ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಗವಾನ್ ಮೇಲಿನ ಎಲ್ಲಾ ದೂರುಗಳನ್ನು ವಜಾಗೊಳಿಸುವಂತೆ ಪೊಲೀಸರಿಗೆ ಒತ್ತಡ

|
Google Oneindia Kannada News

ಮೈಸೂರು, ಜನವರಿ 5 : ಸಾಹಿತಿ, ಪ್ರಗತಿಪರ ಚಿಂತಕ ಪ್ರೊ. ಕೆ.ಎಸ್. ಭಗವಾನ್ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ವಿಚಾರಣೆಗೊಳಪಡಿಸಿರುವುದನ್ನು ತೀವ್ರವಾಗಿ ಖಂಡಿಸಿ ಕರ್ನಾಟಕ ಪ್ರಗತಿಪರ ಚಿಂತಕರ ವೇದಿಕೆ, ದಲಿತ ವೆಲ್ ಫೇರ್ ಟ್ರಸ್ಟ್ ನ ಮುಖ್ಯಸ್ಥರು , ಅವರ ಮೇಲೆ ದಾಖಲಾಗಿರುವ ಪ್ರಕರಣವನ್ನು ಕೂಡಲೇ ವಜಾಗೊಳಿಸಬೇಕೆಂದು ಒತ್ತಾಯಿಸಿದವು.

ದಲಿತ ವೆಲ್ ಫೇರ್ ಟ್ರಸ್ಟ್, ಕಾಯಕ ಸಮಾಜ ಹಾಗೂ ಪ್ರಗತಿಪರ ಚಿಂತಕರ ವೇದಿಕೆಯಿಂದ ಸುದ್ದಿಗೋಷ್ಠಿಯಲ್ಲಿ ಪ್ರಗತಿಪರ ಚಿಂತಕರ ವೇದಿಕೆ ರಾಜ್ಯಾಧ್ಯಕ್ಷ ಕೆ.ಸಿ.ಪುಟ್ಟಸಿದ್ದಶೆಟ್ಟಿ ಅವರು ಮಾತನಾಡಿ, ಭಗವಾನ್ ಅವರ ವಿರುದ್ಧ ದೃಶ್ಯ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಯುತ್ತಿದೆ.

ವಿವಾದಾತ್ಮಕ ಹೇಳಿಕೆ ನೀಡದಂತೆ ಭಗವಾನ್ ಗೆ ವಾರ್ನ್ ಮಾಡಿದ ಪೊಲೀಸರು ವಿವಾದಾತ್ಮಕ ಹೇಳಿಕೆ ನೀಡದಂತೆ ಭಗವಾನ್ ಗೆ ವಾರ್ನ್ ಮಾಡಿದ ಪೊಲೀಸರು

ಅವರೊಬ್ಬ ಮಾನಸಿಕ ಅಸಮತೋಲನದ ಹೊಂದಿರುವ ಹಿಂದೂ ವಿರೋಧಿಯೆಂದು ಬಿಂಭಿಸಲಾಗುತ್ತಿದೆ, ಇದು ಸಲ್ಲದು ತಮಗೂ ಅಭಿವ್ಯಕ್ತ ಸ್ವಾತಂತ್ರ್ಯವಿದ್ದು ಸಂವಿಧಾನದಡಿಯಲ್ಲಿ ತಮ್ಮ ಹಕ್ಕುಗಳನ್ನು ಚಾಲಯಿಸಲು ಅವಕಾಶ ನೀಡಿ ಎಂದು ಮಾರ್ಮಿಕವಾಗಿ ನುಡಿದರು.

Some people forced to police dismiss all cases against K S Bhagawan

ತಮಗೂ ಮಾತನಾಡುವ, ಬರೆಯುವ, ವಿಮರ್ಶಿಸುವ, ಸಂಶೋಧಿಸುವ, ಚರ್ಚಿಸುವ ಸ್ವಾತಂತ್ರವಿದ್ದು ಅದನ್ನು ಹತ್ತಿಕ್ಕುವ ಯತ್ನ ನಡೆಯುತ್ತಿದೆ, ನಾವ್ಯಾರೂ ಹಿಂದೂ ಧರ್ಮ ವಿರೋಧಿಗಳಲ್ಲ, ಹಿಂದೂ ಧರ್ಮವನ್ನು ಯಾರು ಗುತ್ತಿಗೆ ಪಡೆದಿಲ್ಲ, ಗುತ್ತಿಗೆ ಪಡೆದವರಂತೆ ಹೋರಾಡುವವರ ವಿರುದ್ಧ ತಾವು ಪ್ರತಿ ಹೋರಾಟ ನಡೆಸಬೇಕಾಗುವುದು ಎಂದು ಎಚ್ಚರಿಕೆ ನೀಡಿದರು.

ದಲಿತ ವೆಲ್ ಫೇರ್ ಟ್ರಸ್ಟ್ ಅಧ್ಯಕ್ಷ ಶಾಂತರಾಜು ಅವರು ಮಾತನಾಡಿ, ಭಗವಾನ್ ಅವರ 'ರಾಮಮಂದಿರ ಏಕೆ ಬೇಕೆಂಬ' ಪುಸ್ತಕ ಪ್ರಕಟಗೊಂಡು ಆದಾಗಲೇ ಆರು ತಿಂಗಳೇ ಕಳೆದಿವೆ.

ಅದರ ಎರಡನೇ ಆವೃತ್ತಿಯೂ ಇನ್ನೂ ಕೆಲವೇ ದಿನಗಳಲ್ಲಿ ಹೊರಬರಲಿದೆ, ಹೀಗಿದ್ದರೂ ಈಗೇಕೆ ಈ ಹೋರಾಟ ಎಂದು ಪ್ರಶ್ನಿಸಿ, ತಮಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದ್ದು ನಮ್ಮನ್ನು ಬದುಕಲು ಬಿಡಿ, ಭಗವಾನ್ ಅವರ ವಿಚಾರಣೆಯಿಂದ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಧಕ್ಕೆಯಾಗಿದ್ದು ಅವರ ವಿರುದ್ಧ ದಾಖಲಾಗಿರುವ ದೂರನ್ನು ಕೂಡಲೇ ರದ್ದುಗೊಳಿಸಬೇಕೆಂದು ಆಗ್ರಹಿಸಿದರು.

English summary
The Karnataka Progressive Thinking Forum, Dalit Welfare Fair Trust demanded immediate dismissal of the case filed against on progressive thinker K S Bhagawan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X