ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾರಿಮಣಿಯರಿಗಾಗಿ ಕೈಪಾಳಯದಿಂದ ಸಜ್ಜುಗೊಳ್ಳುತ್ತಿದೆ ವಿಶೇಷ ಪ್ರಣಾಳಿಕೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಡಿಸೆಂಬರ್ 7: 2019ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಹಿಳೆಯರಿಗಾಗಿ ವಿಶೇಷ ಪ್ರಣಾಳಿಕೆ ಸಿದ್ಧತೆ ಮಾಡಲಾಗುತ್ತಿದ್ದು ಈ ಕುರಿತಾಗಿ ಜಿಲ್ಲಾಮಟ್ಟದಲ್ಲಿ ವಿಶೇಷ ಸಭೆ ನಡೆಸಲು ಕಾಂಗ್ರೆಸ್ ಮುಂದಾಗುತ್ತಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರ್ ನಾಥ್ ತಿಳಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರ ಧ್ವನಿಯನ್ನು ನಮ್ಮ ಪ್ರಣಾಳಿಕೆಯಲ್ಲಿ ಅಳವಡಿಸುತ್ತೇವೆ. ಮೈಸೂರಿನಲ್ಲಿ ಡಿ.8ರಂದು ಪ್ರಣಾಳಿಕೆ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಉಚಿತವಾಗಿ ಸಾನಿಟರಿ ಪ್ಯಾಡ್ ನೀಡುವ ಹಾಗೂ ಮಹಿಳೆಯರಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಾಗುತ್ತದೆ.

ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ದಾವೆ ವಜಾಗೊಳಿಸಿದ ಸುಪ್ರೀಂಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ದಾವೆ ವಜಾಗೊಳಿಸಿದ ಸುಪ್ರೀಂ

ಎಲ್ಲ ವರ್ಗದ ಮಹಿಳೆಯರ ಅಭಿಪ್ರಾಯ ಸಂಗ್ರಹಿಸಿ ಪ್ರಣಾಳಿಕೆ ತಯಾರಿಸುತ್ತೇವೆ. ಮಹಿಳೆಯರ ಬೇಡಿಕೆಗಳನ್ನು ಕೇಂದ್ರೀಕರಿಸುವ ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಕಾಂಗ್ರೆಸ್ ನ ಮಹಿಳಾ ಘಟಕದ ಅಧ್ಯಕ್ಷೆ ಸುಶ್ಮಿತಾ ದೇವ್ ಪಾಲ್ಗೊಳ್ಳಲಿದ್ದಾರೆ.

Special manifesto for women is being prepared by the Congress

ಬಿಜೆಪಿ ಪ್ರಣಾಳಿಕೆ ಸೋರಿಕೆ : ಮದ್ಯಕ್ಕೆ ನಿರ್ಬಂಧ, 20 ರು ಪೆಟ್ರೋಲ್!

ಸಚಿವ ಸ್ಥಾನ ರೇಸ್ ನಲ್ಲಿ ನಾಲ್ಕೈದು ಶಾಸಕಿಯರು ಇದ್ದಾರೆ. ಹೀಗಾಗಿ ಒಬ್ಬ ಮಹಿಳಾ ಶಾಸಕಿಗಾದರೂ ಸಚಿವ ಸ್ಥಾನ ನೀಡಬೇಕು. ಇನ್ನು ಈ ಬಾರಿಯ ನಿಗಮ ಮಂಡಳಿ ಅತಿ ಹೆಚ್ಚು ಸ್ಥಾನವನ್ನು ಮಹಿಳೆಯರಿಗೆ ನೀಡಲಿದೆ. ಈ ಬಗ್ಗೆ ನಮ್ಮ ಪಕ್ಷದ ವರಿಷ್ಠರು ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರನ್ನು ಮನವಿ ಮಾಡಿಕೊಂಡಿದ್ದೇವೆ ಎಂದು ಪುಷ್ಪಾ ಅಮರ್ ನಾಥ್ ಹೇಳಿದರು.

English summary
KPCC Women's Unit President Pushpa Amarnath Said that a special manifesto for women is being prepared by the Congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X