ರಾಜಕುಮಾರ ಚಿತ್ರ ವೀಕ್ಷಿಸಿ ಸಿದ್ದರಾಮಯ್ಯ ಹೇಳಿದ್ದೇನು?

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಏಪ್ರಿಲ್ 9: ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಕೂಡಾ ರಿಲ್ಯಾಕ್ಸ್ ಮೂಡ್ ನಲ್ಲಿದ್ದರು. ಹಲವು ದಿನಗಳಿಂದ ನಂಜನಗೂಡು-ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದ ಅವರು ಚುನಾವಣೆಯ ದಿನ ಮೈಸೂರಿನ ಜಯಲಕ್ಷ್ಮಿಪುರಂನಲ್ಲಿರುವ ಡಿಆರ್ ಸಿ ಚಿತ್ರಮಂದಿರಕ್ಕೆ ಕುಟುಂಬ ಸಮೇತ ತೆರಳಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ರಾಜಕುಮಾರ್ ಚಲನಚಿತ್ರವನ್ನು ವೀಕ್ಷಿಸಿದರು.

Siddaramaiah in relax mood, watched Rajakumara movie

ಇದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕನ್ನಡದ ಮೇರುನಟ ರಾಜಕುಮಾರ್ ಅವರ ಅಭಿನಯವನ್ನು ಅವರ ಮಗ ಪುನೀತ್ ರಾಜ್ ಕುಮಾರ್ ಅಭಿನಯದ ರಾಜಕುಮಾರ್ ಚಿತ್ರ ನೆನಪಿಸುತ್ತದೆ. ಚಿತ್ರ ತುಂಬಾ ಚೆನ್ನಾಗಿದೆ. ಆದ್ದರಿಂದ ಚಿತ್ರ ವೀಕ್ಷಿಸಲು ಬಂದಿರುವುದಾಗಿ ತಿಳಿಸಿದರು.

Siddaramaiah in relax mood, watched Rajakumara movie

ಹಲವು ದಿನಗಳ ರಾಜಕೀಯ ಒತ್ತಡ, ವಿವಿಧ ಕೆಲಸ ಕಾರ್ಯಗಳ ಒತ್ತಡದಿಂದ ಹೊರಬಂದ ಮುಖ್ಯಮಂತ್ರಿಗಳು ಭಾನುವಾರ 4.15 ರ ಶೋನಲ್ಲಿ ರಾಜಕುಮಾರ ಚಿತ್ರ ಪ್ರದರ್ಶನವನ್ನು ನೋಡಿ ನಿರಾಳರಾದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After the busy campaign for Nanjangud and Gundlupet by-election Chief minister Siddaramaiah is in relax mood. Today Siddaramaiah visited DRC mall to watch the movie Rajakumara.
Please Wait while comments are loading...