ತಾಯಿ ಚಾಮುಂಡೇಶ್ವರಿ ದೇವಿಗೆ ಶಕ್ತಿಯೇ ಇಲ್ವಂತೆ!

Posted By:
Subscribe to Oneindia Kannada

ಮೈಸೂರು, ಆಗಸ್ಟ್ 20: ವಿಶ್ವ ವಿಖ್ಯಾತ ಮೈಸೂರು ದಸರಾ ಸಂಭ್ರಮಕ್ಕೂ ಮುನ್ನ ವಿವಾದ ಬುಗಿಲೆದ್ದಿದೆ. ಚಾಮುಂಡಿ ದೇವಿಯ ಶಕ್ತಿ ಕುರಿತಾಗಿ ಅನುಮಾನ ವ್ಯಕ್ತವಾಗಿದೆ.

ಚಾಮುಂಡಿಗೆ ಆಷಾಢ ಮಾಸದಲ್ಲಿ ದಾಖಲೆಯ ಆದಾಯ

ದಸರಾಗೂ ಮುನ್ನವೇ ಚಾಮುಂಡೇಶ್ವರಿ ದೇವಿಯ ಶಕ್ತಿಯ ವಿಚಾರವಾಗಿ ಚಿಂತಕ ಶೆಲ್ವಪಿಲೈ ಅಯ್ಯಂಗಾರ್ ವಿವಾದವೊಂದನ್ನು ಹುಟ್ಟು ಹಾಕಿದ್ದಾರೆ.

Shilpa Pillai Iyengar Suspicion about the power of Chamundeshwari

"ಚಾಮುಂಡೇಶ್ವರಿ ದೇವಿ ಮೂರ್ತಿಗೆ ಶಕ್ತಿ ಇಲ್ಲ. ಅದು ಕೇವಲ ಅರಮನೆಯ ಬೊಂಬೆ ತೊಟ್ಟಿಯಲ್ಲಿರುವ ಬೊಂಬೆ ಮಾತ್ರ. ಸರ್ಕಾರ ಕೇವಲ ತನ್ನ ಸಾಧನೆ ಸಾರುವ ಉತ್ಸವ ಮಾತ್ರ ಮಾಡುತ್ತಿದೆ. ಸಾಂಪ್ರದಾಯಿಕ ಅಥವಾ ಧಾರ್ಮಿಕ ದಸರಾ ಎನ್ನುವುದರಲ್ಲಿ ಅರ್ಥವೇ ಇಲ್ಲ ಎಂಬ ವಿವಾದಾತ್ಮಕ ಹೇಳಿಕೆ ನೀಡಿ ಚರ್ಚೆ ಗ್ರಾಸವಾಗಿದ್ದಾರೆ.

ಶಕ್ತಿದೇವತೆ ಎಂದೇ ಕರೆಯಲ್ಪಡುವ ದಸರಾ ಅಂಬಾರಿ ಮೇಲಿನ ದೇವಿಗೆ ಯಾವುದೇ ಪ್ರಾಣ ಪ್ರತಿಷ್ಠಾಪನೆ ಆಗಿಲ್ಲ. ಪ್ರಾಣ ಪ್ರತಿಷ್ಠಾಪನೆಯನ್ನೇ ಮಾಡಿಲ್ಲವೆಂದಾದರೆ ಶಕ್ತಿಯ ಗಮನ ಹೇಗಾಗುತ್ತದೆ? ಅಂಬಾರಿ ಮೇಲಿನ ಉತ್ಸವ ಮೂರ್ತಿಗೆ ಶಕ್ತಿ ತುಂಬುವ ಕೆಲಸ ಕೂಡ ಆಗಿಲ್ಲ? ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆಯನ್ನೇ ಮಾಡದೆ ಅಂಬಾರಿ ಉತ್ಸವ ನಡೆಯುತ್ತಿದೆ.

ಸಾಂಪ್ರದಾಯಿಕ ದಸರಾವನ್ನು ರಾಜ ವಂಶಸ್ಥರು ಮಾಡುತ್ತಿದ್ದಾರೆ. ಆದ್ರೆ, ಪ್ರಾಣ ಪ್ರತಿಷ್ಠಾಪನೆ ಮಾಡದ ಮೂರ್ತಿ ಉತ್ಸವ ಮೂರ್ತಿಯಾಗಿದೆ. ಈ ಭಾವನೆ ಜನರಲ್ಲೂ ಮೂಡಿದೆ ಎಂದಿದ್ದಾರೆ.

ಇತಿಹಾಸ ತಜ್ಙರದ್ದು ಇದೇ ಅಭಿಪ್ರಾಯ :ಇನ್ನು ಈ ವಿವಾದಕ್ಕೆ ಮತ್ತೊಬ್ಬರು ಸಹ ದನಿಗೂಡಿಸಿದ್ದಾರೆ. ಖ್ಯಾತ ಇತಿಹಾಸ ತಜ್ಞ ಪ್ರೊ.ನಂಜರಾಜ ಅರಸ್ ಕೂಡಾ ಶೆಲ್ವಪಿಲೈ ಅಯ್ಯಂಗಾರ್'ಅವರ ಈ ಅಭಿಪ್ರಾಯವನ್ನು ಒಪ್ಪಿಕೊಂಡಿದ್ದಾರೆ.

ದಸರಾಗೂ ಮುನ್ನವೇ ಚಾಮುಂಡೇಶ್ವರಿ ದೇವಿಯ ಶಕ್ತಿಯ ವಿಚಾರವಾಗಿ ಶೆಲ್ವಪಿಲೈ ಅಯ್ಯಂಗಾರ್ ನುಡಿದ ಈ ಮಾತುಗಳು ಭಾರೀ ಚರ್ಚೆಯೊಂದಕ್ಕೆ ಅವಕಾಶ ಮಾಡಿಕೊಟ್ಟಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Shilpa Pillai Iyengar Suspicion about the power of Chamundi Devi.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ