ಜ.13ರಿಂದ ಮೈಸೂರಿನಲ್ಲಿ ಅಂತಾರಾಷ್ಟ್ರೀಯ ನಾಟಕೋತ್ಸವ

By: ಯಶಸ್ವಿನಿ ಎಂ.ಕೆ
Subscribe to Oneindia Kannada

ಮೈಸೂರು, ಜನವರಿ 10: ಮೈಸೂರಿನ ರಂಗಾಯಣದಲ್ಲಿ ಜನವರಿ 13-18ರ ವರೆಗೆ ಅಂತಾರಾಷ್ಟ್ರೀಯ ನಾಟಕೋತ್ಸವ ನಡೆಯಲಿದೆ. ಇದರ ಉದ್ಘಾಟನೆಗೆ ಹಿರಿಯ ಕಲಾವಿದ ಓಂ ಪುರಿಯನ್ನು ಆಹ್ವಾನಿಸಲಾಗಿತ್ತು. ಅವರ ನಿಧನ ಹಿನ್ನೆಲೆ ಶ್ರೀಲಂಕಾದ ಹಿರಿಯ ರಂಗಕರ್ಮಿ ಪರಾಕ್ರಮ ನಿರಿಯೆಲ್ಲ ಆಯ್ಕೆ ಮಾಡಲಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ದಯಾನಂದ ಟಿಕೇಟ್ ಬಿಡುಗಡೆಗೊಳಿಸಿ ಮಾತನಾಡಿ, ವಿದೇಶಿ ನಾಟಕಗಳಿಗೆ ರು,100 ಮತ್ತು ದೇಶೀಯ ನಾಟಕಗಳಿಗೆ ರು.50 ಟಿಕೇಟ್ ದರ ನಿಗದಿ ಪಡಿಸಲಾಗಿದ್ದು, ಆಸಕ್ತರು ರಂಗಾಯಣದ ಕಚೇರಿ ಅಥವಾ www.bloom.com ನಲ್ಲಿ ಟಿಕೇಟ್ ಪಡೆಯಬಹುದಾಗಿದೆ ಎಂದರು.

SriLankan director Parakrama Niriella will inaugurate Rangayana ‘Bahuroopi’ program

ಓಂ ಪುರಿ ಅವರನ್ನು ನಾಟಕೋತ್ಸವ ಉದ್ಘಾಟನೆಗೆ ಆಹ್ವಾನಿಸಲಾಗಿತ್ತು. ಆದರೆ ಅವರ ನಿಧನದ ಹಿನ್ನೆಲೆಯಲ್ಲಿ ಶ್ರೀಲಂಕಾದ ಹಿರಿಯ ರಂಗಕರ್ಮಿ ಪರಾಕ್ರಮ ನಿರಿಯೆಲ್ಲ ಅವರನ್ನು ಆಹ್ವಾನಿಸಲಾಗಿದೆ ಎಂದು ಹೇಳಿದರು. ಈ ವೇಳೆ ಹಿರಿತೆರೆ ಕಿರುತೆರೆ ನಟ ಮಂಡ್ಯ ರಮೇಶ್, ರಂಗಾಯಣ ಉಪನಿರ್ದೇಶಕಿ ನಿರ್ಮಲಾ ಮಠಪತಿ ಇತರರಿದ್ದರು.

ಪರಾಕ್ರಮ ನಿರಿಯೆಲ್ಲ
ಶ್ರೀಲಂಕಾ ದೇಶದ ಪ್ರಮುಖ ನಿರ್ದೇಶಕರಲ್ಲೊಬ್ಬರಾದ ಪರಾಕ್ರಮ ನಿರಿಯೆಲ್ಲ ಸುಮಾರು ನಾಲ್ಕು ದಶಕಗಳಿಂದ ಶ್ರೀಲಂಕಾ ರಂಗಭೂಮಿಯಲ್ಲಿ ನಿರಂತರವಾಗಿ ದುಡಿಯುತ್ತಿದ್ದಾರೆ. ಸುಸಂಸ್ಕೃತ ಸಮಾಜವೊಂದನ್ನು ನಿರ್ಮಾಣ ಮಾಡುವಲ್ಲಿ ರಂಗಭೂಮಿ ಮೊದಲ ಹಾಗೂ ಮಹತ್ವದ ಪಾತ್ರವಹಿಸುತ್ತದೆ ಎಂದು ಬಲವಾಗಿ ನಂಬಿರುವ ಅವರು, ಶ್ರೀಲಂಕಾದಲ್ಲಿ ಮೊದಲ ಬಾರಿಗೆ ಬೀದಿ ನಾಟಕಗಳನ್ನು ಪ್ರಚುರ ಪಡಿಸಿ ಮೌಲ್ಯಗಳನ್ನು, ಮಾನವ ಪ್ರಜ್ಞೆಯನ್ನು ಬಿಂಬಿಸುವ ನಾಟಕಗಳನ್ನು ಬೀದಿ, ಬೀದಿಗಳಲ್ಲಿ ಗಲ್ಲಿಗಲ್ಲಿಗಳಲ್ಲಿ ಮಾಡಿಸಿ ರಂಗಕಲೆಯ ಬಗ್ಗೆ ಅರಿವು ಮೂಡಿಸಿದ್ದಾರೆ.

SriLankan director Parakrama Niriella will inaugurate Rangayana ‘Bahuroopi’ program

ಕೊಲಂಬೋದ ಲಿಯೋನಲ್ ವೆಂಟ್ ಮೆಮೋರಿಯಲ್ ಸೆಂಟರ್‍ನ ಆರ್ಟ್ ಥಿಯೇಟರ್ ಅಕಾಡೆಮಿಯಲ್ಲಿ ರಂಗಭೂಮಿಯ ಬಗ್ಗೆ ಅಧ್ಯಯನ ನಡೆಸಿದ ಪರಾಕ್ರಮ ನಿರಿಯೆಲ್ಲ ಚಲನಚಿತ್ರ ಹಾಗೂ ದೂರದರ್ಶನ ಮಾಧ್ಯಮಗಳಲ್ಲೂ ದುಡಿದಿದ್ದು, ಮಾಧ್ಯಮಗಳಲ್ಲಿ ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಆದರೆ ಅವರು ರಂಗಭೂಮಿಗೆ ವಿಶೇಷ ಒತ್ತು ನೀಡಿ ಜೀವನವನ್ನು ಅದಕ್ಕಾಗಿ ಮುಡುಪಾಗಿಟ್ಟರು.

ಶ್ರೀಲಂಕಾದಲ್ಲಿ ಏಳುಬಾರಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದಿರುವ ಅವರು ಜನಕರಾಲಿಯಾ ಎಂಬ ಶ್ರೀಲಂಕಾ ಪ್ರತಿಷ್ಠಿತ ರಂಗಸಂಸ್ಥೆಯನ್ನು ನಿರ್ಮಿಸಿ ವಿಶ್ವದ ರಂಗಕಲೆಗಳಿಗಾಗಿ ಶ್ರಮಿಸುತ್ತಿದ್ದಾರೆ. ದೇಶ ಎಲ್ಲೆಡೆಯಿಂದ ಜನರನ್ನು ಒಗ್ಗೂಡಿಸಿ ರಂಗ ಕಲೆಗಳ ಬಗ್ಗೆ ಉತ್ತಮ ತರಬೇತಿ ನೀಡಿ ಶ್ರೀಲಂಕಾದೆಲ್ಲೆಡೆ ಸಂಚಾರಿ ನಾಟಕಗಳನ್ನು ಪ್ರದರ್ಶಿಸಿ ಮಾನವೀಯತೆಯನ್ನು ಮೆರೆದಿದ್ದಾರೆ. ಪ್ರಸ್ತುತ ರಂಗಾಯಣದಲ್ಲಿ ಒಂದು ವಾರಗಳ ಕಾಲ ನಡೆಯಲಿರುವ ಬಹುರೂಪಿ ನಾಟಕೋತ್ಸವವನ್ನು ಉದ್ಘಾಟಿಸಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Sri Lankan theatre director and noted thinker Parakrama Niriella will inaugurate the annual theater festival of city’s own repertory Rangayana ‘Bahuroopi’ scheduled from January 13 to 18 in mysore.
Please Wait while comments are loading...