ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ, ಜೆಡಿಎಸ್ ನೊಂದಿಗೆ ಅನಧಿಕೃತವಾಗಿ ಮೈತ್ರಿ ಮಾಡಿಕೊಂಡಿದೆ: ಸಿಎಂ

By Yashaswini
|
Google Oneindia Kannada News

ಮೈಸೂರು, ಏಪ್ರಿಲ್ 25 : ವಿಧಾನಸಭಾ ಚುನಾವಣೆಯಲ್ಲಿ ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಜೆಡಿಎಸ್ ಜೊತೆ ಬಿಜೆಪಿ ಈಗಾಗಲೇ ಮೈತ್ರಿ ಮಾಡಿಕೊಂಡಿದೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಸಿಎಂ, ಬಾದಾಮಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕರ್ನಾಟಕದ ದಲಿತರು ನಮ್ಮ ಪರ ಇದ್ದಾರೆ. ಹೀಗಾಗಿ ಮೈಸೂರಿನಲ್ಲಿ ಮಾಯಾವತಿ ಸಮಾವೇಶ ಎಫೆಕ್ಟ್ ನಮಗೆ ಇಲ್ಲ.

ಬಾದಾಮಿಯಲ್ಲಿ ನಾಮಪತ್ರ ಸಲ್ಲಿಸಿದ ಸಿದ್ದರಾಮಯ್ಯ, ಶ್ರೀರಾಮುಲು ಬಾದಾಮಿಯಲ್ಲಿ ನಾಮಪತ್ರ ಸಲ್ಲಿಸಿದ ಸಿದ್ದರಾಮಯ್ಯ, ಶ್ರೀರಾಮುಲು

ವರುಣಾದಲ್ಲಿ ಬಿಜೆಪಿ ಅಭ್ಯರ್ಥಿ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ ನಾನು ಮೊದಲೇ ಹೇಳಿದಂತೆ ಬಿಜೆಪಿಯಿಂದ ಯಾರೇ ನಿಂತಿದ್ದರೂ ನಾವೇ ಗೆಲ್ಲುತ್ತಿದ್ದೆವು. ಯಡಿಯೂರಪ್ಪ ನಿಂತಿದ್ದರೂ ನಾವೇ ಗೆಲ್ಲುತ್ತೇವೆ ಅಂತಾ ಮೊದಲೇ ಹೇಳಿದ್ದೆ. ಹಲವು ಕ್ಷೇತ್ರಗಳಲ್ಲಿ ಜೆಡಿಎಸ್ ಜೊತೆ ಬಿಜೆಪಿ ಕೈ ಜೋಡಿಸಿದೆ. ಜೆಡಿಎಸ್, ಬಿಜೆಪಿ ಅನಧಿಕೃತವಾಗಿ ಒಪ್ಪಂದ ಮಾಡಿಕೊಂಡಿದೆ ಮಾಡಿಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.

Siddaramaiah accuses unholy alliance between BJP and JDS

ನನಗೆ ಬಾದಾಮಿಯಲ್ಲಿನ ಜನರ ಬೆಂಬಲ ನೋಡಿ ಸಂತಸವಾಗಿದೆ. ನಾನು ಬಾದಾಮಿಗೆ ಒಂದು ದಿನವಷ್ಟೇ ಪ್ರಚಾರಕ್ಕೆ ಹೋಗುತ್ತೇನೆ ಎಂದು ತಿಳಿಸಿದರು. ನಾಳೆ ರಾಹುಲ್ ಗಾಂಧಿ ಉತ್ತರ ಕರ್ನಾಟಕಕ್ಕೆ ಪ್ರಚಾರಕ್ಕೆ ಬರಲಿದ್ದಾರೆ.

ಹೊನ್ನಾವರ ಬಂಟ್ವಾಳ, ಮುರುಡೇಶ್ವರ ಸೇರಿ ಹಲವು ಕಡೆ ಪ್ರವಾಸ ಮಾಡಲಿದ್ದಾರೆ. ನನ್ನ ಚಾಮುಂಡೇಶ್ವರಿ ಪ್ರವಾಸ ಇಂದಿಗೆ ಕೊನೆಯಾಗಲಿದ್ದು, ಕೊನೆಯ ಎರಡು ದಿನ ಮಾತ್ರ ಚಾಮುಂಡೇಶ್ಚರಿ ಪ್ರವಾಸ ಮಾಡುತ್ತೇನೆ. ಈಗಾಗಲೇ 150 ಕ್ಷೇತ್ರಗಳಿಗೆ ಭೇಟಿ ಕೊಟ್ಟಿದ್ದೇನೆ. ಎಲ್ಲಿ ಸಮಸ್ಯೆ ಇದೆ ಅಲ್ಲಿ ಹೋಗುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ನಮ್ಮದು ಅಪ್ಪ ಮಕ್ಕಳ ಪಕ್ಷ ಅಲ್ಲ ಅನ್ನೊ ಅಮಿತ್ ಶಾ ಟ್ವಿಟ್ ಗೆ ಟಾಂಗ್ ಸಿದ್ದರಾಮಯ್ಯ, ಜನ ಬಿಜೆಪಿ ಅವರನ್ನ ಸೀರಿಯಸ್ ಆಗಿ ತೆಗೆದುಕೊಂಡಿಲ್ಲ. ಯಡಿಯೂರಪ್ಪ, ಕಾರಾಜೋಳ ತಮ್ಮ ಮಕ್ಕಳಿಗೆ ಟಿಕೆಟ್ ಕೊಡಿಸಿಲ್ವ ಅವ್ರೇಲ್ಲಾ ಏನು ಎಂದು ಪ್ರಶ್ನಿಸಿದರು.

ನಾನು ಸಮೀಕ್ಷೆ ನಂಬಲ್ಲ. ಕರ್ನಾಟಕದ ಜನರ ನಾಡಿ ಮಿಡಿತ ಅರಿವಿದೆ. ಈಗಿನ ಟ್ರೆಂಟ್ ಕಾಂಗ್ರೆಸ್ ಕಡೆ ಇದೆ.ಈ ಬಾರಿ ನಮ್ಮ ಸರ್ಕಾರ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಕುಮಾರಸ್ವಾಮಿ ಅಧಿಕಾರಕ್ಕೆ ಬರುವ ಕನಸ್ಸು ಕಾಣುತ್ತಿದ್ದಾರೆ. ಕಾಂಗ್ರೆಸ್ ಪಾರ್ಟಿಯನ್ನ ಜನ ಜ್ಯಾತ್ಯಾತೀತವಾಗಿ ಬೆಂಬಲಿಸಲಿದ್ದಾರೆ ಎಂದು ತಿಳಿಸಿದರು.

ಫ್ರೊಫೆಸರ್ ಮಹೇಶ್ ಚಂದ್ರ ಗುರು ಹಾಗೂ ಅರವಿಂದ್ ಮಾಲಗತ್ತಿ ಅಮಾನತು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿಎಂ, ಅವರು ನನ್ನ ಪರವಾಗಿ ಪ್ರಚಾರ ಮಾಡುತ್ತಿರಲಿಲ್ಲ. ಸಂವಿಧಾನ ಉಳಿವಿಗಾಗಿ ಜಾಗೃತ ಸಭೆ ನಡೆಸುತ್ತಿದ್ದರು. ಅದರಲ್ಲಿ ನನ್ನ ಮಗ ಯತೀಂದ್ರ ಭಾಗವಹಿಸಿದ್ದರು. ಸಂವಿಧಾನ ಉಳಿಸಿ, ಪ್ರಜಾಪ್ರಭುತ್ವ ಉಳಿಸಿ ಎಂದು ಸಭೆ ನಡೆಸಿದರೇ ತಪ್ಪೇನು. ಅದು ಕಾಂಗ್ರೆಸ್ ಕಾರ್ಯಕ್ರಮ ಅಲ್ಲ, ಅದೊಂದು ಖಾಸಗಿ ಕಾರ್ಯಕ್ರಮ ಎಂದು ಸ್ಪಷ್ಟನೆ ನೀಡಿದರು.

English summary
Chief minister Siddaramaiha said that BJP and JDS have come together an understating against congress party in ongoing state assembly selections. He also slammed the JDS which itself claimed as secular party and joined hands with communal forces.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X