಬುಗುರಿ, ಹುಲಿ-ಕುರಿ, ಹಾವು-ಏಣಿ, ಚೌಕಬಾರ, ಕೆಸರುಗದ್ದೆ ಓಟ ಮುಂತಾದ ದೇಸಿ ಆಟಗಳು ಗ್ರಾಮೀಣ ಭಾಗದ ಜನತೆಯನ್ನು ಆಕರ್ಷಿಸಲಿವೆ. ದನಗಳ ಜಾತ್ರೆ ಆರಂಭವಾಗಿ 50 ವರ್ಷಗಳಾಗಿದ್ದು, ಇದರ ಸುವರ್ಣ ಸಂಭಮದ ವರ್ಷ ಇದಾಗಿದೆ. ಜಾತ್ರೆಯಲ್ಲಿ ಉತ್ತಮ ರಾಸುಗಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಗುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Suttur fair in Mysuru will be taking place from Jan 13th to 18th in Shivaratri Deshikendra Math of Suttur in Mysuru.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ