ಮೈಸೂರು ಬಿಜೆಪಿಯಲ್ಲಿ ಭಿನ್ನಮತ : ಪತ್ರಿಕಾಗೋಷ್ಠಿಗೆ ಶೋಭಾ ಗೈರು

Posted By:
Subscribe to Oneindia Kannada

ಮೈಸೂರು, ಅಕ್ಟೋಬರ್ 25 : ಪಕ್ಷ ತ್ಯಜಿಸುವ ಚಿಂತನೆ ಸದ್ಯಕ್ಕೆ ಕೈಬಿಟ್ಟಿರುವ ಮಾಜಿ ಸಚಿವ ಸಿ.ಎಚ್. ವಿಜಯಶಂಕರ್ ಅವರನ್ನು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಅವರು ಭೇಟಿ ಮಾಡಲು ನಡೆಸಿದ ಯತ್ನ ವಿಫಲವಾಗಿದೆ.

ನಗರ ಹೊಟೇಲೊಂದರಲ್ಲಿ ವಿಜಯಶಂಕರ್ ಅವರ ಜತೆ ಶೋಭಾ ಅವರು ಮಾತುಕತೆ ನಡೆಸಲು ಸಂಜೆ 7ಕ್ಕೆ ಸಮಯ ನಿಗದಿಪಡಿಸಿಕೊಂಡಿದ್ದರು. ಆದರೆ ವಿಜಯಶಂಕರ್ ಅತ್ತ ತಲೆ ಹಾಕದಿರಲು ನಿರ್ಧರಿಸಿದರು. ಇದನ್ನರಿತ ಶೋಭಾ ಅವರೂ ಹೋಟೆಲ್‍ನತ್ತ ಬರಲಿಲ್ಲ. ಆದರೆ, ಇಬ್ಬರೂ ಪ್ರಮುಖರ ಭೇಟಿ ವಿಷಯ ತಿಳಿದು, ಪಕ್ಷದ ಮುಖಂಡರು, ಕಾರ್ಯಕರ್ತರು ಅರ್ಧಗಂಟೆ ಮುಂಚೆಯೇ ಹೊಟೇಲ್ ಮುಂದೆ ಜಮಾಯಿಸಿ ಹೂಗುಚ್ಛ ಹಿಡಿದು ನಿಂತಿದ್ದರು. ಆದರೆ ಭೇಟಿ ಕೈಗೂಡದ್ದಕ್ಕೆ 4 ಗಂಟೆ ಕಾಲ ಕಾದಿದ್ದ ಕಾರ್ಯಕರ್ತರು ಬೇಸರಗೊಂಡು ನಿರ್ಗಮಿಸಿದರು.

Shobha Karandlaje's attempt to meet C H Vijayashankar in Mysuru failed.

ಪಿರಿಯಾಪಟ್ಟಣ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ತಮಗೆ ಅವಕಾಶ ನಿರಾಕರಿಸಲಾಗುತ್ತದೆಂಬ ಸುದ್ದಿ ತಿಳಿದಿ ಬಿಜೆಪಿ ಮುಖಂಡ ಸಿ.ಎಚ್.ವಿಜಯಶಂಕರ್ ಮುನಿಸಿಕೊಂಡಿದ್ದರು. ನಂತರ ಪಕ್ಷದ ಕಾರ್ಯಕ್ರಮಗಳಿಂದ ದೂರ ಉಳಿಯುವ ಮೂಲಕ ಅದನ್ನು ಹೊರಹಾಕಿದ್ದರು. ಅಷ್ಟೇ ಅಲ್ಲ, ಸುದ್ದಿಗೋಷ್ಠಿ ನಡೆಸಿ ಪಕ್ಷದಿಂದ ಹೊರನಡೆಯತ್ತಿರುವುದಾಗಿಯೂ ಪ್ರಕಟಿಸಿದ್ದರು. ಆದರೆ, ಬಳಿಕ ಸಂಸದ ಪ್ರತಾಪ್ ಸಿಂಹ, ಮಾಜಿ ಸಚಿವ ಎ.ಎಸ್.ರಾಮದಾಸ್ ಮತ್ತಿತರರು ನಡೆಸಿದ ಸಂಧಾನ ಯಶಸ್ವಿಯಾಯಿತು. ಬಳಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾಗ, ಪಕ್ಷದಲ್ಲೇ ಉಳಿಯುವುದಾಗಿ ಘೋಷಿಸಿದ್ದರು. ಇಷ್ಟೆಲ್ಲಾ ಬೆಳವಣಿಗೆಯಿಂದ ಗೊಂದಲ ಉಂಟಾಗಿದ್ದರಿಂದ ಸಿ.ಎಚ್.ವಿಜಯಶಂಕರ್ ಅವರನ್ನು ಭೇಟಿಯಾಗಿ ಚರ್ಚಿಸಲು ಶೋಭಾ ಕರಂದ್ಲಾಜೆ ಅವರು ಮೈಸೂರಿಗೆ ಬಂದರು. ವಿಜಯಶಂಕರ್ ಅವರ ಮನೆಗೂ ತೆರಳಿ, ಅವರ ಅನುಪಸ್ಥಿತಿಯಲ್ಲಿ ಕುಟುಂಬದೊಂದಿಗೆ ಮಾತನಾಡಿ ವಾಪಸಾಗಿದ್ದಾರೆ ಎನ್ನಲಾಗಿದೆ.

ವಿಜಯ್ ಶಂಕರ್ ಪಕ್ಷದಲ್ಲೇ ಉಳಿಯುತ್ತಾರೆ :
ಮಾಜಿ ಸಚಿವ ವಿಜಯ್ ಶಂಕರ್‌ ಬಿಜೆಪಿ ಬಿಡಲ್ಲ.ಪಿರಿಯಾಪಟ್ಟಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅವರೇ ಆಗ್ತಾರೆ. ಈ ವಿಚಾರದಲ್ಲಿ ಯಾವುದೇ ರೀತಿಯ ಅನುಮಾನವಿಲ್ಲ. ಈ ವಿಚಾರವಾಗಿ ಈಗಾಗಲೇ ಬಿಜೆಪಿ ವರಿಷ್ಠರಿಗೆ ವರದಿ ನೀಡಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೋಟೆ ಎಂ‌ ಶಿವಣ್ಣ ಹೇಳಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಕೋಟೆ ಎಂ‌ ಶಿವಣ್ಣ, ರಾಜ್ಯ ಸರ್ಕಾರದಿಂದ ರೈತರಿಗಾಗುತ್ತಿರುವ ಅನ್ಯಾಯ ಹಾಗೂ ವೈಫಲ್ಯಗಳ ವಿರುದ್ದ ಇದೇ ತಿಂಗಳು 26ರಂದು ಬೃಹತ್ ರೈತ ಸಮಾವೇಶ ನಡೆಸಲಾಗುತ್ತದೆ. ಮಹಾರಾಜ ಕಾಲೇಜು ಮೈದಾನದಲ್ಲಿ ಸಮಾವೇಶ ನಡೆಯಲಿದ್ದು, ರೈತರಿಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಸಮಾವೇಶ ಆಯೋಜನೆ ಮಾಡಲಾಗಿದೆ ಸಮಾವೇಶವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರು ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಕೃಷಿಯಲ್ಲಿ ರಾಸಾಯನಿಕ ಮುಕ್ತ ಬೆಳೆ ಬೆಳೆಯಲು ಹಾಗೂ ಇನ್ನಿತರ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯದ ವಿವಿಧ ನಾಯಕರು ಆಗಮಿಸಿ ಸಮಾವೇಶದಲ್ಲಿ ರೈತರಿಗೆ ಆತ್ಮಸ್ಥೈರ್ಯ ತುಂಬಲಿದ್ದಾರೆ. 15 ರಿಂದ‌ 20 ಸಾವಿರ ರೈತರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bjp Leader Shobha Karandlaje's attempt to meet Former MP and senior BJP leader C H Vijayashankar in Mysuru has been failed.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ