ಬಿಜೆಪಿಗೆ ಕೃಷ್ಣ ಬಂದರೆ ಮುಕ್ತಸ್ವಾಗತ : ಪ್ರತಾಪ್ ಸಿಂಹ

Posted By:
Subscribe to Oneindia Kannada

ಮೈಸೂರು, ಫೆಬ್ರವರಿ 04 : "ಎಸ್ಎಂ ಕೃಷ್ಣ ಅವರು ಕರ್ನಾಟಕ ಕಂಡ ಅತ್ಯಂತ ಸಭ್ಯ ರಾಜಕಾರಣಿಗಳಲ್ಲಿ ಒಬ್ಬರು. ತಮ್ಮ ಸ್ಟಾಂಡರ್ಡನ್ನು ಕಾಪಾಡಿಕೊಂಡಿದ್ದಾರೆ. ಇಂಥ ಪ್ರಬುದ್ಧ ರಾಜಕಾರಣಿ ಬಿಜೆಪಿಗೆ ಬರುವುದಾದರೆ ಮುಕ್ತಹಸ್ತದಿಂದ ಸ್ವಾಗತಿಸುತ್ತೇನೆ" ಎಂದು ಮೈಸೂರು-ಮಡಿಕೇರಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಒನ್ಇಂಡಿಯಾ ಕನ್ನಡದೊಡನೆ ಶನಿವಾರ ಮಾತನಾಡುತ್ತಿದ್ದ ಅವರು, ಎಸ್ಸೆಂ ಕೃಷ್ಣ ಅರ್ಧ ದಶಕಗಳ ಕಾಲ ರಾಜಕಾರಣ ಮಾಡಿದರೂ ಎಲ್ಲೂ ಹೆಸರು ಕೆಡಿಸಿಕೊಂಡಿಲ್ಲ. ಅಲ್ಲದೆ ತಮ್ಮ ಕಠೋರ ವಿರೋಧಿಗಳ ವಿರುದ್ಧವೂ ಎಲ್ಲೂ ಗೆರೆ ಮೀರಿದ ಮಾತು ಆಡಿದವರಲ್ಲ ಎಂದು ಪ್ರತಾಪ್ ಶ್ಲಾಘಿಸಿದರು. [ಬಿಜೆಪಿಯಲ್ಲಿ ಎಸ್ಎಂ ಕೃಷ್ಣ ಪಾಂಚಜನ್ಯ? ಯಡಿಯೂರಪ್ಪ ನೇರನುಡಿ]

SM Krishna is most welcome to BJP : Pratap Simha

ಇಪ್ಪತ್ತು ವರ್ಷಗಳ ಹಿಂದೆ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನ ಐಟಿ ಕ್ಷೇತ್ರದ ಉದ್ಧಾರಕ್ಕೆ ಏಕಾಂಗಿಯಾಗಿ ಶ್ರಮಿಸಿದವರು. ಕ್ರಮಬದ್ಧವಾದ ತೆರಿಗೆ ವಸೂಲಿಗೂ ಅವರು ಸಾಕಷ್ಟು ಶ್ರಮ ವಹಿಸಿದ್ದಾರೆ. ಅಲ್ಲದೆ, ರೈತರ ಪಹಣಿ ದಾಖಲೆಗಳ ಗಣಕೀತೃತಗೊಳಿಸಿ ರೈತರಿಗೆ ನೆರವಾದವರು ಎಂದು ಕೃಷ್ಣರನ್ನು ಪ್ರತಾಪ್ ಹೊಗಳಿದರು.

ಅವರು ಮುಖ್ಯಮಂತ್ರಿಯಾಗಿದ್ದಾಗ 2002ರಲ್ಲಿ, ರಾಜ್ಯದ ಹಣಕಾಸು ಸ್ಥಿತಿ ಅಷ್ಟೇನೂ ಹಿತಕರವಾಗಿ ಇಲ್ಲದಿದ್ದಾಗ, ಹಣಕಾಸಿನ ಸ್ಥಿತಿಯನ್ನು ಸರಿಯಾಗಿ ನಿಭಾಯಿಸಲು ಫಿಸ್ಕರ್ ರೆಸ್ಪಾನ್ಸಿಬಿಲಿಟಿ ಬಿಲ್ ಅನ್ನು ಕೃಷ್ಣ ಅವರು ಜಾರಿಗೆ ತಂದಿದ್ದರು ಎಂದು ಪ್ರತಾಪ್ ಕೃಷ್ಣ ಅವರ ಕೊಡುಗೆಯನ್ನು ಸ್ಮರಿಸಿದರು. [ಮೋದಿ ಮೇಲಿನ ಗೌರವದಿಂದ ಕೃಷ್ಣ ಬಿಜೆಪಿ ಸೇರ್ಪಡೆ: ಯಡಿಯೂರಪ್ಪ]

ಈ ನಡುವೆ, ಯಡಿಯೂರಪ್ಪ ಅವರು ಕೂಡ ಎಸ್ಸೆಂ ಕೃಷ್ಣ ಅವರು ಭಾರತೀಯ ಜನತಾ ಪಕ್ಷ ಸೇರುವುದು ಗ್ಯಾರಂಟಿ ಎಂದು ಕಲಬುರಗಿಯಲ್ಲಿ ಶನಿವಾರ ಹೇಳಿದ್ದು, ಭಾನುವಾರ ಕೃಷ್ಣರನ್ನು ಮತ್ತೆ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. [ಎಸ್ಸೆಂ ಕೃಷ್ಣ ರಾಜಕೀಯ ಸನ್ಯಾಸ ತೆಗೆದುಕೊಳ್ಳಲು ಸಕಾಲವೆ?]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mysuru-Madikeri member of Parliament Pratap Simha has showered praise on SM Krishna, who has submitted resignation to Congress. Pratap, while speaking to Oneindia Kannada, told that SM Krishna one of the rare politician who has maintained his political standard.
Please Wait while comments are loading...