ಮಗುವನ್ನು ಬೆಂಕಿಗೆಸೆದ ಪ್ರಕರಣ: ಮನೆಗೆ ಮರಳಿದ ತಾಯಿ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಜನವರಿ 27 : ಜನವರಿ 19ರಂದು ಕುಡಿದ ಅಮಲಿನಲ್ಲಿ ತಾಯಿಯೋಬ್ಬಳು ಮಗುವನ್ನು ಬೆಂಕಿಗೆಸೆದ ಘಟನೆ ಹೆಚ್.ಡಿ.ಕೋಟೆ ತಾಲೂಕಿನಲ್ಲಿ ನಡೆದಿತ್ತು. ಆಕೆಯನ್ನು ಹಾಡಿಗೆ(ಮನೆಗೆ) ಸೇರಿಸಲು ಹಾಡಿ ನಿವಾಸಿಗಳು ವಿರೋದಿಸಿದ್ದು, ಇದೀಗ ಒಪ್ಪಿಕೊಂಡಿದ್ದಾರೆ.

ಚಿಕ್ಕೆರೆ ಹಾಡಿಯ ಸುಧಾ ತನ್ನ ಮಗುವನ್ನು ಬೆಂಕಿಗೆ ಎಸೆದ ಪರಿಣಾಮ ಹಾಡಿ ಮಂದಿ ಆಕ್ರೋಶಿತರಾಗಿ ಆಕೆಯನ್ನು ಹಾಡಿಗೆ ಸೇರಿಸಲು ವಿರೋಧಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಸಿ.ಡಿ.ಪಿ.ಒ ಹಾಗೂ ಟಿ ಎಸ್.ಡಬ್ಲೂ ಅಧಿಕಾರಿಗಳ ಸಭೆ ನಡೆಸಲಾಗಿತ್ತು. ಕೊನೆಗೂ ಅಧಿಕಾರಿಗಳು ಹಾಡಿಮಂದಿ ಮನ ಒಲಿಸಿದ್ದಾರೆ. ಸುಧಾ ಮುಂದೆ ಈ ರೀತಿ ತಪ್ಪು ಮಾಡದಂತೆ ಕ್ಷಮೆಯಾಚಿಸಿದ್ದು, ಹಾಡಿಗೆ ಸೇರಿಸಿಕೊಳ್ಳಲು ಒಪ್ಪಿದ್ದಾರೆ ಎನ್ನಲಾಗಿದೆ.[ಮದ್ಯದ ಅಮಲಿನಲ್ಲಿ ಹೆತ್ತಕೂಸನ್ನೇ ಬೆಂಕಿಗೆಸೆದ ತಾಯಿ!]

Sliding a number of crime incidents in Mysore.

ಅರಣ್ಯ ಪ್ರದೇಶದಲ್ಲಿ ಬೆಂಕಿ ಆಕಸ್ಮಿಕ

ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ನಾಗರಹೊಳೆಯ ಮತ್ತಿಗೂಡು ಅರಣ್ಯಪ್ರದೇಶದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿದೆ. ಬೆಂಕಿಯ ಕೆನ್ನಾಲಿಗೆಯು 5 ಎಕರೆ ವ್ಯಾಪ್ತಿಯಲ್ಲಿ ಹರಡಿದ್ದು, ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಭೇಟಿ ನೀಡಿದ್ದು, ಬೆಂಕಿ ಆರಿಸುವಲ್ಲಿ ನಿರತರಾಗಿದ್ದರು. ಅಗ್ನಿ ಆಕಸ್ಮಿಕಕ್ಕೆ ಕಾರಣಗಳು ತಿಳಿದುಬಂದಿಲ್ಲ.

ಅಂತಾರಾಜ್ಯ ವಂಚಕನ ಬಂಧನ

ಮೈಸೂರು: ಆಹಾರ ಪದಾರ್ಥಗಳನ್ನು ಸರಬರಾಜು ಮಾಡುತ್ತೇನೆಂದು ನಂಬಿಸಿ ಕೋಟ್ಯಂತರ ರು. ವಂಚಿಸಿದ್ದ ಅಂತಾರಾಜ್ಯ ವಂಚಕನನ್ನು ಪೊಲೀಸರು ಬಂಧಿಸಿದ್ದಾರೆ.[ಮೈಸೂರಿನಲ್ಲಿ ನಾಪತ್ತೆಯಾದವನ ಶವ ಪತ್ತೆ : ಕೊಲೆ ಶಂಕೆ]

ಬಂಧಿತನನ್ನು ಮೈಸೂರಿನ ಜೆ.ಪಿ.ನಗರದಲ್ಲಿ ವಾಸವಿರುವ ಆಂಧ್ರಮೂಲದ ಬಾಬಾನಗರದ ವೆಂಕಟರಾಮನ್ (54) ಎಂದು ಗುರುತಿಸಲಾಗಿದೆ. ಈತ 2009ರಲ್ಲಿ ಸೂಪರ್ ಸಿಕ್ಸ್ ಪ್ರಾಡೆಕ್ಟ್ಸ್ ಪ್ರೈ.ಲಿ.ಎಂಬ ಏಜೆನ್ಸಿ ತೆರೆದು ಏಜೆಂಟ್ ರನ್ನು ನೇಮಕ ಮಾಡಿಕೊಂಡಿದ್ದ. ಠೇವಣಿಯಾಗಿ ರು.10ಸಾವಿರ ಕಟ್ಟಿಸಿಕೊಳ್ಳುತ್ತಿದ್ದ. ಅಲ್ಲದೇ ಆಹಾರ ಪದಾರ್ಥ ಸರಬರಾಜು ಮಾಡುವುದಾಗಿ ರು. 25ರಿಂದ 30ಲಕ್ಷ ಕಟ್ಟಿಸಿಕೊಂಡು ಬಳಿಕ ಪದಾರ್ಥ ನೀಡದೇ ಬ್ಯಾಂಕ್ ಗ್ಯಾರಂಟಿ ಹಣವನ್ನೂ ತನ್ನ ಖಾತೆಗೆ ವರ್ಗ ಮಾಡಿಸಿಕೊಂಡು ವಂಚಿಸಿದ್ದ ಎನ್ನಲಾಗಿದೆ.

Sliding a number of crime incidents in Mysore.

ದೂರು ದಾಖಲಿಸಿಕೊಂಡ ವಿದ್ಯಾರಣ್ಯಪುರಂ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ಆತನ ಬಳಿಯಿದ್ದ ಒಂದು ಐಶಾರಾಮಿ ಕಾರು, ಒಂದು ಟಾಟಾ ಏಸ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಈತನ ಮೇಲೆ ಒಟ್ಟು 32 ವಂಚನೆ ಪ್ರಕರಣಗಳು ದಾಖಲಾಗಿವೆ.

ದರೋಡೆ ಪ್ರಕರಣ : ಮತ್ತೊಬ್ಬ ಸೆರೆ

ಮೈಸೂರು: ದರೋಡೆ ಮಾಡಿ ತಲೆ ಮರೆಸಿಕೊಂಡಿದ್ದ ಲೇಡಿರೌಡಿ ಭಾಗ್ಯ ಗ್ಯಾಂಗ್ ನ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಆತನಿಂದ 4.78ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತನನ್ನು ಗೌಸಿಯಾನಗರದ ರೈಸ್ ವುದ್ದೀನ್(33) ಎಂದು ಗುರುತಿಸಲಾಗಿದೆ. ವಿದ್ಯಾರಣ್ಯಪುರಂ ಬಳಿ ಉದ್ಯಮಿ ದ್ವಾರಕೀಶ್ ಅವರನ್ನು ಅಡ್ಡಗಟ್ಟಿದ ಭಾಗ್ಯ ಮತ್ತು ತಂಡದವರು ದರೋಡೆ ಮಾಡಿ ಪರಾರಿಯಾಗಿದ್ದರು. ದರೋಡೆಕೋರರಾದ ಭಾಗ್ಯ ಸೇರಿದಂತೆ ಹನ್ನೊಂದು ಜನರನ್ನು ಪೊಲೀಸರು ಬಂಧಿಸಿದ್ದು, ಆರೋಪಿ ತಲೆಮರೆಸಿಕೊಂಡಿದ್ದ.

ವಿದ್ಯಾರಣ್ಯಪುರಂ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಉದಯಗಿರಿ ಮಹದೇವಪುರ ರಸ್ತೆಯ ಕೆಇಬಿ ಜಂಕ್ಷನ್ ಬಳಿ ಆರೋಪಿಯನ್ನು ವಶಕ್ಕೆ ಪಡೆದಿದ್ದು, ಆತನಿಂದ ಹಣ, ಬೈಕ್, ಮೊಬೈಲ್ ನ್ನು ವಶಪಡಿಸಿಕೊಂಡಿದ್ದಾರೆ.

ಟಿಪ್ಪರ್ ಲಾರಿ ಡಿಕ್ಕಿ : ದ್ವಿಚಕ್ರವಾಹನ ಸವಾರ ಸಾವು

ಮೈಸೂರು: ದ್ವಿಚಕ್ರ ವಾಹನವೊಂದಕ್ಕೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ಬೆಳಿಗ್ಗೆ ಮೈಸೂರಿನಲ್ಲಿ ನಡೆದಿದೆ.
ಮೃತನನ್ನು ಮೈಸೂರಿನ ವಿದ್ಯಾರ್ಥಿ ಶ್ರೀರಂಗಪಟ್ಟಣದ ನಿವಾಸಿ ಕೀರ್ತಿಕುಮಾರ್(19)ಎಂದು ಗುರುತಿಸಲಾಗಿದೆ.

ಈತ ತನ್ನ ದ್ವಿಚಕ್ರವಾಹನದಲ್ಲಿ ಮೈಸೂರಿಗೆ ಬರುತ್ತಿದ್ದ ವೇಳೆ ಎದುರಿನಿಂದ ಬಂದ ಟಿಪ್ಪರ್ ಲಾರಿ ಬಲವಾಗಿ ಗುದ್ದಿದ ಪರಿಣಾಮ ನೆಲಕ್ಕುರುಳಿದ ಕೀರ್ತಿಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಮೈಸೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Sliding a number of crime incidents in Mysore. Here are some of them.
Please Wait while comments are loading...