ಮೈಸೂರು ದಸರಾವನ್ನು ಸಾಲುಮರದ ತಿಮ್ಮಕ್ಕನೇ ಉದ್ಘಾಟಿಸಲಿ

Posted By:
Subscribe to Oneindia Kannada

ಮೈಸೂರು, ಆಗಸ್ಟ್ 06 : 2016ರ ಮೈಸೂರು ದಸರಾವನ್ನು ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಉದ್ಘಾಟಿಸುವುದು ಬೇಡ ಎಂದು ಒನ್ ಇಂಡಿಯಾ ಕನ್ನಡದ ಓದುಗರು ಅಭಿಪ್ರಾಯಪಟ್ಟಿದ್ದಾರೆ. ದಸರಾ ಉದ್ಘಾಟನೆ ಮಾಡಲು ನಮ್ಮ ಓದುಗರ ಆಯ್ಕೆ ಸಾಲುಮರದ ತಿಮ್ಮಕ್ಕ (88) ಅವರು.

'ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಗೆ ನಿಮ್ಮ ಆಯ್ಕೆ ಯಾರು?' ಎಂದು ಪ್ರಶ್ನೆ ಕೇಳಲಾಗಿತ್ತು. ಒನ್ ಇಂಡಿಯಾ ಕನ್ನಡ ಫೇಸ್‌ಬುಕ್ ಪುಟದಲ್ಲಿ ಈ ಪ್ರಶ್ನೆಗೆ ನೂರಾರು ಓದುಗರು ಕಮೆಂಟ್ ಮಾಡಿದ್ದಾರೆ. ಕರ್ನಾಟಕದ ಸಾಧಕರೇ ಉದ್ಘಾಟಿಸಲಿ ಎಂದು ಶೇ 61ರಷ್ಟು ಜನರು ಹೇಳಿದ್ದಾರೆ. [ದಸರಾ ಉದ್ಘಾಟನೆ ಮಾಡಲಿದ್ದಾರೆ ಸಚಿನ್]

ಫೇಸ್‌ಬುಕ್‌ನಲ್ಲಿ ಈ ಪ್ರಶ್ನೆಯನ್ನು 203 ಜನರು ಶೇರ್ ಮಾಡಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿದ, ಶೇರ್ ಮಾಡಿದ ಎಲ್ಲಾ ಓದುಗರಿಗೆ ಒನ್ ಇಂಡಿಯಾ ಧನ್ಯವಾದ ಅರ್ಪಿಸುತ್ತದೆ. ಸಾಲು ಮರದ ತಿಮ್ಮಕ್ಕ ಅವರು ದಸರಾವನ್ನು ಉದ್ಘಾಟನೆ ಮಾಡಲಿ ಎಂಬುದು ನಮ್ಮ ಓದುಗರ ಅಭಿಪ್ರಾಯವಾಗಿದೆ.[2015ರ ದಸರಾ ಉದ್ಘಾಟಿಸಿದ ರೈತ ಪುಟ್ಟಯ್ಯ ಪರಿಚಯ]

ದಸರಾ ಉದ್ಘಾಟನೆಗೆ ಯಾರನ್ನು ಆಹ್ವಾನಿಸಬೇಕು? ಎಂದು ಆಗಸ್ಟ್ 9ರಂದು ನಡೆಯುವ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಹಿರಿಯ ಸಾಹಿತಿಗಳಾದ ಚನ್ನವೀರ ಕಣವಿ, ಪ್ರೊ.ಕೆ.ಎಸ್. ನಿಸಾರ್ ಅಹಮದ್, ಎಸ್‌.ಎಲ್.ಭೈರಪ್ಪ, ಸುತ್ತೂರು ಮಠಾಧೀಶರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮತ್ತು ಮಾಜಿ ಕ್ರಿಕೆಟಿಗ ಸಚಿನ್ ತೆಂಡಲ್ಕೂರ್ ಅವರ ಹೆಸರು ಕೇಳಿಬರುತ್ತಿದೆ.

ಓದುಗರ ಅಭಿಪ್ರಾಯ ಇಲ್ಲಿದೆ

ಓದುಗರ ಅಭಿಪ್ರಾಯ ಇಲ್ಲಿದೆ

2016ರ ಮೈಸೂರು ದಸರಾ ಯಾರು ಉದ್ಘಾಟಿಸಬೇಕು? ಎಂಬ ಪ್ರಶ್ನೆಗೆ ಶೇ 14ರಷ್ಟು ಜನರು ತೆಂಡೂಲ್ಕರ್ ಎಂದು ಮತ ಹಾಕಿದ್ದಾರೆ. ಕರ್ನಾಟಕ ಸಾಧಕರೇ ಉದ್ಘಾಟಿಸಲಿ ಎಂದು ಶೇ 61ರಷ್ಟು ಜನರು ಹೇಳಿದ್ದಾರೆ. ಉದ್ಘಾಟನೆಗೆ ವಿವಾದ ಬೇಡ ಯಾರಾದರೂ ಮಾಡಲಿ ಎಂದು ಶೇ 25ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ.

ತಿಮ್ಮಕ್ಕನವರ ಆಯ್ಕೆ ಒಳ್ಳೆಯದು

ತಿಮ್ಮಕ್ಕನವರ ಆಯ್ಕೆ ಒಳ್ಳೆಯದು

Raghunandan SK ಎಂಬ ಓದುಗರು ಪ್ರತಿಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥಸೇವೆ ಮಾಡಿರುವ ತಿಮ್ಮಕ್ಕನವರ ಆಯ್ಕೆ ಒಳ್ಳೆಯದು. ಇನ್ನು ಬೇರೆಯವರಿಗೆ ಉತ್ತಮ ಉದ್ದೇಶ ಇಟ್ಟು ಉನ್ನತ ಸೇವೆ ಮಾಡುವವರಿಗೆ ಪ್ರೇರೇಪಣೆ ಸಿಕ್ಕoತ್ತಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. [ಚಿತ್ರದಲ್ಲಿ ವಿವಿಧ ಓದುಗರ ಅಭಿಪ್ರಾಯವಿದೆ]

ನನ್ನ ಆಯ್ಕೆ ಡಾ.ಎಸ್.ಎಸ್.ಭೈರಪ್ಪ

ನನ್ನ ಆಯ್ಕೆ ಡಾ.ಎಸ್.ಎಸ್.ಭೈರಪ್ಪ

Bhagavan Kyasavara ಎಂಬುವವರು ನನ್ನ ಮೊದಲ ಆಯ್ಕೆ ದೇಶದ ಅತ್ಯುತ್ತಮ ಕಾದಂಬರಿಕಾರ ಡಾ.ಎಸ್.ಎಸ್.ಭೈರಪ್ಪ. ಆದರೆ, ಮಟ್ಟೂ,ಬರಗೂರು,ಮರುಳರು ಅದಕ್ಕೆ ಎಂದಿಗೂ ಅವಕಾಶ ಕೊಡುವುದಿಲ್ಲ.ಹಾಗಾಗಿ ಧಾರವಾಡದ ಸಜ್ಜನ ಕವಿ ಚೆನ್ನವೀರ ಕಣವಿ ಆಗಬಹುದು. ಮೂರನೇ ಆಯ್ಕೆ ಪ್ರೊ.ನಿಸಾರ್ ಅಹಮದ್. ಹಾಗಲ್ಲದೆ ಒಬ್ಬ ಕ್ರೀಡಾಪಟು ಆಗಬೇಕೆಂದರೆ ಕನ್ನಡಿಗ ಅನಿಲ್ ಕುಂಬ್ಳೆ ಎಂದು ಅಭಿಪ್ರಾಯಪಟ್ಟಿದ್ದಾರೆ. [ಚಿತ್ರದಲ್ಲಿ ವಿವಿಧ ಓದುಗರ ಅಭಿಪ್ರಾಯವಿದೆ]

ತಿಮ್ಮಕ್ಕ ಅವರು ಆಯ್ಕೆ ಯೋಗ್ಯವಾದದ್ದು

ತಿಮ್ಮಕ್ಕ ಅವರು ಆಯ್ಕೆ ಯೋಗ್ಯವಾದದ್ದು

Ravindra Prasad ಎನ್ನುವ ಓದುಗರು ಪರಿಸರ ಪ್ರೇಮಿ ತಿಮ್ಮಕ್ಕನವರು ದಸರಾ ಮಹೋತ್ಸವದ ಉದ್ಗಾಟನೆಗೆ ಅತ್ಯುತ್ತಮ.. ಯೋಗ್ಯ ಅಯ್ಕೆ..ತಮ್ಮ ನಿಸ್ವಾರ್ಥ ಸೇವೆಯಿಂದ ರಾಜ್ಯದ ಜನತೆಯ ಮನ ಗೆದ್ದಿರುವ ತಿಮ್ಮಕ್ಕನವರಿಗೆ ರಾಜ್ಯ ಸಲ್ಲಿಸಬಹುದಾದ ಅಲ್ಪ ಗೌರವ ಎಂದು ಕಮೆಂಟ್ ಹಾಕಿದ್ದಾರೆ.

ಸಾಲು ಮರದ ತಿಮ್ಮಕ್ಕ ಉತ್ತಮ ಆಯ್ಕೆ

ಸಾಲು ಮರದ ತಿಮ್ಮಕ್ಕ ಉತ್ತಮ ಆಯ್ಕೆ

ಸೈ ಫುಲ್ಲಾ ಎಂಬ ಓದುಗರು ಲಕ್ಷಾಂತರ ಜನಕ್ಕೆ ಪುಕ್ಕಟೆ ಆಮ್ಲಜನಕ ಒದಗಿಸಿರೊ ಸಾಲು ಮರದ ತಿಮ್ಮಕ್ಕ ಉತ್ತಮ ಆಯ್ಕೆ ಎಂದು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Environmentalist Saalumarada Thimmakka should inaugurate Mysuru Dasara 2016 said Oneindia Kannada readers.
Please Wait while comments are loading...