ನಾಯಿ ಕದ್ದು ಒಎಲ್ ಎಕ್ಸ್ ನಲ್ಲಿ ಮಾರಾಟಕ್ಕಿಟ್ಟ ಭೂಪ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಆಗಸ್ಟ್ 26 :ಮನೆಯ ಮುಂದೆ ಕಟ್ಟಿ ಹಾಕಿದ್ದ ನಾಯಿಯೊಂದನ್ನು ಖದೀಮನೊಬ್ಬ ಕಳವು ಮಾಡಿದ್ದಲ್ಲದೆ, ನಾಯಿ ಮಾರಾಟಕ್ಕಿದೆ ಎಂದು ಒಎಲ್ ಎಕ್ಸ್ ಹಾಗೂ ಪತ್ರಿಕೆಯಲ್ಲಿ ಫೋಟೋ ಸಮೇತ ಜಾಹೀರಾತು ನೀಡಿದ ಘಟನೆ ನಗರದಲ್ಲಿ ನಡೆದಿದೆ.

ಮೈಸೂರು ಕೋ-ಆಪರೇಟಿವ್ ಬ್ಯಾಂಕ್ ಸೂಪರ್ ಸೀಡ್

ನಗರದ ಜಯಲಕ್ಷ್ಮಿಪುರಂ ನಿವಾಸಿಯೊಬ್ಬರ ಮನೆಯಿಂದ ಗೋಲ್ಡನ್ ರಿಟ್ರೀವರ್ ಜಾತಿಯ ನಾಯಿ ಕಳವಾಗಿತ್ತು. ಅನಿಲ್ ಕುಮಾರ್ ಜೆ ಎಂಬುವರು ನಾಯಿಯನ್ನು ಸಾಕಿದ್ದರು. ಆಗಸ್ಟ್ 16ರಂದು ಬೆಳಗ್ಗೆ ಮನೆಯ ಕಾಂಪೌಂಡ್ ಒಳಗಿದ್ದ ನಾಯಿಯನ್ನು ಯಾರೋ ಕಳವು ಮಾಡಿಕೊಂಡು ಹೋಗಿದ್ದರು.

Stolen dog put for sale in OLX

ಆಶ್ಚರ್ಯ ಎಂಬಂತೆ ಮಾರನೇ ಬೆಳಗ್ಗೆ ಅವರ ನಾಯಿಯ ಫೋಟೋ ಒಎಲ್ ಎಕ್ಸ್ ಜಾಲತಾಣದಲ್ಲಿ ಅನಿಲ್ ಅವರಿಗೆ ಕಂಡುಬಂದಿದೆ.

ಇದೇ ವೇಳೆ ನಾಯಿಯು ಮಾರಾಟಕ್ಕಿದೆ ಎಂದು ಸ್ಥಳೀಯ ಪತ್ರಿಕೆಯಲ್ಲಿಯೂ ಜಾಹೀರಾತು ಪ್ರಕಟವಾಗಿದೆ. ಜಾಹೀರಾತು ನೀಡಿದವರ ಹೆಸರು ಎಸ್.ಮಂಜುನಾಥ್, ಹಲೀಂ ನಗರ ಎಂಬುದು ತಿಳಿದು ಬಂದಿದೆ. ಈ ಸಂಬಂಧ ಅನಿಲ್ ಅವರು ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Stolen dog put for sale in OLX in Mysuru. Jayalakshmipuram resident Anil Kumar filed a complaint with police.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ