ನಾನು ಗೆಲ್ಲೋಕೆ ಸಿಎಂ-ಇಬ್ರಾಹಿಂ 10 ಭಾಷಣ ಸಾಕು: ಶ್ರೀನಿವಾಸ್ ಪ್ರಸಾದ್ ಟಾಂಗ್

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಮಾರ್ಚ್ 13: ನಂಜನಗೂಡು ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಸೋಮವಾರ ಕಾಂಗ್ರೆಸ್ ಗೆ ಸರಿಯಾದ ಟಾಂಗ್ ನೀಡಿದ್ದಾರೆ. ನಂಜನಗೂಡಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಿಎಂ ಇಬ್ರಾಹಿಂ 10 ಸಲ ಭಾಷಣ ಮಾಡಿದರೆ ಸಾಕು, ನನ್ನ ಗೆಲುವು ನಿಶ್ಚಿತ ಎಂದು ಹೇಳಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ವಿ.ಶ್ರೀನಿವಾಸ್ ಪ್ರಸಾದ್ ಮಾತನಾಡಿ, ಪ್ರಸಾದ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆರ್ಥಿಕ ಸಹಾಯ ಮಾಡಿದ್ದರು ಎಂದು ಸಂಸದ ಧ್ರುವನಾರಾಯಣ ಹೇಳಿದ್ದರು. ಆದರೆ ಸಿದ್ದರಾಮಯ್ಯ ನನಗೊಬ್ಬನಿಗೆ ದುಡ್ಡು ಕೊಟ್ಟಿಲ್ಲ. ಎಲ್ಲರಿಗೂ ಕೊಟ್ಟಿದ್ದಾರೆ. ವಿರೋಧ ಪಕ್ಷದಲ್ಲಿದ್ದಾಗ ಚುನಾವಣೆಗೆ ದುಡ್ಡು ಕೊಡೋದು ಸಹಜ ಎಂದು ತಿರುಗೇಟು ನೀಡಿದರು.[ಮೋದಿಯನ್ನು ಹುಚ್ಚನಿಗೆ ಹೋಲಿಸಿದ ಸಿಎಂ ಇಬ್ರಾಹಿಂ ಮೇಲೆ ಎಫ್ಐಆರ್]

Siddaramaiah-Ibrahim speech is enough to my victory: Srinivas Prasad

ಸಿಎಂ ಮನೆಯಲ್ಲಿ ಚಾಕರಿ ಮಾಡಿಕೊಂಡಿರುವ ವ್ಯಕ್ತಿ ಮಹದೇವಪ್ಪ. ಆತನ ಮಗನ ಮದುವೆ ದಿನವೇ ಆತ ಬಿದ್ದಿದ್ದ. ಅಂಥವನು ನನ್ನ ಆರೋಗ್ಯದ ಕುರಿತು ಏನು ಮಾತನಾಡುವುದು? ಮಗನನ್ನು ಚುನಾವಣೆಗೆ ನಿಲ್ಲಿಸುತ್ತೇನೆ ಎಂದು ಓಡಾಡಿ, ಈಗ ಸುಮ್ಮನಾಗಿರುವ ಮಹದೇವಪ್ಪ ಬುದ್ಧಿ ಸ್ಥಿಮಿತ ಕಳೆದುಕೊಂಡಿರುವ ವ್ಯಕ್ತಿ. ಸ್ಥಿಮಿತ ಕಳೆದುಕೊಂಡಿರುವುದು ವ್ಯಕ್ತಿ ನಾನಲ್ಲ ಎಂದು ವಾಕ್ ಪ್ರಹಾರ ನಡೆಸಿದರು. ಎಲ್ಲರಿಗೂ ಸದ್ಯದಲ್ಲಿಯೇ ಉತ್ತರ ನೀಡಲಿದ್ದೇನೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Siddaramaiah-Ibrahim speech is enough to my victory in Nanjangud by election, said by BJP contestant and former minister V.Srinivas Prasad at Mysuru on Monday.
Please Wait while comments are loading...