ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಓದಿಗಾಗಿ ಬ್ಯಾಡ್ಮಿಂಟನ್ ಆಡುವುದು ಬಿಟ್ಟಿರಲಿಲ್ಲ: SSLC ಟಾಪರ್ ಯಶಸ್

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಮೇ 07: ಅವನು 625 ಕ್ಕೆ 625 ಅಂಕವನ್ನು ತೆಗೆದ ದಿಟ್ಟ ಹುಡುಗ. ಪರೀಕ್ಷೆಯನ್ನು ಸರಾಗವಾಗಿ ನೀರು ಕುಡಿದಂತೆ ಬರೆಯುತ್ತಿದ್ದ ಎಸ್ಎಸ್ ಎಲ್ ಸಿ ಟಾಪರ್ ಇಂದಿನ ಫಲಿತಾಂಶದಲ್ಲಿ ರಾಜ್ಯಕ್ಕೆ ನಂಬರ್ 1 ಸ್ಥಾನ ಪಡೆದ ಪೋರ. ಅವನೇ ಮೈಸೂರಿನ ಸದ್ವಿದ್ಯಾ ವಿದ್ಯಾಸಂಸ್ಥೆಯ ಯಶಸ್ ಎಂ.ಎಸ್.

ಅಪ್ಪ ಜೆಎಸ್ ಎಸ್ ಕಾಲೇಜಿನಲ್ಲಿ ಕ್ಲರ್ಕ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಾನು ಟಾಪ್ 12 ರ‍್ಯಾಂಕ್ ಒಳಗೆ ಬರುತ್ತೇನೆಂದು ಅಂದುಕೊಂಡಿದ್ದೇ. ಆದರೆ ಟಾಪ್ ಫಸ್ಟ್ ಬರುತ್ತೇನೆಂದು ನೆನಸಿಯೂ ಇರಲಿಲ್ಲ. ನನಗೆ ರಿಸಲ್ಟ್ ಬಂದಾಗ ನಂಬಲಸಾಧ್ಯವಾಗಿತ್ತು. ಅಪ್ಪ- ಅಮ್ಮ, ಅಕ್ಕ ನನ್ನ ಫಲಿತಾಂಶ ನೋಡಿ ಸಂತಸಗೊಂಡಿದ್ದಾರೆ ಎಂದು ಒನ್ ಇಂಡಿಯಾಗೆ ನೀಡಿದ ವಿಶೇಷ ಸಂದರ್ಶನದಲ್ಲಿ ನಗುತ್ತಲೇ ಉತ್ತರಿಸುತ್ತಾರೆ ಯಶಸ್.

SSLC ಫಲಿತಾಂಶ: ಉಡುಪಿಗೆ ಮೊದಲ ಸ್ಥಾನ, ಯಾದಗಿರಿ ಕೊನೆಯ ಸ್ಥಾನ SSLC ಫಲಿತಾಂಶ: ಉಡುಪಿಗೆ ಮೊದಲ ಸ್ಥಾನ, ಯಾದಗಿರಿ ಕೊನೆಯ ಸ್ಥಾನ

ನಾನು ಓದುವ ವಿಷಯದಲ್ಲಿ ಸ್ಪೆಷಲ್ ಎಂದೇನು ಗಮನಿಸಿ ಓದಿಲ್ಲ. ಟೆನ್ಷನ್ ಮಾಡಿಕೊಂಡು ಓದುವ ಮನಸ್ಥಿತಿ ನನ್ನದಿಲ್ಲ . ನನ್ನಿಷ್ಟದ ಬ್ಯಾಡ್ಮಿಟನ್ಆಟವಾಡೋದನ್ನು ಎಂದಿಗೂ ಬಿಟ್ಟಿಲ್ಲ. ರೆಗ್ಯುಲರ್ ಪಾಠ ಮಾಡಿದ್ದನ್ನು ಓದಿ, ಕೊನೆ ಟೈಂ ನಲ್ಲಿ ಓದಿದ್ದು ಕೊನೆಯವರೆಗೂ ಉಳಿಯುವುದಿಲ್ಲ ಎಂಬ ಅಭಿಲಾಷೆ ನನ್ನದು.

SSLC topper says no subject was favorite and tough too!

ದಿನನಿತ್ಯವೂ ಟ್ಯೂಷನ್ ಗೆ ಹೋಗುತ್ತಿದೆ. ನಾನು ಯಾವುದನ್ನೂ ಕಷ್ಟಪಟ್ಟು ಓದಿಲ್ಲ. ನನಗೆ ಯಾವೊಂದು ವಿಷಯವನ್ನು ಫೆವರೆಟ್ ಎಂದು ಪರಿಗಣಿಸಿ ಓದಲಿಲ್ಲ. ಏಕೆಂದರೆ ಮಿಕ್ಕ ವಿಷಯ ಕಷ್ಟವೆಂದೆನಿಸುತ್ತದೆ ಎಂದೆನಿಸುವ ಭಾವ ಮೂಡುತ್ತದೆ ಎಂದು ನನ್ನ ದಿನ ಗುಟ್ಟನ್ನು ರಟ್ಟು ಮಾಡಿದ ಯಶಸ್.

ಕರ್ನಾಟಕ SSLC ಫಲಿತಾಂಶದ ಪ್ರಮುಖ ಅಂಕಿ ಅಂಶಗಳು ಇಲ್ಲಿವೆಕರ್ನಾಟಕ SSLC ಫಲಿತಾಂಶದ ಪ್ರಮುಖ ಅಂಕಿ ಅಂಶಗಳು ಇಲ್ಲಿವೆ

ಪರೀಕ್ಷಯ ಸಂದರ್ಭದಲ್ಲಿ ಕೂಲ್ ಆಗಿ ಇರುತ್ತಿದೆ. ಪ್ರತಿ ಪತ್ರಿಕೆಯನ್ನು ಅರ್ಧ ಗಂಟೆಗೂ ಮುಂಚಿತವಾಗಿಯೇ ಮುಗಿಸುತ್ತಿದೆ. ಆನಂತರ ಪೇಪರ್ ಅನ್ನು ರಿವಿಸನ್ ಮಾಡುತ್ತಿದೆ. ನನ್ನ ಹಿಂದಿನ ಪರೀಕ್ಷೆಗಳಲ್ಲಿ ಎಲ್ಲಿಯೂ ಇಷ್ಟೊಂದು ಅಂಕಗಳು ಬಂದಿರಲಿಲ್ಲ.

SSLC topper says no subject was favorite and tough too!

620 ಬರುತ್ತಿತ್ತು. ಆದರೆ 625 ಕ್ಕೆ 625 ಮಾರಕ್ಸ್ ತೆಗೆದದ್ದು ನೋಡಿ ನನಗೆ ಸಂತಸವಾಗುತ್ತಿದೆ. ನಾನು ಪಿಸಿಎಂಬಿ ತೆಗೆದುಕೊಂಡು ಮುಂದೆ ಐಐಟಿ ಸೇರಿ ಏರೋನಾಟಿಕ್ ಎಂಜಿನಿಯರ್ ಆಗಬೇಕೆಂಬ ಹಂಬಲವಿದೆ. ನನ್ನ ಸಾಧನೆಯ ಕ್ರೆಡಿಟ್ ನನ್ನ ಶಿಕ್ಷಕರ ಹಾಗೂ ಪೋಷಕರ ಪ್ರತಿಫಲದ ಫಲ ಎನ್ನುತ್ತಾರೆ ಯಶಸ್.

ಇನ್ನು ಫೇಲ್ ಆದವರು ಇದೇ ಕೊನೆ ಎಂದು ಭಾವಿಸುವುದು ಬೇಡ. ಮುಂದೆಯೂ ಓದಿ. ಸತತ ಪ್ರಯತನ್ವೇ ಸಫಲತೆಗೆ ದಾರಿ ಎಂಬ ಮಾತಿದೆ. ಗೆಲುವು ನಿಮ್ಮದಾಗುತ್ತದೆ ಎಂದು ಸ್ಫೂರ್ತಿ ತುಂಬುವ ಮಾತುಗಳನ್ನಾಡಿ ಫೋಟೋಗೆ ಪೋಸ್ ಕೊಟ್ಟ ಯಶಸ್.

SSLC topper says no subject was favorite and tough too!

ದ್ವಿತೀಯ ಸ್ಥಾನ ಪಡೆದ ಮೈಸೂರಿನ ಇಬ್ಬರು ವಿದ್ಯಾರ್ಥಿನಿಯರು : ಮತ್ತೊಂದು ಸಂತಸಕಾರಿ ವಿಷಯವೆಂದರೇ ಈ ಬಾರಿಯ ಈ ಫಲಿತಾಂಶದಲ್ಲಿ ಒಂದೇ ಶಾಲೆಯ ಮೂವರು ವಿದ್ಯಾರ್ಥಿಗಳು ಟಾಪ್ 3 ರ‍್ಯಾಂಕ್ ಗಳನ್ನು ಮುಡಿಗೇರಿಸಿಕೊಂಡಿರುವುದು.

ಮೈಸೂರಿನ ಪ್ರತಿಷ್ಠಿತ ಸದ್ವಿದ್ಯಾ ಶಾಲೆಯ ಯಶಸ್ ಮೊದಲ ಸ್ಥಾನ ಗಿಟ್ಟಿಸಿಕೊಂಡರೆ, ಇತ್ತ ಕೃತಿಕಾ ಹಾಗೂ ಅದಿತಿ ಇಬ್ಬರೂ ಸಹ 624 ಅಂಕಗಳನ್ನು ಪಡೆದು ಹ್ಯಾಟ್ರಿಕ್ ಭಾರಿಸಿದ್ದಾರೆ. ಇದು ಕಾಲೇಜಿನ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರಿಗೆ ಅತೀವ ಖುಷಿ ತರಿಸಿದೆ.

English summary
MD Yashas, student at Sadvidya college in Mysuru topped with 625 out of 625 and said he had never treated any subject as favorite and even tough too.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X