ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು: 10 ತಿಂಗಳಲ್ಲಿ 24 ದಾಳಿ, 506 ದೂರು ದಾಖಲಿಸಿದ ಎಸಿಬಿ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಫೆಬ್ರವರಿ 3: ಮುಖ್ಯಮಂತ್ರಿಗಳಿಂದ ಪ್ರಾರಂಭಗೊಂಡ ಭ್ರಷ್ಟಾಚಾರ ನಿಗ್ರಹ ದಳ ಮೈಸೂರಿನಲ್ಲಿ 10 ತಿಂಗಳ ಅವಧಿಯಲ್ಲಿ 24 ದಾಳಿಗಳನ್ನು ನಡೆಸಿ ಎಸಿಬಿ ಪೊಲೀಸರು ಭ್ರಷ್ಟರಲ್ಲಿ ನಡುಕ ಹುಟ್ಟಿಸಿದ್ದಾರೆ.

2016 ಏಪ್ರಿಲ್ ತಿಂಗಳಿನಲ್ಲಿ ಚಾಮರಾಜನಗರ,ಮಂಡ್ಯ, ಹಾಸನ, ಕೊಡಗಿನಲ್ಲಿ ಎಸಿಬಿ ಉಪಕಚೇರಿಗಳನ್ನು ತೆರೆಯಲಾಗಿದ್ದು, ಆ ಕಚೇರಿಗಳ ಮೇಲುಸ್ತುವಾರಿಯನ್ನು ಮೈಸೂರು ವಲಯ ಕಚೇರಿಯನ್ನು ಪ್ರಾರಂಭಿಸಲಾಯಿತು. ಈ ಐದು ಕಚೇರಿಗಳ ಭ್ರಷ್ಟಾಚಾರ ಸಂಬಂಧ ಒಟ್ಟು ಒಟ್ಟು 506 ದೂರುಗಳ ಅರ್ಜಿಗಳು ಸಲ್ಲಿಕೆಯಾಗಿವೆ.

ವಲಯ ಕಚೇರಿಯಲ್ಲಿ ಇಬ್ಬರು ಮುಖ್ಯಪೇದೆಗಳು ಹಾಗೂ ಐವರು ಪೇದೆಗಳನ್ನು ಸಿಬ್ಬಂದಿಗಳನ್ನಾಗಿ ನಿಯೋಜಿಸಲಾಗಿದೆ. ಉಳಿದಂತೆ ಉಳಿದ ಜಿಲ್ಲಾ ಕಚೇರಿಗಳಲ್ಲಿ ಒಬ್ಬರು ಮುಖ್ಯಪೇದೆ ಹಾಗೂ ನಾಲ್ವರು ಪೇದೆಗಳಿದ್ದಾರೆ. ವಲಯ ಕಚೇರಿಯ ಅಧೀಕ್ಷಕರಾಗಿ ಬಿ.ಟಿ.ಕವಿತ ಅವರು ಸಮರ್ಥವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.[ಮೈಸೂರಿನ ಮುಡಾ ಸಹಾಯಕ ಇಂಜಿನಿಯರ್ ಮನೆ ಮೇಲೆ ಎಸಿಬಿ ದಾಳಿ]

ಇದುವರೆಗೂ 24 ಕಡೆಗಳಲ್ಲಿ ದಾಳಿ

ಇದುವರೆಗೂ 24 ಕಡೆಗಳಲ್ಲಿ ದಾಳಿ

ಕಚೇರಿ ಆರಂಭವಾದಾಗಿನಿಂದ, ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಉಪ ನೋಂದಣಿ ಕಚೇರಿ, ಉಗ್ರಾಣ ನಿಗಮ, ಕಂದಾಯ ಇಲಾಖೆ, ಗ್ರಾಮ ಪಂಚಾಯಿತಿ ಸೇರಿದಂತೆ 24 ವಿವಿಧ ಇಲಾಖೆಗಳ ನೌಕರರ ಮೇಲೆ ದಾಳಿ ನಡೆಸಿರುವ ಎಸಿಬಿ ಪೊಲೀಸರು ಅವರುಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ದೂರು ನೀಡುವುದು ಹೇಗೆ...?

ದೂರು ನೀಡುವುದು ಹೇಗೆ...?

ಎಸಿಬಿಗೆ ದೂರು ಸಲ್ಲಿಸುವವರು ನೇರವಾಗಿ ಕಚೇರಿಗೆ ತೆರಳಿ ದೂರು ದಾಖಲಿಸಬಹುದು. ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಪ್ರಕರಣಗಳ ದೂರಿಗೆ ಸಂಬಂಧಿಸಿದಂತೆ ದೂರುದಾರರ ಹೆಸರನ್ನು ಗೌಪ್ಯವಾಗಿಡಲಾಗುವುದು. ಉಳಿದಂತೆ ಭ್ರಷ್ಟಾಚಾರ, ಲಂಚ ಪ್ರಕರಣಗಳಿಗೆ ಸಂಬಂಧಿಸಿದಂತೆ ನೇರವಾಗಿ ಅಥವಾ ಅಂಚೆ ಮೂಲಕ ದೂರು ಸಲ್ಲಿಸಬಹುದು.

ಭ್ರಷ್ಟಾಚಾರ ಪ್ರಕರಣಗಳಿಗೆ ಮಾತ್ರ ದೂರು

ಭ್ರಷ್ಟಾಚಾರ ಪ್ರಕರಣಗಳಿಗೆ ಮಾತ್ರ ದೂರು

ಐದೂ ಜಿಲ್ಲೆಗಳ ಕಚೇರಿಯಲ್ಲಿ ಬೇಕಾದಷ್ಟು ದೂರುಗಳು ಸಲ್ಲಿಕೆಯಾಗುತ್ತಿವೆ. ಆದರೆ, ಭ್ರಷ್ಟಾಚಾರ ಸಂಬಂಧಿಸಿದಂತೆ ಹೆಚ್ಚು ದೂರುಗಳು ಸಲ್ಲಿಕೆಯಾಗುತ್ತಿಲ್ಲ. ನಮಗೆ ಬಂದಿರುವ ದೂರುಗಳಲ್ಲಿ ಹೆಚ್ಚಿನವು ಆಡಳಿತಕ್ಕೆ ಸಂಬಂಧಪಟ್ಟವು, ನೌಕರರು ಕಚೇರಿಗೆ ಸರಿಯಾಗಿ ಬರುತ್ತಿಲ್ಲ, ಕರ್ತವ್ಯವನ್ನು ಸರಿಯಾಗಿ ಮಾಡುತ್ತಿಲ್ಲ, ನಮಗೆ ವಂಚನೆಯಾಗಿದೆ ಎಂಬ ದೂರುಗಳು ಹೆಚ್ಚಾಗಿ ಬರುತ್ತಿವೆ. ಹೀಗಾಗಿ ಇಂತಹ ದೂರುಗಳನ್ನು ಎಸಿಬಿ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ ಎನ್ನುತ್ತಾರೆ ಮೈಸೂರು ವಲಯದ ಎಸಿಬಿ ಅಧೀಕ್ಷಕಿ ಕವಿತಾ.

ದೂರು ಸಲ್ಲಿಸಲು ಇಲ್ಲಿ ಕರೆ ಮಾಡಿ

ದೂರು ಸಲ್ಲಿಸಲು ಇಲ್ಲಿ ಕರೆ ಮಾಡಿ

ಐದೂ ಜಿಲ್ಲೆಗಳ ಡಿಎಸ್ ಪಿ ಅವರ ದೂರವಾಣಿಗೆ ಕರೆಮಾಡುವ ಮೂಲಕ ಕೂಡ ದೂರು ಸಲ್ಲಿಸಬಹುದು.
ಎಸಿಬಿ ಅಧೀಕ್ಷಕಿ ಕವಿತ: ದೂ.ಸಂ. 9480806205,
ಮೈಸೂರು ಡಿಎಸ್ ಪಿ: ದೂ.ಸಂ. 9480806222,
ಮಂಡ್ಯ ಡಿಎಸ್ ಪಿ: ದೂ.ಸಂ. 9480806223.
ಹಾಸನ ಡಿಎಸ್ ಪಿ: ದೂ.ಸಂ. 9480806224
ಚಾಮರಾಜನಗರ ಡಿಎಸ್ ಪಿ: ದೂ.ಸಂ. 9480806226,
ಕೊಡಗು ಡಿಎಸ್‍ಪಿ: ದೂ.ಸಂ. 9480806225.

English summary
Starting a 10 months, 24 raid and 506 complaint filed the Anti-Corruption Bureau. For ACB a very good response in Mysore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X