ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಚ್ಡಿಕೋಟೆ ಹಳ್ಳಿಗಳಲ್ಲಿ 'ಸೌರ ಬೆಳಕು' ಆದರ್ಶ ಯೋಜನೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಎಚ್ಡಿಕೋಟೆ, ಜೂನ್ 12: ಆದರ್ಶ ಯೋಜನೆಯಡಿ ಹೆಚ್.ಡಿ.ಕೋಟೆ ಬಿ.ಮಟಕೆರೆ ಪಂಚಾಯಿತಿಗೊಳಪಡುವ ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಸೌರಶಕ್ತಿ ಸದ್ಬಳಕೆಯಿಂದ ಗ್ರಾಮಗಳು ಬೆಳಕು ಕಾಣುವಂತಾಗಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ.

ಹಳ್ಳಿಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾದಂತೆ ಎಂಬ ಮಾತನ್ನು ಸ್ವಾತಂತ್ರ್ಯ ಸಿಕ್ಕಿದ ದಿನದಿಂದಲೇ ಹೇಳುತ್ತಲೇ ಬರುತ್ತಿದ್ದೇವೆ. ಆದರೆ ಹಳ್ಳಿಗಳು ಅಭಿವೃದ್ಧಿಯಾಗಿದ್ದು ಅಷ್ಟರಲ್ಲೇ ಇದೆ.

ಇನ್ನು ಹಲವು ಹಳ್ಳಿಗಳು ಮೂಲ ಸೌಲಭ್ಯವನ್ನು ಕಂಡಿಲ್ಲ. ಅಲ್ಲಿಗೆ ರಸ್ತೆ, ವಿದ್ಯುತ್ ಸೌಕರ್ಯ ತಲುಪಿಲ್ಲ. ಹೀಗಾಗಿ ಗ್ರಾಮೀಣಾಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಆದರ್ಶ ಗ್ರಾಮ ಯೋಜನೆ ಜಾರಿಗೆ ತಂದಿದ್ದು, ಅದರಡಿ ಗ್ರಾಮಗಳನ್ನು ಆಯ್ಕೆ ಮಾಡಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದರ ಜವಾಬ್ದಾರಿ ಆಯಾ ಸಂಸದರ ಮೇಲಿರುತ್ತದೆ.

Solar power light up streets in H.D. Kote taluk, Mysuru

6 ಗ್ರಾಮಗಳಲ್ಲಿ ಸೌರಬೆಳಕು: ಆದರ್ಶ ಯೋಜನೆಯಡಿ ಹೆಚ್.ಡಿ.ಕೋಟೆ ಬಿ.ಮಟಕೆರೆ ಪಂಚಾಯಿತಿಗೊಳಪಡುವ ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಈ ಪಂಚಾಯಿತಿಯ 6 ಗ್ರಾಮಗಳಲ್ಲಿ 70 ಲಕ್ಷ ವೆಚ್ಚದಲ್ಲಿ ಸೌರದೀಪ ಅಳವಡಿಸುವ ಮೂಲಕ ಬೆಳಕಿನ ಭಾಗ್ಯವನ್ನು ಕಲ್ಪಿಸಲಾಗಿದೆ. ಸದಾ ಸೀಮೆಣ್ಣೆ ದೀಪದ ಬೆಳಕನ್ನು ನೋಡಿದ ಜನ ಇದರಿಂದ ಸಂತೋಷಗೊಂಡಿದ್ದಾರೆ.

ಈಗಾಗಲೇ ಬಿ.ಮಟಕೆರೆಯಲ್ಲಿ 5 ಕಿಲೋವ್ಯಾಟ್ ನಲ್ಲಿ 75 ದೀಪ, ಪರಿಶಿಷ್ಟರ ಕಾಲೋನಿ ಬೀದಿಗೆ 2ಕಿ.ವ್ಯಾಟ್‍ನ 30, ಪರಿಶಿಷ್ಟಪಂಗಡ ಬೀದಿಯಲ್ಲಿ 3 ಕಿ.ವ್ಯಾಟ್ ನ 45, ಹಿರೇಹಳ್ಳಿ ಗ್ರಾಮದಲ್ಲಿ 4 ಕಿ.ವ್ಯಾಟ್‍ನ 60, ಮೊಳೆಯೂರು ಗ್ರಾಮದಲ್ಲಿ 2 ಕಿ.ವ್ಯಾಟ್ 30, ಮೊಳೆಯೂರು ಪರಿಶಿಷ್ಟರ ಕಾಲೋನಿಯಲ್ಲಿ 30 ದೀಪಗಳನ್ನು ಅಳವಡಿಸಲಾಗಿದೆ. ಇದನ್ನು ಅಳವಡಿಸಿದ ಗುತ್ತಿಗೆದಾರರು 5ವರ್ಷಗಳ ಕಾಲ ನಿರ್ವಹಣೆ ಮಾಡಲಿದ್ದಾರೆ.

ಸೌರಶಕ್ತಿ ಬಳಕೆಯಿಂದ ವಿದ್ಯುತ್ ಕಡಿತ, ಹಣ ಪಾವತಿಸುವ ಸಮಸ್ಯೆಗಳು ಇಲ್ಲದೆ ಇರುವುದರಿಂದ ಇಲ್ಲಿನ ನಿವಾಸಿಗಳು ಖುಷಿಯಾಗಿದ್ದಾರೆ. ಅರಣ್ಯದಂಚಿನಲ್ಲಿ ವಾಸಿಸುವ ನಿವಾಸಿಗಳಿಗೆ ಇದುವರೆಗೂ ಸರ್ಕಾರದ ಸೌಲಭ್ಯ ತಲುಪದ ಕಾರಣದಿಂದಾಗಿ ಆದಿಮಾನವರಂತೆ ಬದುಕಬೇಕಾಗಿದೆ. ಸರ್ಕಾರ ಈ ಬಗ್ಗೆ ಗಮನಹರಿಸಿದರೆ ಹಳ್ಳಿಗಳ ಅಭಿವೃದ್ಧಿ ಸಾಧ್ಯವಾಗಬಹುದು.

English summary
Solar power light up few villages dominated by tribal people in the backward H.D. Kote taluk of Mysuru district. The Mysuru Zilla Panchayat launched ‘Soura Belaku’, an initiative under Model Village scheme to install solar-powered street lights with centralised power delivery systems.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X