ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಜೆಟ್ ನಲ್ಲಿ ಘೋಷಿಸಿದ ಶಂಕರ ಜಯಂತಿ ಆಚರಣೆ 2002ರಲ್ಲೇ ಆರಂಭ!

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜುಲೈ.06: ಶೃಂಗೇರಿ ಎಂದರೆ ತಕ್ಷಣ ನೆನಪಿಗೆ ಬರುವುದು ಶಾರದಾಂಬೆ ಕ್ಷೇತ್ರ. ಈ ಸುಕ್ಷೇತ್ರವನ್ನು ಸ್ಥಾಪಿಸಿದ್ದು ಆದಿ ಶಂಕರಾಚಾರ್ಯರು. ಈ ಕ್ಷೇತ್ರಕ್ಕೂ ದೇವೇಗೌಡ ಕುಟುಂಬಕ್ಕೂ ತುಂಬಾ ನಿಕಟವಾದ ನಂಟಿದೆ. ಎಚ್‍ಡಿಕೆಗೆ ಸಿಎಂ ಪಟ್ಟ ದೊರೆತಿರುವುದು ಇಲ್ಲಿ ಮಾಡಿಸಲಾದ ಹೋಮ, ಹವನಗಳಿಂದ ಎನ್ನುವುದು ಸಾಮಾನ್ಯ ನಂಬಿಕೆ.

ಈ ಹಿನ್ನೆಲೆಯಲ್ಲೇ ಸರ್ಕಾರ ಬಜೆಟ್ ನಲ್ಲಿ ಆದಿ ಶಂಕರಾಚಾರ್ಯ ಜಯಂತಿ ಆಚರಣೆಯ ಘೋಷಣೆ ಮಾಡಿದೆ.

ಕರ್ನಾಟಕ ಬಜೆಟ್ 2018: ಸಾಲಮನ್ನಾ ಓಕೆ, ಕರಾವಳಿ ನಿರ್ಲಕ್ಷ್ಯಿಸಿದ್ದು ಯಾಕೆ?!ಕರ್ನಾಟಕ ಬಜೆಟ್ 2018: ಸಾಲಮನ್ನಾ ಓಕೆ, ಕರಾವಳಿ ನಿರ್ಲಕ್ಷ್ಯಿಸಿದ್ದು ಯಾಕೆ?!

ಆದರೆ ಶೃಂಗೇರಿ ಮಠದ ಮೂಲಗಳ ಪ್ರಕಾರ 2002ರಲ್ಲೇ ರಾಜ್ಯ ಸರ್ಕಾರ ಶಂಕರಾಚಾರ್ಯ ಜಯಂತಿ ಆಚರಿಸುತ್ತಿದೆ. ಪ್ರತಿ ವರ್ಷ ಶಂಕರ ಹುಟ್ಟಿದ ದಿನವನ್ನು ತತ್ವಜ್ಞಾನಿಗಳ ದಿನವನ್ನಾಗಿ ರಾಜ್ಯ ಸರ್ಕಾರದಿಂದ ಆಚರಿಸಲಾಗುತ್ತಿದೆ ಎನ್ನುವ ಮಾಹಿತಿ ನೀಡುತ್ತಾರೆ ಮಠದ ಆಡಳಿತಾಧಿಕಾರಿ ವಿ.ಆರ್. ಗೌರೀಶಂಕರ.

Shankara Jayanti celebration was start on 2002

ಒಟ್ಟಾರೆ ಇದೀಗ ಸರ್ಕಾರದ ನಿರ್ಧಾರವನ್ನು ಒಂದು ವರ್ಗ ಸ್ವಾಗತಿಸಿದ್ದರೆ, ಬುದ್ಧಿಜೀವಿಗಳ ಇನ್ನೊಂದು ವರ್ಗ ಟೀಕಿಸುತ್ತಿದೆ. ಮುಂದೇನಾಗುತ್ತೋ ಕಾದು ನೋಡಬೇಕಿದೆ.

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಮೊದಲ ಬಜೆಟ್ ಅನ್ನು ಹಣಕಾಸು ಸಚಿವರೂ ಆದ, ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ನಿನ್ನೆ (ಜುಲೈ 05) ಮಂಡಿಸಿದರು. ಬೆಳಗ್ಗೆ 11 ಗಂಟೆಗೆ ಸಂಪುಟ ಸಭೆ ನಡೆಸಿ, ನಂತರ ನಂತರ 11:30 ಬಜೆಟ್ ಭಾಷಣ ಆರಂಭಿಸಿದ ಅವರು ಬರೋಬ್ಬರಿ ಒಂದೂ ಮುಕ್ಕಾಲು ಗಂಟೆಯ ಕಾಲ ಭಾಷಣ ಮಾಡಿದರು.

ರಾಜಕೀಯ ಪ್ರೇರಿತ ಮುಂಗಡಪತ್ರ : ಅನಂತಕುಮಾರ್ ಆಕ್ರೋಶ ರಾಜಕೀಯ ಪ್ರೇರಿತ ಮುಂಗಡಪತ್ರ : ಅನಂತಕುಮಾರ್ ಆಕ್ರೋಶ

2,18,488 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಅನ್ನು ಕುಮಾರಸ್ವಾಮಿ ಮಂಡಿಸಿದರು. ಬಜೆಟ್ಟಿನುದ್ದಕ್ಕೂ ಬೆಂಗಳೂರು, ಮಂಡ್ಯ, ಹಾಸನ, ರಾಮನಗರ, ಮೈಸೂರು, ಉತ್ತರ ಕರ್ನಾಟಕದ ಕೆಲವು ಭಾಗಗಳಿಗೆ ಬಿಟ್ಟರೆ ಬೇರೆ ಜಿಲ್ಲೆಗಳನ್ನೂ ಕುಮಾರಸ್ವಾಮಿ ನಿರ್ಲಕ್ಷಿಸಿದ್ದಾರೆ ಎಂದು ಪ್ರತಿಪಕ್ಷಗಳು ಬಜೆಟ್ ಭಾಷಣದ ಕೊನೆಯಲ್ಲಿ ಪ್ರತಿಭಟನೆ ನಡೆಸಿದ ಘಟನೆಯೂ ನಡೆಯಿತು.

English summary
Shankara Jayanti celebration was announced in HD Kumaraswamy Budget yesterday. But celebration was start on 2002. Math Administrator VR Gowrishankar informed about this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X