ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮುಂಡಿ ಬೆಟ್ಟದಲ್ಲಿ ಸಿಎಂ ಸಿದ್ದು ರಾಜೀನಾಮೆ ಬಯಸಿದ ಶೋಭಾ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜುಲೈ 15: ಭ್ರಷ್ಟರ ರಕ್ಷಣೆಗೆ ನಿಂತಿರುವ ಸಿಎಂ ಸಿದ್ದರಾಮಯ್ಯ ಅವರು ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಮೈಸೂರು ಜಿಲ್ಲೆಯ ಮಾಜಿ ಉಸ್ತುವಾರಿ ಸಚಿವೆ ಶೋಭಾ ಕರಂದ್ಲಾಜೆ ಅವರು ಅಷಾಢ ಶುಕ್ರವಾರದಂದು ಚಾಮುಂಡಿ ಬೆಟ್ಟದಲ್ಲಿ ಹೇಳಿದರು.

ಅಲ್ಪಸಂಖ್ಯಾತರ ಹೆಸರಲ್ಲಿ ಸಚಿವ ಕೆ.ಜೆ. ಜಾರ್ಜ್ ಅವರನ್ನು ರಕ್ಷಿಸುತ್ತಿರುವುದು ಸರಿಯಲ್ಲ. ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಜಾರ್ಜ್ ಹೆಸರಿದ್ದರೂ ಅವರನ್ನು ಸಂಪುಟದಿಂದ ಕೈಬಿಡದೆ ಸಿಎಂ ಸಿದ್ದರಾಮಯ್ಯ ರಕ್ಷಣೆಗೆ ನಿಂತಿದ್ದಾರೆ. ಜಾರ್ಜ್ ಮಾತ್ರವಲ್ಲ ಸಿದ್ದರಾಮಯ್ಯ ಕೂಡಾ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

ಮುಖ್ಯಮಂತ್ರಿ ತವರಲ್ಲೇ ಅಧಿಕಾರಿಗಳಿಗೆ ರಕ್ಷಣೆಯಿಲ್ಲದಂತಾಗಿದ್ದು, ಮಹಿಳಾ ಜಿಲ್ಲಾಧಿಕಾರಿ ಮೇಲೆ ದೌರ್ಜನ್ಯ ಖಂಡನೀಯವಾಗಿದೆ. ಆದ್ದರಿಂದ ಇಂತಹ ಅಧಿಕಾರಿಗಳಿಗೆ ಕೆಲಸ ಮಾಡಲು ಚಾಮುಂಡೇಶ್ವರಿ ಶಕ್ತಿ ನೀಡಲಿ ಎಂದ ಸಂಸದೆ ಶೋಭಾ ಕರಂದ್ಲಾಜೆ ಡಿವೈಎಸ್ಪಿ ಗಣಪತಿ ಪತ್ನಿಗೆ ಮತ್ತು ಕುಟುಂಬಕ್ಕೆ ದುಃಖ ಭರಿಸಲು ಶಕ್ತಿ ನೀಡಲು ಪ್ರಾರ್ಥಿಸಿದ್ದಾಗಿ ಹೇಳಿದರು.

Shobha Karandlaje

ಆಷಾಢದ ವಿಶೇಷ ಪೂಜೆ: ಪ್ರತಿ ವರ್ಷದಂತೆ ಈ ಬಾರಿಯೂ ಬೆಳಗ್ಗೆ ಬರಿಗಾಲಿನಲ್ಲೇ ಬೆಂಬಲಿಗರೊಂದಿಗೆ ಚಾಮುಂಡಿ ಬೆಟ್ಟದ ತಪ್ಪಲಿನ ಪ್ರತಿ ಮೆಟ್ಟಿಲಿಗೆ ನಮಸ್ಕರಿಸುತ್ತ ಬೆಟ್ಟವನ್ನೇರಿ ತಾಯಿ ಚಾಮುಂಡಿ ದರ್ಶನ ಪಡೆದ ಬಳಿಕ ಮಾತನಾಡಿದರು.

ಕಳೆದ 8 ವರ್ಷದಿಂದ ಆಷಾಢದಲ್ಲಿ ಬೆಟ್ಟ ಹತ್ತುತ್ತಿದ್ದು, ಅಂತೆಯೇ ಈ ಬಾರಿಯೂ ದರ್ಶನಕ್ಕೆ ಬಂದಿದ್ದೇನೆ. ನಾಡಿನ ಜನತೆಗೆ ಸುಖ ಸಂತೋಷ ನೀಡಲಿ ಎಂದು ಬೇಡಿಕೊಂಡಿದ್ದೇನೆ ಎಂದರು.

ತಾಯಿ ಚಾಮುಂಡಿಯನ್ನು ನಂಬಿದ್ದು, ತಾಯಿಯ ಆಶೀರ್ವಾದದಿಂದಲೇ ಈ ಹಂತಕ್ಕೆ ತಲುಪಿದ್ದೇನೆ. ನಾನು ಯಾರಿಗೂ ಅನ್ಯಾಯ ಮಾಡಿಲ್ಲ. ಎಲ್ಲವನ್ನೂ ಚಾಮುಂಡಿಯೇ ನೋಡಿಕೊಳ್ಳುತ್ತಾಳೆ ಎಂದರು. ಸಂಸದೆಯೊಂದಿಗೆ ಬಿಜೆಪಿ ಮುಖಂಡರಾದ ಬಿ.ಪಿ ಮಂಜುನಾಥ್, ನಂದೀಶ್ ಪ್ರೀತಮ್, ಕಾಪು ಸಿದ್ಧಲಿಂಗಸ್ವಾಮಿ ಸೇರಿದಂತೆ ಇನ್ನಿತರರು ಇದ್ದರು.

English summary
Former minister Shobha Karandlaje alleged that the Siddaramaiah Government is making a mockery of the democracy and added that the government was thick skinned. Chikkamagaluru-Udupi MP Shobha Karandlaje demanded the resignation of Chief Minister Siddharamaiah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X