15ರಿಂದ ಮೈಸೂರಿನಲ್ಲಿ ರಾಜ್ಯ ಮಟ್ಟದ ಬ್ರಾಹ್ಮಣ ಯುವಸಮಾವೇಶ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಅಕ್ಟೋಬರ್ 12: ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯಿಂದ ರಾಜ್ಯ ಮಟ್ಟದ ಬ್ರಾಹ್ಮಣ ಯುವ ಸಮಾವೇಶ ಅಯೋಜಿಸಲಾಗಿದೆ. ಅಕ್ಟೋಬರ್ 15, 16ರಂದು ಗನ್ ಹೌಸ್ ಮುಂಭಾಗವಿರುವ ಶಂಕರಮಠ, ವಿದ್ಯಾಶಂಕರ ನಿಲಯದ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಮಳ್ಳೂರು ಗುರುಪ್ರಸಾದ್ ನೇತೃತ್ವ ವಹಿಸಲಿದ್ದಾರೆ.

ಅಕ್ಟೋಬರ್ 15ರ ಬೆಳಗ್ಗೆ 10.30ರಿಂದ 16ರ ಸಂಜೆ 5ರವರೆಗೆ ಸಮಾವೇಶ ನಡೆಯಲಿದೆ. ನಿವೃತ್ತ ರಾಜ್ಯಪಾಲ ರಾಮಾ ಜೋಯಿಸ್ ಅವರು ಶನಿವಾರ ಸಮಾವೇಶಕ್ಕೆ ಚಾಲನೆ ನೀಡಲಿದ್ದು, ಮಳ್ಳೂರು ಗುರುಪ್ರಸಾದ್ ಅಧ್ಯಕ್ಷತೆ ವಹಿಸಲಿದ್ದಾರೆ. ದತ್ತ ವಿಜಯಾನಂದ ಸರಸ್ವತಿ ಸ್ವಾಮೀಜಿ ಆಚಾರತ್ರಯರ ಸಂದೇಶವನ್ನು ತಿಳಿಸಲಿದ್ದಾರೆ.[ಸಿಎಂ ಸಿದ್ದರಾಮಯ್ಯನವರಿಗೆ ರಾಮಚಂದ್ರಾಪುರ ಮಠದ ಓಪನ್ ಲೆಟರ್]

State level Brahmin youth convention in Mysore

ಭಾಷ್ಯಂ ಸ್ವಾಮೀಜಿ, ಭಾನುಪ್ರಕಾಶ್ ಶರ್ಮ, ಇಳೈ ಆಳ್ವಾರ್ ಸ್ವಾಮೀಜಿ, ಆರ್.ಗುರು, ಶಾಸಕ ಪ್ರಸನ್ನ ಕುಮಾರ್, ಮಾಜಿ ಶಾಸಕ ಎಸ್.ಎ.ರಾಮದಾಸ್, ಪ್ರವೀಣ್ ಗೋಡ್ಖಿಂಡಿ, ಅರ್ಚನಾ ಉಡುಪ, ಕೆ.ಕಲ್ಯಾಣ್, ಸಿಹಿಕಹಿ ಚಂದ್ರು ಮತ್ತಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

15ರಂದು ಮಧ್ಯಾಹ್ನ 12ಕ್ಕೆ 'ಬ್ರಾಹ್ಮಣತ್ವ ನಡೆದು ಬಂದ ದಾರಿ', ಮಧ್ಯಾಹ್ನ 2.30ಕ್ಕೆ 'ಪ್ರಸಕ್ತ ದಿನಗಳಲ್ಲಿ ವಿಪ್ರ ಮಹಿಳೆಯರ ಕರ್ತವ್ಯ' ವಿಚಾರ ಗೋಷ್ಠಿ, ಸಂಜೆ 4ಕ್ಕೆ ವಿಪ್ರ ಜಾಗೃತಿ ಜಾಥಾ ನಡೆಯಲಿದೆ. ಆ ನಂತರ ಶಿಕ್ಷಣ, ಆರೋಗ್ಯ, ಉದ್ಯೋಗದ ಕ್ಷೇತ್ರದಲ್ಲಿ ವಿಪ್ರರು ಎದುರಿಸುತ್ತಿರುವ ಸಮಸ್ಯೆಗಳು, 'ರಾಜಕೀಯವಾಗಿ, ಸಾಮಾಜಿಕವಾಗಿ ಯುವ ವಿಪ್ರರ ನಡೆ' ವಿಷಯದ ಬಗ್ಗೆ ಗೋಷ್ಠಿ ನಡೆಯಲಿದೆ.[ಪೋಷಕರ ದೂರ ಮಾಡುವ ಹೆಂಡತಿಗೆ ಡೈವೋರ್ಸ್ ನೀಡಬಹುದು: ಸುಪ್ರೀಂ]

State level Brahmin youth convention in Mysore

16ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ರಾಮಾನುಜ ನಾರಾಯಣ ಜೀಯರ್ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಕೆ.ಎನ್.ವೆಂಕಟನಾರಾಯಣ್ ಅಧ್ಯಕ್ಷತೆ ಇರಲಿದೆ. ಸಚಿವರಾದ ರಮೇಶ್ ಕುಮಾರ್, ಆರ್.ವಿ.ದೇಶಪಾಂಡೆ, ಶಾಸಕರಾದ ದಿನೇಶ್ ಗುಂಡೂರಾವ್, ವೈ.ಎಸ್.ವಿ.ದತ್ತ ಮತ್ತಿತರರು ಭಾಗವಹಿಸುವರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Brahmin state level youth convention in Mysuru on October 15th and 16th. Retired Governer Rama Jois will inaugurate the convention on 15th. Valedictory on 16th.
Please Wait while comments are loading...