ಮೈಸೂರಿಗೆ ಪ್ರಧಾನಿ ಭೇಟಿ: ಭದ್ರತೆ ಪರಿಶೀಲಿಸಿದ ಎಸ್‌ಪಿಜಿ ತಂಡ

By: ಯಶಸ್ವಿನಿ ಎಂ.ಕೆ
Subscribe to Oneindia Kannada
   ಮೈಸೂರಿಗೆ ಪ್ರಧಾನಿ ಭೇಟಿ: ಭದ್ರತೆ ಪರಿಶೀಲಿಸಿದ ಎಸ್‌ಪಿಜಿ ತಂಡ | Oneindia Kannada

   ಮೈಸೂರು, ಫೆಬ್ರವರಿ 14: ಫೆಬ್ರವರಿ 18ರಂದು ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುತ್ತಿರುವ ಕಾರಣ ಇಂದು ಎಸ್‌.ಪಿ.ಜಿ ತಂಡ ನಗರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

   ಎಸ್‌.ಜಿ.ಪಿಯ ಎಐಜಿಪಿ ಸೋಮಯತಿರಾಯ್ ನೇತೃತ್ವದ ತಂಡ ಹಾಗೂ ಜಿಲ್ಲಾಧಿಕಾರಿ ಡಿ.ರಂದೀಪ್, ಪಾಲಿಕೆ ಅಧಿಕಾರಿಗಳು, ನಗರ ಪೊಲೀಸ್ ಉನ್ನತ ಅಧಿಕಾರಿಗಳು ಸೇರಿ 45 ಮಂದಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.

   ನಗರದ ಹೆಲಿಪ್ಯಾಡ್, ಲಲಿತ ಮಹಲ್, ಜೆ.ಕೆ.ಗ್ರೌಂಡ್ ಹಾಗೂ ಮಹರಾಜಾ ಕಾಲೇಜು ಮೈದಾನದಲ್ಲಿ ಭದ್ರತೆ ಪರಿಶೀಲನೆ ನಡೆಸಿದ ತಂಡ ವರದಿ ಮಾಡಿಕೊಂಡಿತು. ಎಸ್‌.ಜಿ.ಪಿ ತಂಡವು ಸ್ಥಳೀಯ ಪೊಲೀಸ್ ಅಧಿಕಾರಿಗಳೊಂದಿಗೆ ಭದ್ರತೆ ರೂಪುರೇಷೆ ಚರ್ಚಿಸಿದತು.

   SGP team checked security in Mysuru ahed of Modi visit

   ಫೆಬ್ರವರಿ 18 ರಂದು ರಾತ್ರಿ ವಿಶೇಷ ವಿಮಾನದಲ್ಲಿ ಮೈಸೂರಿಗೆ ಆಗಮಿಸಲಿರುವ ಮೋದಿ. ಲಲಿತ್ ಮಹಲ್ ಪ್ಯಾಲೆಸ್ ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಫೆ.19 ಬೆಳಿಗ್ಗೆ 10 :30 ಕ್ಕೆ ವಿಡಿಯೋ ಸಂವಾದ ನಡೆಸಿದ ಬಳಿಕ 12:30 ವಿಶೇಷ ಹೆಲಿಕಾಪ್ಟರ್ ಮೂಲಕ ಶ್ರವಣಬೆಳಗೊಳಕ್ಕೆ ಭೇಟಿ ನೀಡಲಿದ್ದಾರೆ.

   SGP team checked security in Mysuru ahed of Modi visit

   ಬಳಿಕ ಶ್ರವಣ ಬೆಳಗೊಳದಿಂದ 3 ಗಂಟೆಗೆ ಹೊರಟು ಮೈಸೂರಿನ ಜೆ.ಕೆ.ಮೈದಾನಕ್ಕೆ ಬಂದಿಳಿಯಲಿರೋ ಮೋದಿ ಅವರು ಜೆ.ಕೆ.ಮೈದಾನದಿಂದ ಕಾರಿನಲ್ಲಿ ರೈಲ್ವೆ ನಿಲ್ದಾಣಕ್ಕೆ ಬಂದು ಅಲ್ಲಿ ಜೋಡಿ ಎಲೆಕ್ಟಿಕಲ್ ಟ್ರೈನ್ ಉದ್ಘಾಟನೆ ಹಾಗೂ ಅಂದೇ ಷಟ್ಪಥ ರೈಲು ಮಾರ್ಗ ಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

   ಬಳಿಕ ಮಹಾರಾಜ ಕಾಲೇಜು ಮೈದಾನದಲ್ಲಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿ ಸಂಜೆ 4:30 ಕ್ಕೆ ವಿಶೇಷ ವಿಮಾನದ ಮೂಲಕ ಬೆಂಗಳೂರು ತಲುಪುತ್ತಾರೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   SGP team visited Mysuru to check security ahead of Narendra Modi's visit. Modi visiting Mysuru on February 18 to city. SGP team took information from Local police and District administration.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ