ಎಚ್.ಡಿ.ಕೋಟೆಯಲ್ಲಿ ಯೋಧ ಮಹೇಶ್ ಹೆಸರಿನಲ್ಲಿ ಸ್ಮಾರಕ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಫೆಬ್ರವರಿ,17: ಸಿಯಾಚಿನ್ ನಲ್ಲಿ ವೀರಮರಣವನ್ನಪ್ಪಿದ ಯೋಧ ಪಿ.ಎನ್.ಮಹೇಶ್ ಅವರ ಸ್ಮರಣಾರ್ಥ ಎಚ್.ಡಿ.ಕೋಟೆ ಪಟ್ಟಣದಲ್ಲಿ ಸ್ಮಾರಕವನ್ನು ನಿರ್ಮಾಣ ಮಾಡಲಾಗುವುದು ಎಂದು ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ್ದಾರೆ.

ಎಚ್.ಡಿ.ಕೋಟೆ ಪಟ್ಟಣದ ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಯೋಧ ಮಹೇಶ್ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ 25 ಲಕ್ಷ ರೂ.ಗಳ ಚೆಕ್ ವಿತರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಮೃತನ ಕುಟುಂಬಕ್ಕೆ 4 ಎಕರೆ ಜಮೀನು, ಕುಟುಂಬಕ್ಕೆ ನಿವೇಶನ ಮತ್ತು ಮೃತನ ಸ್ಮಾರಕ ನಿರ್ಮಾಣಕ್ಕೆ ನಿವೇಶನ ಸೇರಿದಂತೆ ಸರಕಾರದ ವತಿಯಿಂದ ಎಲ್ಲ ಸವಲತ್ತುಗಳನ್ನು ಕೊಡಲಾಗುವುದು' ಎಂದರು.[ಭಾರತ ಮಾತೆಯ ಮಡಿಲು ಸೇರಿದ ಯೋಧ ಮಹೇಶ್]

Siddaramaiah decide to build a soldier Mahesh monument in HD Kote, Mysuru

ಕ್ಯಾಂಪ್ 20ಸಾವಿರ ಅಡಿ ಎತ್ತರದಲ್ಲಿತ್ತು.

ಈ ಸಂದರ್ಭ ಯೋಧ ಮಹೇಶ್ ಅವರ ಪಾರ್ಥೀವ ಶರೀರದೊಂದಿಗೆ ಬಂದಿದ್ದ ಯೋಧರೊಬ್ಬರು ಮಾತನಾಡಿ ಯೋಧ ಮಹೇಶ್ ಮೃತ ಪಟ್ಟಿದ್ದು ಸಿಯಾಚಿನ್ ಪ್ರದೇಶದ ಹಿಮಪಾತದಲ್ಲಿ. ನಮ್ಮ ಕ್ಯಾಂಪ್ ಸಮುದ್ರ ಮಟ್ಟದಿಂದ ಸುಮಾರು 20 ಸಾವಿರ ಅಡಿ ಎತ್ತರದಲ್ಲಿದೆ.

ಹತ್ತುವುದು ಮತ್ತು ಇಳಿಯುವುದು ಬಹಳ ಕಷ್ಟ. ಹತ್ತುವುದಕ್ಕೆ ಸುಮಾರು 45 ದಿನಗಳು ಬೇಕಾದರೆ, ಇಳಿಯಲು 30 ದಿನ ಬೇಕೆ ಬೇಕು. ಒಟ್ಟಾರೆ ಅಲ್ಲಿ 3 ತಿಂಗಳಿಂದ 4 ತಿಂಗಳ ಕಾಲ ಕೆಲಸ ಮಾಡಬೇಕಾಗುತ್ತದೆ ಎಂದರು.[ಹುತಾತ್ಮ ಮಹೇಶ್ ಗೆ ಅಂತಿಮ ನಮನ ಸಲ್ಲಿಸಿದ ಸಿಎಂ]

ಹಿಮಪಾತದ ಜಾಗದಲ್ಲಿ ಮೃತ ಯೋಧರ ಶವವನ್ನು ಹುಡುಕುವುದು ಬಹಳ ಕಷ್ಟ. ಯೋಧರು ಕಾಣೆಯಾಗಿದ್ದಾರೆ ಎಂದು ಹೇಳಿದ ದಿನದಿಂದ 24 ಗಂಟೆಗಳ ಕಾಲ ಹುಡುಕಾಟ ನಡೆಸಲಾಯಿತು. 6 ದಿನದ ಒಳಗೆ ಶವಗಳನ್ನು ಪತ್ತೆ ಮಾಡಲಾಯಿತು. ಡಾಗ್ ಸ್ಕ್ವಾಡ್ ಮತ್ತು ರೇಡಾರ್ ಹಾಗೂ ಸ್ಥಳೀಯ ಲಡಾಖ್ ಜನತೆಯ ಸಹಕಾರದಿಂದ ಇದು ಸಾಧ್ಯವಾಯಿತು ಎಂದು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Chief Minister Siddaramaiah has decide to build a soldier Mahesh monument in HD Kote, Mysuru. Mahesh passed away in Siachen incident February 01st.
Please Wait while comments are loading...