ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

30 ಸಾವಿರ ಹಾವು ಹಿಡಿದು ದಾಖಲೆ ಮಾಡಿದ ಸ್ನೇಕ್ ಶ್ಯಾಮ್

By ಲವಕುಮಾರ್, ಮೈಸೂರು
|
Google Oneindia Kannada News

ಹಾವು ಎಂಬ ಪದ ಕೇಳಿದರೆ, ಕನಸಿನಲ್ಲಿ ಬಂದರೆ ಹೌಹಾರುತ್ತೇವೆ. ಸ್ವಲ್ಪ ದಿನ ಜ್ಚರ ಬಂದರೂ ಅತಿಶಯೋಕ್ತಿ ಎನಿಸುವುದಿಲ್ಲ. ಇನ್ನೂ ಹಾವು ನೇರವಾಗಿ ನಮ್ಮ ಮುಂದೆ ಬಂದರಂತೂ ಕತೆ ಮುಗಿದೇ ಹೋಯ್ತು. ಜೀವವನ್ನು ಕೈಯಲ್ಲಿ ಹಿಡಿದುಕೊಂಡು ದೇವ್ರೇ ದೇವ್ರೇ ಎಂದು ಎಷ್ಟು ಸಲಿ ಹೇಳುತ್ತೇವೋ ದೇವರೇ ಬಲ್ಲ.

ಆದರೆ ಮೈಸೂರಿನ ಸ್ನೇಕ್ ಶ್ಯಾಮ್ ಈ ಮೇಲಿನ ಎಲ್ಲಾ ಮಾತುಗಳಿಗೆ ಅಪವಾದ. ಮೈಸೂರಿನಲ್ಲಿ ಅವರ ಹೆಸರನ್ನು ಕೇಳದವರು ವಿರಳವೇ ಎನ್ನಬೇಕು. ಮೈಸೂರಿನಲ್ಲಿ ಎಲ್ಲಿಯೇ ಹಾವು ಕಾಣಿಸಲಿ ತಕ್ಷಣಕ್ಕೆ ನೆನಪಿಗೆ ಬರುವುದು ಸ್ನೇಕ್ ಶ್ಯಾಮ್.

ಹಾವು ಹಿಡಿಯುವುದನ್ನು ಹವ್ಯಾಸ ಮಾಡಿಕೊಂಡ ಇವರ ಹೆಸರು ಎಮ್. ಎಸ್ ಬಾಲಸುಬ್ರಹ್ಮಣ್ಯಂ. ಇವರು ತಮ್ಮ ಸ್ವಂತ ವಾಹನದಲ್ಲಿ ಮಕ್ಕಳನ್ನು ಶಾಲೆಗೆ ಬಿಡುವ ಕಾಯಕ ಮಾಡುತ್ತಾರೆ. ಇದುವರೆಗೂ ಸಾವಿರಾರು ಹಿಡಿದಿರುವ ಸ್ನೇಕ್ ಶ್ಯಾಮ್ ರ ಜನಪ್ರಿಯತೆ ಇದೀಗ ಮೈಸೂರು ಮಹಾನಗರಪಾಲಿಕೆ ಸದಸ್ಯನನ್ನಾಗಿ ಮಾಡಿದ್ದು, ಆ ಮೂಲಕ ರಾಜಕೀಯ ಪ್ರವೇಶ ಮಾಡಿದ್ದಾರೆ.[ಬರೋಬ್ಬರಿ 3 ಹೆಬ್ಬಾವು ಹಿಡಿದ ಮಂಗಳೂರು ಯುವಕರು!]

ನಿಮಗೂ ಈ ಸ್ನೇಕ್ ಶ್ಯಾಮ್ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯುವ ಬಯಕೆ ಆಯ್ತಾ? ಇದುವರೆಗೆ ಎಷ್ಟು ಹಾವು ಹಿಡಿದಿದ್ದಾರೆ? ಹಿಡಿದ ಹಾವನ್ನು ಏನು ಮಾಡುತ್ತಾರೆ? ಹೀಗೆ ನಾನಾ ಅಂಶಗಳು ಇಲ್ಲಿವೆ.

ಸ್ನೇಕ್ ಶ್ಯಾಮ್ ಎಲ್ಲಿಯವರು?

ಸ್ನೇಕ್ ಶ್ಯಾಮ್ ಎಲ್ಲಿಯವರು?

ಸ್ನೇಕ್ ಶ್ಯಾಮ್ ಮೂಲತಃ ಮೈಸೂರಿನ ಕೃಷ್ಣರಾಜನಗರದವರು. ಶಾಲೆ ಮಕ್ಕಳನ್ನು ತಮ್ಮ ವಾಹನದ ಮೂಲಕ ಕರೆದುಕೊಂಡು ಹೋಗುವುದು, ಬಿಡುವುದು ಮಾಡುತ್ತಾರೆ. ಹಾವು ಹಿಡಿಯುವುದನ್ನು ಪ್ರವೃತ್ತಿಯಾಗಿ ಬೆಳೆಸಿಕೊಂಡಿದ್ದಾರೆ. ಇದರ ಮೂಲಕ ಸ್ನೇಕ್ ಶ್ಯಾಮ್ ಎಂದೇ ಚಿರಪರಿಚಿತರಾಗಿದ್ದಾರೆ.

ಹಾವು ಹಿಡಿಯುವ ಪ್ರವೃತ್ತಿ ಬೆಳೆಸಿಕೊಳ್ಳಲು ಕಾರಣವೇನು?

ಹಾವು ಹಿಡಿಯುವ ಪ್ರವೃತ್ತಿ ಬೆಳೆಸಿಕೊಳ್ಳಲು ಕಾರಣವೇನು?

ಮೊದಲೆಲ್ಲಾ ಹಾವುಗಳನ್ನು ಮನೆಯ ಸುತ್ತಮುತ್ತ ಕಂಡಾಗ ಜನ ಭಯಭೀತರಾಗಿ ಅದನ್ನು ಹೊಡೆದು ಸಾಯಿಸಿಬಿಡುತ್ತಿದ್ದರು. ಇದನ್ನು ನೋಡುತ್ತಿದ್ದ ಶ್ಯಾಮ್ ಅವರಿಗೆ ಹಾವುಗಳ ಮಾರಣಹೋಮ ತಪ್ಪಿಸುವುದು ಹೇಗೆ ಎಂಬ ಚಿಂತೆ ಕಾಡಿತ್ತು. ಅಲ್ಲದೆ ಮನೆಗೆ ಬರುವ ಹಾವುಗಳನ್ನು ಹೊಡೆದು ಕೊಲ್ಲುವ ಬದಲು ಸೆರೆ ಹಿಡಿದು ಕಾಡಿಗೆ ಬಿಟ್ಟರೆ ಹೇಗೆ ಎಂಬ ಆಲೋಚನೆಯೊಂದು ಹೊಳೆದಿತ್ತು. ಕೂಡಲೇ ಅವರು ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಮುಂದಾದರು.

ಹಾವು ಹಿಡಿದು ನಮೂದಿಸುವ ಕಾರ್ಯ ಶುರುಮಾಡಿದ್ದು ಯಾವಾಗ?

ಹಾವು ಹಿಡಿದು ನಮೂದಿಸುವ ಕಾರ್ಯ ಶುರುಮಾಡಿದ್ದು ಯಾವಾಗ?

1981ರಿಂದಲೇ ಹಾವನ್ನು ಹಿಡಿದು ಕಾಡಿಗೆ ಬಿಡುವ ಕೆಲಸವನ್ನು ಅವರು ಆರಂಭಿಸಿದರೂ ಅದನ್ನು ನಮೂದಿಸುವ ಕಾರ್ಯವನ್ನು ಕೈಗೊಂಡಿದ್ದು 1997ರಲ್ಲಿ. ಅಲ್ಲಿಂದೀಚೆಗೆ ಅವರು ಹಾವು ಹಿಡಿಯಲು ಹೋಗುವ ಸಂದರ್ಭ ತಮ್ಮೊಂದಿಗೆ ರಿಜಿಸ್ಟರ್‍ನ್ನು ಹಿಡಿದುಕೊಂಡು ಹೋಗುತ್ತಾರೆ. ಹಾವು ಹಿಡಿದ ಬಳಿಕ ತಾವು ಹಿಡಿದ ಹಾವಿನ ಬಗ್ಗೆ, ಎಲ್ಲಿ ಹಿಡಿದಿದ್ದು ಎಂಬುವುದರ ಕುರಿತು ವಿವರವಾಗಿ ಬರೆದು ಸಂಬಂಧಿಸಿದವರಿಂದ ಸಹಿ ಪಡೆಯುತ್ತಾರೆ.

ಇದುವರೆಗೆ ಎಷ್ಟು ಹಾವು ಹಿಡಿದಿದ್ದಾರೆ?

ಇದುವರೆಗೆ ಎಷ್ಟು ಹಾವು ಹಿಡಿದಿದ್ದಾರೆ?

1981 ರಿಂದ ಹಾವುಗಳನ್ನು ಹಿಡಿದು ಕಾಡಿಗೆ ಬಿಡುವ ಕಾಯಕವನ್ನು ರೂಢಿಸಿಕೊಂಡಿರುವ ಶ್ಯಾಮ್ ಜನವರಿ 27ರಂದು ಮೈಸೂರಿನ ಯಶೋದಾನಗರದ ಲೋಕೇಶ್ ಎಂಬುವರ ಸಂಪುನಲ್ಲಿ ಸೇರಿಕೊಂಡಿದ್ದ ನಾಗರಹಾವೊಂದನ್ನು ಹಿಡಿಯುವ ಮೂಲಕ 30 ಸಾವಿರ ಹಾವುಗಳನ್ನು ಹಿಡಿದ ಖ್ಯಾತಿಗೆ ಪಾತ್ರರಾಗಿದ್ದಾರೆ.

ಹಾವು ಹಿಡಿಯುವುದರ ಜೊತೆಗೆ ಏನು ಮಾಡುತ್ತಾರೆ?

ಹಾವು ಹಿಡಿಯುವುದರ ಜೊತೆಗೆ ಏನು ಮಾಡುತ್ತಾರೆ?

ಇವರು ಕೇವಲ ಹಾವು ಹಿಡಿಯುವುದರ ಜೊತೆಯಲ್ಲಿ ಹಾವಿನ ಬಗ್ಗೆ ಜನರಲ್ಲಿರುವ ಮೂಢನಂಬಿಕೆ ಹೋಗಲಾಡಿಸುವ ಕಾರ್ಯಗಳನ್ನು ಮಾಡುತ್ತಾರೆ. ಶಾಲಾ ಮಕ್ಕಳಿಗೆ ಹಾವಿನ ಬಗ್ಗೆ ಉಪನ್ಯಾಸ ನೀಡಿ ಅವರಲ್ಲಿರುವ ಆತಂಕವನ್ನು ದೂರ ಮಾಡಿ ಧೈರ್ಯ ತುಂಬುವ ಕೆಲಸವನ್ನು ಕೂಡ ಮಾಡುತ್ತಾ ಬಂದಿದ್ದಾರೆ.

ನ್ಯಾಷನಲ್ ಜಿಯೋಗ್ರಫಿ ಚಾನಲ್ ಇವರ ಸಾಕ್ಷ್ಯ ಚಿತ್ರ

ನ್ಯಾಷನಲ್ ಜಿಯೋಗ್ರಫಿ ಚಾನಲ್ ಇವರ ಸಾಕ್ಷ್ಯ ಚಿತ್ರ

ಈಗಾಗಲೇ ಇವರು ರಾಷ್ಟ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದು ನ್ಯಾಷನಲ್ ಜಿಯೋಗ್ರಫಿ ಚಾನಲ್ ಇವರ Croc Chronicles: Snakes, Karma, Action ಎಂಬ ಸಾಕ್ಷ್ಯ ಚಿತ್ರವನ್ನು ಪ್ರಸಾರ ಮಾಡಿದೆ. ಹಲವಾರು ಸಂಘ ಸಂಸ್ಥೆಗಳು ಇವರ ಕಾರ್ಯವನ್ನು ಮೆಚ್ಚಿ ಸನ್ಮಾನಿಸಿವೆ.

ಸ್ನೇಕ್ ಶ್ಯಾಮ್ ನ್ನು ಸಂಪರ್ಕಿಸುವುದು ಹೇಗೆ?

ಸ್ನೇಕ್ ಶ್ಯಾಮ್ ನ್ನು ಸಂಪರ್ಕಿಸುವುದು ಹೇಗೆ?

ಕರೆ ಬಂದ ತಕ್ಷಣ ಸ್ವಂತ ಖರ್ಚಿನಲ್ಲಿ ತೆರಳಿ ಮನೆಗಳಲ್ಲಿ ಅವಿತು ಕೊಂಡಿರುವ ಹಾವುಗಳನ್ನು ಸೆರೆಹಿಡಿಯುವುದು ಸುಲಭದ ಕೆಲಸವಲ್ಲ. ಆದರೂ ನಿಷ್ಠೆಯಿಂದಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಹೆಚ್ಚಿನ ಮಾಹಿತಿಗೆ 9448069399 ಸಂಪರ್ಕಿಸಬಹುದು.

English summary
M.S Balasubramania popularly known as Snake Shyam. By profession shyam was a driver. He pick up school children in his own vehicle. Estimated he have caught 30,000 snakes. He was born in Krishnarajanagara, Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X