ಮದುವೆ ನಿಶ್ಚಯವಾಗಿದ್ದ ಯೋಧ ಎದೆನೋವಿನಿಂದ ಸಾವು

By: ಮೈಸೂರು ಪ್ರತಿನಿಧಿ
Subscribe to Oneindia Kannada

ಕೆ.ಆರ್.ನಗರ, ಡಿಸೆಂಬರ್ 8: ಎದೆನೋವು ಕಾಣಿಸಿಕೊಂಡು ಚಿಕಿತ್ಸೆಗೆ ದಾಖಲಾಗಿದ್ದ ಯೋಧನೊಬ್ಬ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ಕೆ.ಆರ್.ನಗರ ತಾಲೂಕಿನ ಕನುಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಮಂಜುನಾಥ್ ಎಂಬುವರ ಪುತ್ರ ಪ್ರತೀಪ್ (28) ಮೃತಪಟ್ಟ ದುರ್ದೈವಿ.

ಈತ ಕಳೆದ 9 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ. ಕೆಲವು ಸಮಯಗಳಿಂದ ಜಮ್ಮು-ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಈ ನಡುವೆ ಪ್ರತೀಪ್ ನಿಗೆ ವಿವಾಹ ಗೊತ್ತು ಮಾಡಲಾಗಿತ್ತು. ಅದಕ್ಕಾಗಿ ರಜೆಯಲ್ಲಿ ಊರಿಗೆ ಬಂದಿದ್ದ. ಇಪ್ಪತ್ತು ದಿನಗಳ ಹಿಂದೆ ಬಂದಿದ್ದ ಈತನಿಗೆ ವಿವಾಹ ನಿಶ್ಚಿತಾರ್ಥ ಆಗಿತ್ತು.[ಆಕಸ್ಮಿಕ: ಬಾದಾಮಿಯ ಯುವ ಯೋಧ ಸಾವು]

Pratheep

ಆದರೆ, ಆರೋಗ್ಯವಾಗಿಯೇ ಇದ್ದ ಈತನಿಗೆ ಮಂಗಳವಾರ ತೀವ್ರ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತ ಪಟ್ಟಿದ್ದಾನೆ. ಮೃತನ ಅಂತ್ಯಕ್ರಿಯೆ ಸ್ವಗ್ರಾಮ ಕನುಗನಹಳ್ಳಿಯಲ್ಲಿ ನೆರವೇರಿತು. ಈ ಸಂಬಂಧ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.[ಸಿಯಾಚಿನ್ ಹಿಮಪಾತದಲ್ಲಿ ಸಿಲುಕಿದ್ದ ಯೋಧರ ಸಾವು]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Prateep, soldier dies by chest pain K.R.Nagar, Mysuru on Wednesday. His marriage fixed recently. He came to native place on leave.
Please Wait while comments are loading...