ದೇಶದಲ್ಲೇ ಪ್ರಪ್ರಥಮ ಬಾರಿಗೆ ಮೈಸೂರಿನಲ್ಲಿ ಸ್ಮಾರ್ಟ್ ಗ್ರಿಡ್ ಯೋಜನೆ

Posted By:
Subscribe to Oneindia Kannada

ಮೈಸೂರು, ಜುಲೈ 25 : ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಪ್ರಾಯೋಗಿಕ ಸ್ಮಾರ್ಟ್‌ಗ್ರಿಡ್ ಯೋಜನೆ‌ ಹಾಗೂ ಸ್ಮಾರ್ಟ್‌ ಗ್ರಿಡ್ ಪವರ್ ಪ್ರಾಜೆಕ್ಟ್‌ ಗೆ ಇಂಧನ ಸಚಿವ ಡಿ.ಕೆ ಶಿವಕುಮಾರ್ ಇಂದು ಮೈಸೂರಿಗೆ ಭೇಟಿ ಪರಿಶೀಲನೆ ನಡೆಸಿದರು.

ಇದೇ ವೇಳೆ ಅಧಿಕಾರಿಗಳ ಕಾಯ೯ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಸೆಸ್ಕಾಂ ಅಧಿಕಾರಿಗಳಿಂದ ಮಾಹಿತಿ ಪಡೆದು, ಕೆಲಸ ಕಾಯ೯ಗಳನ್ನು ತ್ವರಿತವಾಗಿ‌ ಪೂಣ೯ಗೊಳಿಸಿ ಅಭಿವೃದ್ಧಿ ಕಾಯ೯ಗಳನ್ನು ಕೈಗೆತ್ತಿಕೊಳ್ಳಬೇಕಿದೆ ಎಂದರು.

ವಿದ್ಯುತ್ ಉಳಿತಾಯ : 2ನೇ ಸ್ಥಾನದಲ್ಲಿ ಕರ್ನಾಟಕ

ಸ್ಮಾರ್ಟ್‌ಗ್ರಿಡ್ ಯೋಜನೆಯಿಂದ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಗೂ ಅಡಚಣೆ ರಹಿತ ವಿದ್ಯುತ್ ಒದಗಿಸುವುದು, ವಿದ್ಯುತ್ ವಿತರಣಾ ಜಾಲದಲ್ಲಿ ಉಂಟಾಗುವ ಲೋಪದೋಷವನ್ನು ಕನಿಷ್ಟ ಅವಧಿಯಲ್ಲಿ ಸರಿಪಡಿಸುವುದು ಸೇರಿದಂತೆ ಅನೇಕ ಅನುಕೂಲಗಳನ್ನು ಪಡೆದುಕೊಳ್ಳಬಹುದು.

ಏನಿದು ಸ್ಮಾರ್ಟ್‌ಗ್ರಿಡ್ ಯೋಜನೆ?

ಏನಿದು ಸ್ಮಾರ್ಟ್‌ಗ್ರಿಡ್ ಯೋಜನೆ?

ಗ್ರಾಹಕರಿಗೆ ಪರಿಣಾಮಕಾರಿಯಾಗಿ ವಿದ್ಯುತ್ ಪೂರೈಸಲು ಅನುಕೂಲವಾಗುವಂತೆ ಹಾಗೂ ಕಳ್ಳತನ ಮತ್ತು ಅನವಶ್ಯಕವಾದ ನಷ್ಟವನ್ನು ತಡೆಯುವ ದೃಷ್ಟಿಯಿಂದ ‘ಸ್ಮಾರ್ಟ್ ಗ್ರಿಡ್' ಆರಂಭಿಸಲಾಗಿದೆ. ಪ್ರಾಯೋಗಾತ್ಮಕವಾಗಿ ಈ ಯೋಜನೆಯನ್ನು ನಗರದ ವಿ.ವಿ.ಮೊಹಲ್ಲಾದ ಆಯ್ದ ಭಾಗದಲ್ಲಿನ ಸುಮಾರು 24,532 ಸ್ಥಾವರಗಳಲ್ಲಿ ಅಳವಡಿಸಲಾಗಿದೆ.

ಕೊನೆಯ ಹಂತದಲ್ಲಿ ಸ್ಮಾರ್ಟ್‌ಗ್ರಿಡ್ ಯೋಜನೆ‌

ಕೊನೆಯ ಹಂತದಲ್ಲಿ ಸ್ಮಾರ್ಟ್‌ಗ್ರಿಡ್ ಯೋಜನೆ‌

ವಿದ್ಯುತ್ ಸರಬರಾಜು ವ್ಯವಸ್ಥೆಯನ್ನು ಸ್ಮಾರ್ಟ್ ಗ್ರಿಡ್ ತಂತ್ರಜ್ಞಾನದ ಮುಖಾಂತರ ನಿಯಂತ್ರಿಸಬಹುದಾಗಿದೆ. ಈ ಯೋಜನೆಯಡಿ ಈಗಾಗಲೇ ಸ್ಮಾರ್ಟ್ ಮೀಟರ್ ಗಳನ್ನು ಗ್ರಾಹಕರ ಸ್ಥಾವರಗಳಿಗೆ ಹಾಗೂ ವಿದ್ಯುತ್ ಪರಿವರ್ತಕಗಳಿಗೆ ಅಳವಡಿಸಲಾಗಿದೆ. ಸ್ಮಾರ್ಟ್ ಗ್ರಿಡ್ ಸಂಬಂಧಿಸಿದಂತೆ ಇತರ ಪರಿಕರಗಳನ್ನು ಅಳವಡಿಸಿದ್ದು ಈ ಯೋಜನೆಯು ಅನುಷ್ಠಾನದ ಕೊನೆಯ ಹಂತದಲ್ಲಿದೆ.

ಸ್ಮಾರ್ಟ್ ಗ್ರಿಡ್ ನಲ್ಲಿ ಏನೇನು ವಿಶೇಷತೆ?

ಸ್ಮಾರ್ಟ್ ಗ್ರಿಡ್ ನಲ್ಲಿ ಏನೇನು ವಿಶೇಷತೆ?

ಯೋಜನೆಯಲ್ಲಿ ಮುಖ್ಯವಾಗಿ ಆಧುನಿಕ ಮೀಟರಿಂಗ್ ತಂತ್ರಜ್ಞಾನ, ವಿದ್ಯುತ್ ಘಟಕದ ಸಂಪೂರ್ಣ ವಿವರಗಳು ಮತ್ತು ಮೇಲ್ವಿಚಾರಣೆ, ವಿವಿಧ ಅಂತದ ವಿದ್ಯುತ್ ಲೆಕ್ಕದ ಪರಿಶೋಧನೆಯ ವಿವರಗಳು, ವಾಸ್ತವಿಕ ಹಂತದಲ್ಲಿನ ಗರಿಷ್ಟ ಮಿತಿಯ ಲೋಡ್ ಮೇಲ್ವಿಚಾರಣೆ ಮತ್ತು ಸುಧಾರಣೆ, ವಿದ್ಯುತ್ ಬೇಡಿಕೆಯ ಮೇಲ್ವಿಚಾರಣೆ ಮತ್ತು ಸುಧಾರಣೆ, ವಿದ್ಯುತ್ ನಿರೀಕ್ಷೆಯ ಮುನ್ನೋಟ, ವಿದ್ಯುತ್ ನಿಲುಗಡೆಯ ನಿಯಂತ್ರಣ ಎಂಬ 6 ಘಟಕಗಳಿವೆ. ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಬೆಂಗಳೂರಿನ ಎಂಜೆನ್ ಗ್ಲೋಬಲ್ ಸೆಲ್ಯುಷನ್ ಪ್ರೈವೇಟ್ ಲಿಮಿಟೆಡ್ ಅವರಿಗೆ 32.5 ಕೋಟಿ ರು.ಗೆ ಕಾರ್ಯಾದೇಶ ನೀಡಲಾಗಿದೆ.

ಈ ಯೋಜನೆಯಿಂದ ಗ್ರಾಹಕನಿಗೇನು ಲಾಭ?

ಈ ಯೋಜನೆಯಿಂದ ಗ್ರಾಹಕನಿಗೇನು ಲಾಭ?

ಇದರಿಂದಾಗಿ ಗ್ರಾಹಕರು ತಮ್ಮ ವಿದ್ಯುತ್ ಉಪಯೋಗದ ಪ್ರಮಾಣವನ್ನು ಅಗತ್ಯಕ್ಕೆ ತಕ್ಕಂತೆ ನಿಯಂತ್ರಣಗೊಳಿಸಿ ತಮ್ಮ ವಿದ್ಯುತ್ ಬಿಲ್ ಅನ್ನು ಕಡಿಮೆಗೊಳಿಸಬಹುದು. ಇದರಿಂದ ವಿದ್ಯುತ್ ವಿತರಣಾ ಜಾಲದ ಒತ್ತಡವನ್ನು ಸ್ವಯಂ ಪ್ರೇರಣೆಯಿಂದ ಗ್ರಾಹಕರು ಕಡಿಮೆಗೊಳಿಸಬಹುದಾಗಿದೆ. ಯೋಜನೆಯಲ್ಲಿ ಗ್ರಾಹಕರ ಸಂಪೂರ್ಣ ವಿದ್ಯುತ್ ಬಳಕೆಯ ವಿವರಗಳು ಸೆಸ್ಕ್ ನ ಸ್ಮಾರ್ಟ್ ಗ್ರಿಡ್ ಕಂಟ್ರೋಲ್ ಸೆಂಟರ್ ನಲ್ಲಿ ಹಾಗೂ ಆನ್ ಲೈನ್ ನಲ್ಲಿ ಲಭ್ಯವಿರುತ್ತವೆ. ಯೋಜನೆಯಿಂದ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಗೂ ಅಡಚಣೆ ರಹಿತ ವಿದ್ಯುತ್ ಒದಗಿಸುವುದು, ವಿದ್ಯುತ್ ವಿತರಣಾ ಜಾಲದಲ್ಲಿ ಉಂಟಾಗುವ ಲೋಪದೋಷವನ್ನು ಕನಿಷ್ಟ ಅವಧಿಯಲ್ಲಿ ಸರಿಪಡಿಸುವುದು ಸೇರಿದಂತೆ ಅನೇಕ ಅನುಕೂಲಗಳನ್ನು ಪಡೆದುಕೊಳ್ಳಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Minister for Energy, DK Sivakumar visited Mysuru today for the first time in the country to have a practical smartgrid plan and Smartgrid Power Project.
Please Wait while comments are loading...