ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮುಂಡಿ ಬೆಟ್ಟ ಕಾಲ್ನಡಿಗೆಯಲ್ಲಿ ಹತ್ತಿದ ಕರಂದ್ಲಾಜೆ, ಸಿದ್ದು ವಿರುದ್ಧ ಸಿಟ್ಟು

By Yashaswini
|
Google Oneindia Kannada News

ಮೈಸೂರು, ಜುಲೈ 14 : ಪರಪ್ಪನ ಅಗ್ರಹಾರದಲ್ಲಿ ಅಕ್ರಮ ಚಟುವಟಿಕೆ ಹಿನ್ನೆಲೆಯಲ್ಲಿ ತಪ್ಪಿತಸ್ಥರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲಿ ಎಂದು ಸಿದ್ದರಾಮಯ್ಯ ವಿರುದ್ಧ ಸಂಸದೆ ಶೋಭಾ ಕರಂದ್ಲಾಜೆ ವಾಕ್ ಪ್ರಹಾರ ನಡೆಸಿದರು.

ಶೋಭಾ ಕರಂದ್ಲಾಜೆ ಮೇಲೆ ಮುಗಿಬಿದ್ದ ದಿನೇಶ್ ಗುಂಡೂರಾವ್ ಪತ್ನಿ ತಬುಶೋಭಾ ಕರಂದ್ಲಾಜೆ ಮೇಲೆ ಮುಗಿಬಿದ್ದ ದಿನೇಶ್ ಗುಂಡೂರಾವ್ ಪತ್ನಿ ತಬು

ಮೈಸೂರಿನಲ್ಲಿ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಶುಕ್ರವಾರ ಕಾಲ್ನಡಿಗೆಯಲ್ಲಿ ಬೆಟ್ಟ ಹತ್ತುವ ವೇಳೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಮುಸ್ಲಿಂ ಅಂತ ಪದ ಬಳಸಲು ಸಿಎಂಗೆ ಭಯವಿದೆ. ಕೇವಲ ವೋಟು ಬ್ಯಾಂಕ್ ರಾಜಕಾರಣ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ.

Shobha Karandlaje angry on Siddaramaiah over Mangaluru Issue

ಚಾಮುಂಡಿ ಸನ್ನಿಧಿಯಲ್ಲಿರುವ ಸಿಎಂಗೆ ಚಾಮುಂಡಿ ತಾಯಿ ಅಪರಾಧಿಗಳನ್ನು ಬಂಧಿಸುವ ಶಕ್ತಿ‌ ನೀಡಲಿ. ಹಿಂದೂಗಳ‌ ರಕ್ಷಣೆ ಮಾಡಲಿ ಎಂದು ಬೇಡುತ್ತೇನೆ ಎಂದು ತಿಳಿಸಿದರು.

ಕೊಡಗಿನಲ್ಲಿ ಸದಾನಂದ ಗೌಡ, ಕರಂದ್ಲಾಜೆ ಅಕ್ರಮ ಆಸ್ತಿ: ರಮಾನಾಥ ರೈಕೊಡಗಿನಲ್ಲಿ ಸದಾನಂದ ಗೌಡ, ಕರಂದ್ಲಾಜೆ ಅಕ್ರಮ ಆಸ್ತಿ: ರಮಾನಾಥ ರೈ

ಮಂಗಳೂರು ಗಲಭೆಯನ್ನು ಹತ್ತಿಕ್ಕಲು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಾಯಿ ಚಾಮುಂಡೇಶ್ವರಿ ಶಕ್ತಿಯನ್ನು ನೀಡಲಿ. ಹಿಂದೂಗಳು ಗಲಭೆ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಎಲ್ಲಿಯೂ ಮುಸ್ಲಿಂ ಅಂತ ಹೇಳುತ್ತಿಲ್ಲ. ಅನ್ಯ ಧರ್ಮದವರು ಎನ್ನುತ್ತಿದ್ದಾರೆ. ಮುಸ್ಲಿಂ ಎಂದು ಹೇಳಲು ಅವರಿಗೆ ಭಯವಾಗಿದ್ದು, ಎಲ್ಲಿಯೂ ಇಂಥಹ ಪ್ರಕರಣಗಳು ಮರುಕಳಿಸಬಾರದು ಎಂದರು.

Shobha Karandlaje angry on Siddaramaiah over Mangaluru Issue

ಗೃಹ ಖಾತೆ ಅವರ ಬಳಿಯಲ್ಲಿಯೇ ಇದ್ದರೂ ಏನೂ ಕ್ರಮ ಕೈಗೊಂಡಿಲ್ಲ. ಹಿಂದಿದ್ದ ಗೃಹ ಸಚಿವರೂ ಯಾವುದೇ ಕೆಲಸವನ್ನು ಮಾಡಲಿಲ್ಲ. ದೇಶದಲ್ಲಿ ಮಳೆಯ ಅಭಾವವಾಗಿದೆ. ನಾಡಿನಲ್ಲಿಯೂ ಮಳೆಯಿಲ್ಲ. ರೈತರು ಸಂಕಷ್ಟಕ್ಕೆ ಎದುರಾಗಿದ್ದಾರೆ. ಬೆಳೆ ತೆಗೆಯಲು ಹೆಚ್ಚಿನ ಸಾಲ ಮಾಡಿಕೊಂಡು, ಬೆಳೆ ಬರದೆ, ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದರು.

ಪ್ರತಿ ವರ್ಷದಂತೆ ಈ ಬಾರಿ ಕೂಡ ಬೆಟ್ಟ ಹತ್ತುತ್ತಿರುವೆ. ನಾಡಿನ ಜನತೆ ಸುಭಿಕ್ಷವಾಗಿರಲಿ ಅಂತ ಚಾಮುಂಡಿ ತಾಯಿಗೆ ಪ್ರಾರ್ಥನೆ ಮಾಡುತ್ತೇನೆ. ರಾಜ್ಯದಲ್ಲಿ ಮಳೆ- ಬೆಳೆ‌ ಚೆನ್ನಾಗಿ ಆಗಲಿ, ಅನ್ನದಾತನ ಸಾವು ಸಂಭವಿಸದಿರಲಿ ಅಂತ ತಾಯಿಗೆ ವಿಶೇಷ ಪೂಜೆ ಸಲ್ಲಿಸಲಿದ್ದೇನೆ ಎಂದರು.

English summary
Shobha Karandlaje angry on Karnataka CM Siddaramaiah over Mangaluru unrest issue. She speaks to media at Chamundi hills, Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X