ಮೈಸೂರಿನಲ್ಲಿ ಕೆಲಸಕ್ಕೆ ಮತ್ತೆ ಸೇರಿಸಿಕೊಳ್ಳುವಂತೆ ಪ್ರತಿಭಟನೆ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಫೆಬ್ರವರಿ 1: ಮೈಸೂರು ನಗರದಲ್ಲಿರುವ ಶ್ರೀಕಂಠೀರವ ನರಸಿಂಹರಾಜ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ ನಮ್ಮನ್ನು ವಿನಾಕಾರಣ ಕೆಲಸದಿಂದ ತೆಗೆದಿರುವುದನ್ನು ಖಂಡಿಸಿ, ಪುನಃ ಕೆಲಸಕ್ಕೆ ಸೇರಿಸಿಕೊಳ್ಳಲು ಒತ್ತಾಯಿಸಿ 15ಮಂದಿ ಕೆಲಸಗಾರರು ಕ್ಲಬ್ ಎದುರು ಪ್ರತಿಭಟನೆ ನಡೆಸಿದರು.

ನರಸಿಂಹರಾಜ ಸ್ಪೋರ್ಟ್ಸ್ ಕ್ಲಬ್ ಎದುರು ಬುಧವಾರ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿ, ಸ್ಪೋರ್ಟ್ಸ್ ಕ್ಲಬ್ ನಲ್ಲಿ ಸುಮಾರು 20ರಿಂದ 40ವರ್ಷಗಳ ಕಾಲ ಅಡುಗೆ ಕೆಲಸ ಮಾಡಿಕೊಂಡು ಬಂದಿರುವ ನಮ್ಮನ್ನು ವಿನಾಕಾರಣ ಸಾಮೂಹಿಕವಾಗಿ ಕೆಲಸದಿಂದ ತೆಗೆದುಹಾಕಿರುವುದಲ್ಲದೇ, ತಾತ್ಕಾಲಿಕ ತಡೆಯಾಜ್ಞೆ ಇದ್ದರೂ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಹೊರಗುತ್ತಿಗೆ ಆಧಾರದಡಿ ಬೇರೊಂದು ಕಂಪನಿಯವರಿಂದ ಅಡುಗೆ ಕೆಲಸ ಮಾಡಿಸುತ್ತಿರುವುದು ಖಂಡನೀಯ.[ಮೈಸೂರಲ್ಲಿ ವಾಟಾಳ್ ಏಕಾಂಗಿ ಪ್ರತಿಭಟನೆ]

srikantadatta Narasimharaja sports club kitchen worker protest against to club

ಕೆಲಸದಲ್ಲಿ ಯಾವುದೇ ನ್ಯೂನತೆಯಿದ್ದರೂ ಸಹಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ನಮ್ಮ ಬದುಕಿನೊಂದಿಗೆ ಚೆಲ್ಲಾಟವಾಡದೇ ಪುನಃ ಕೆಲಸಕ್ಕೆ ಸೇರಿಸಿಕೊಳ್ಳಿ ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಮೇಯರ್ ಪುರುಷೋತ್ತಮ್, ಎಪಿಎಂಸಿ ಸದಸ್ಯ ಜವರಪ್ಪ, ದಸಂಸ ಜಿಲ್ಲಾ ಸಂಚಾಲಕ ಶಿವಣ್ಣ, ಗ್ರಾ.ಪಂ.ಸದಸ್ಯ ಭೀಮರಾಜ್, ಮಾಜಿ ಉಪಾಧ್ಯಕ್ಷ ರಾಜಣ್ಣ ಇತರರು ಪಾಲ್ಗೊಂಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
srikantadatta Narasimharaja sports club worker of kitchen proterst against to club Because the inclusion and work.
Please Wait while comments are loading...