ಮೈಸೂರು: ಮನೆಯ ಮುಂದೆಯೇ ವ್ಯಕ್ತಿ ಬರ್ಬರ ಹತ್ಯೆ

Posted By:
Subscribe to Oneindia Kannada

ಮೈಸೂರು, ಅಕ್ಟೋಬರ್ 12 : ವ್ಯಕ್ತಿಯೋರ್ವನನ್ನ ಆತನ ಮನೆಯ ಮುಂದೆಯೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮೈಸೂರಿನಲ್ಲಿ ಇಂದು(ಅ.12) ನಡೆದಿದೆ.

ಕಿರುಕುಳ ಆರೋಪ, ಕಾಫಿ ಡೇ ನೌಕರನಿಂದ ಮೈಸೂರಲ್ಲಿ ಆತ್ಮಹತ್ಯೆ ಬೆದರಿಕೆ

ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಬಸಲಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರಾತ್ರಿ ಮನೆಯಿಂದ ಹೊರಹೋದ ವ್ಯಕ್ತಿ ಬೆಳಗ್ಗೆ ಅರೆನಗ್ನ ಶವವಾಗಿ ಪತ್ತೆಯಾಗಿದ್ದಾನೆ. ವೆಂಕಟೇಶ್ (30) ಕೊಲೆಯಾದ ವ್ಯಕ್ತಿ.

Strange people kill a man infront of his house in Mysuru

ಇವರು ಕಂಪಲಾಪುರದ ತಂಬಾಕು ಬೋರ್ಡ್ ನಲ್ಲಿ ಕೆಲಸ ಮಾಡುತ್ತಿದ್ದರು. ವೆಂಕಟೇಶ್ ನಿನ್ನೆ ರಾತ್ರಿ ಮನೆಯಿಂದ ಹೊರಹೋಗಿದ್ದರು. ಇಂದು ಮುಂಜಾನೆ ಅವರ ತಂದೆ ಕಸ ಸುರಿಯಲು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.

ವೆಂಕಟೇಶ್ ತಮ್ಮ ಮನೆಯ ಬಳಿಯೇ ಶವವಾಗಿ ಪತ್ತೆಯಾಗಿದ್ದು, ಯಾರು ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿಲ್ಲ. ಈ ಕುರಿತು ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A man was killed infront of his house in Mysuru. The killers have yet to be known. The incident took place on Oct 12th morning.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ