ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಕ್ಕಿನ ಮರಿಗೆ ಹಾಲೂಡಿಸಿ ವಾತ್ಸಲ್ಯ ಮೆರೆದ ಬೀದಿ ನಾಯಿ!

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜುಲೈ 06 : ಮನುಷ್ಯನಲ್ಲಿ ಮಾನವೀಯತೆ ಕಡಿಮೆಯಾಗುತ್ತಿದ್ದು, ಅತ್ಯಾಚಾರ ಅನಾಚಾರಗಳು ಮನೆ ಮಾಡುತ್ತಿವೆ. ಇದಕ್ಕೆ ಇತ್ತೀಚೆಗೆ ನಡೆಯುತ್ತಿರುವ ವಿದ್ಯಮಾನಗಳೇ ಜ್ವಲಂತ ಸಾಕ್ಷಿಯಾಗುತ್ತಿವೆ.

ವಿಕೃತಿ ಮೆರೆಯುತ್ತಿರುವ ಮನುಷ್ಯನನ್ನು ಪ್ರಾಣಿಗಳಿಗೆ ಹೋಲಿಸಲಾಗುತ್ತದೆ. ಆದರೆ ಕ್ರೂರ ಪ್ರಾಣಿಗಳಲ್ಲೂ ಮಾನವೀಯತೆಯಿದೆ ಎಂಬುದಕ್ಕೆ ನಾಯಿಯೊಂದು, ತಾಯಿಯನ್ನು ಕಳೆದುಕೊಂಡ ಬೆಕ್ಕುಮರಿಗಳಿಗೆ ಹಾಲುಣಿಸಿ ಸಾಕುತ್ತಿರುವುದು ಪಿರಿಯಾಪಟ್ಟಣ ತಾಲೂಕಿನ ಕುಂದನಹಳ್ಳಿ ಗ್ರಾಮದಲ್ಲಿ ಕಂಡುಬಂದಿದೆ. [ಮಾನವಂತ ಪೊಲೀಸ್‌ಗೆ ಹೃದಯತುಂಬಿದ ಅಭಿನಂದನೆ!]

Stray dog mothers abandoned kittens in a village in Mysuru

ಕುಂದನಹಳ್ಳಿ ನಿವಾಸಿ ಅಣ್ಣೇಗೌಡರ ಮನೆಯಲ್ಲಿದ್ದ ಬೆಕ್ಕೊಂದು ಎರಡು ಮರಿಗಳಿಗೆ ಜನ್ಮ ನೀಡಿತ್ತು. ಮರಿಗಳು ಬೆಳೆಯುತ್ತಿದ್ದಂತೆಯೇ ತಾಯಿ ಬೆಕ್ಕು ಸತ್ತು ಹೋಯಿತು. ತಾಯಿ ಸತ್ತ ಬಳಿಕ ಹಾಲಿಲ್ಲದೆ ಮರಿಗಳು ಅಳುತ್ತಾ ಕೂಗಾಡತೊಡಗಿದವು.

ಬೆಕ್ಕುಮರಿಗಳು ಮನೆಯಿಂದ ಹೊರಬಂದು ಹಾಲಿಗಾಗಿ ತವಕಿಸತೊಡಗಿದ್ದವು. ಆಗ ಬೀದಿನಾಯಿಯೊಂದು ಈ ಮರಿಗಳನ್ನು ತನ್ನ ಬಳಿಗೆ ಸೆಳೆದು ಕೊಂಡು ಹಾಲುಣಿಸತೊಡಗಿತು. [ಸುಂದರಿ ಯುವತಿ ಮತ್ತು ಆಕೆಯ ಜಾಣ ನಾಯಿ!]

ಸಾಮಾನ್ಯವಾಗಿ ಬೆಕ್ಕು ಮತ್ತು ನಾಯಿಗಳು ಕಡುವೈರಿಗಳು. ಆದರೆ ಇಲ್ಲಿ ಮಾನವೀಯತೆ ಮೆರೆದ ಬೀದಿ ನಾಯಿ ಮರಿಗಳನ್ನು ತನ್ನ ಮರಿಯಂತೆಯೇ ಹಾಲು ನೀಡಿ ಪೋಷಿಸುತ್ತಿದೆ. ಇದು ನೋಡುಗರಿಗೆ ಅಚ್ಚರಿ ಮೂಡಿಸುತ್ತಿದ್ದರೂ ನಾಯಿಯ ಮಾತೃ ವಾತ್ಸಲ್ಯವನ್ನು ಮೆಚ್ಚಲೇ ಬೇಕು. [ಬಿಲಿಯನೇರ್‌ಗಳ ಕಣ್ಣಿಗೆ ಬೀದಿನಾಯಿಗಳು ಬೀಳಂಗಿಲ್ಲ!]

English summary
A stray dog has shown what animals are made of by mothering kittens which were abandoned by cat. The cat died after giving birth to kittens. But, dog showed great humanity by milking the new born. ಬೆಕ್ಕಿನ ಮರಿಗೆ ಹಾಲೂಡಿಸಿ ವಾತ್ಸಲ್ಯ ಮೆರೆದ ಬೀದಿ ನಾಯಿ!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X