ಶ್ರೀನಿವಾಸ್ ಪ್ರಸಾದ್ ಗೌರವ ನೀಡುವುದು ಕಲಿಯಲಿ: ಧ್ರುವನಾರಾಯಣ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಮಾರ್ಚ್ 17 : ಮಹಾನ್ ವ್ಯಕ್ತಿಗಳ ಕುರಿತು ಮಾತನಾಡುವ ಶ್ರೀನಿವಾಸ್ ಪ್ರಸಾದ್ ಮೊದಲು ಏಕವಚನ ಪದಪ್ರಯೋಗ ನಿಲ್ಲಿಸಲಿ ಎಂದು ಸಂಸದ ಧ್ರುವನಾರಾಯಣ ಗುಡುಗಿದರು.

ಮೈಸೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಂಸದ ಧ್ರುವ ನಾರಾಯಣ ಮಾಧ್ಯಮಗಳೊಂದಿಗೆ ಮಾತನಾಡುತ್ತ, ನಂಜನಗೂಡು ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಪ್ರಸಾದ್ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಏಪ್ರಿಲ್ 9 ರಂದು ನಡೆಯಲಿರುವ ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆಗೆ ಉಭಯ ಪಕ್ಷಗಳೂ ಭರದ ಸಿದ್ಧತೆ ನಡೆಸುತ್ತಿದ್ದು, ಚುನಾವಣೆಯಲ್ಲಿ ಕಾಂಗ್ರೆಸ್ ಜಯಶಾಲಿಯಾಗಲಿದೆ ಎಂದು ಧ್ರುವನಾರಾಯಣ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.[ಉಪಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧಿಸಲ್ಲ : ಹೆಚ್.ಡಿ.ದೇವೇಗೌಡ ಸ್ಪಷ್ಟನೆ]

Shrinivas Prasad should learn to give respect first: Dhruvanarayan

ಶ್ರೀನಿವಾಸ ಪ್ರಸಾದ್ ಅವರು ಓರ್ವ ಮಾಜಿ ಶಾಸಕ, ನಂಜನಗೂಡು ಉಪಚುನಾವಣೆ ಬಿಜೆಪಿ ಅಭ್ಯರ್ಥಿ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಲಿ. ಬುದ್ಧ, ಬಸವಣ್ಣನವರ ಕುರಿತು ಮಾತನಾಡುವವರು ಏಕವಚನದಲ್ಲಿ ಮಾತಾಡುವುದನ್ನು ನಿಲ್ಲಿಸಲಿ ಎಂದಿದ್ದಾರೆ.[ನಂಜನಗೂಡು: ನಾಮಪತ್ರ ಸಲ್ಲಿಕೆಗೆ ಮಾರ್ಚ್ 21 ಕಡೆಯ ದಿನಾಂಕ]

ಶ್ರೀನಿವಾಸ್ ಪ್ರಸಾದ್ ಜನರ ನಂಬಿಕೆಯನ್ನು ಹುಸಿಗೊಳಿಸಿದ್ದಾರೆ. ಕ್ಷೇತ್ರದಲ್ಲಿ ಅವರ ಸಾಧನೆಗಳು ಶೂನ್ಯವಾಗಿವೆ. ಅಲ್ಲಿ ಅವರ ವಿರುದ್ಧದ ಅಲೆಯಿದೆ. ನಂಜನಗೂಡು, ಗುಂಡ್ಲುಪೇಟೆ ಎರಡು ಕ್ಷೇತ್ರವನ್ನು ಕಾಂಗ್ರೆಸ್ ಗೆಲ್ಲಲಿದೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಅಧಿಕಾರದ ಸಾಧನೆಯೂ ಶೂನ್ಯವಾಗಿದೆ. ಅವರ ಕಾಲದಲ್ಲಿ ಮೂರೇ ಮೂರು ಯೋಜನೆಗಳು ನಡೆದಿವೆ. ಆದರೆ ಕಾಂಗ್ರೆಸ್ ಸರ್ಕಾರ 130 ಯೋಜನೆಗಳನ್ನು ಯಶಸ್ವಿಗೊಳಿಸಿದೆ ಎಂದು ಸಹ ಅವರು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Shrinivas Prasad should learn to give respect first. He should not forget his responsibility and post, Congress MP Dhruvanarayan told today at Mysuru.
Please Wait while comments are loading...