ಕಾಣೆಯಾಗಿರುವ ಈ ತರುಣಿ ಕಣ್ಣಿಗೆ ಬಿದ್ದರೆ ಕರೆ ಮಾಡಿ!

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಜೂನ್ 30 : ಶಾಲೆಗೆಂದು ತೆರಳಿದ ಹದಿನೈದರ ಹರೆಯದ ವಿದ್ಯಾರ್ಥಿನಿ ಸಂಜೆ ಮನೆಗೆ ಬಾರದೆ ನಾಪತ್ತೆಯಾಗಿರುವ ಘಟನೆ ಹುಣಸೂರಿನಲ್ಲಿ ಬುಧವಾರ ನಡೆದಿದ್ದು, ಹೆತ್ತವರು ಮಗಳ ನೆನಪಿನಲ್ಲಿ ಕಣ್ಣೀರಿಡುತ್ತಿದ್ದಾರೆ.

ಹುಣಸೂರು ನಗರದ ಹೊಸೂರು ಮಾರಮ್ಮ ಬಡಾವಣೆಯ ಪ್ರದೀಪ್ ಕುಮಾರ್ ಹಾಗೂ ತುಳಸಿ ದಂಪತಿ ಪುತ್ರಿ ಪೂಜಾ(15) ನಾಪತ್ತೆಯಾದ ವಿದ್ಯಾರ್ಥಿನಿ. ಎಲ್ಲಿ ಹೋಗಿರಬಹುದು, ಯಾಕೆ ಕಾಣೆಯಾಗಿದ್ದಾಳೆ ಎಂಬ ಸುಳಿವು ಇನ್ನೂ ಸಿಕ್ಕಿಲ್ಲ. [ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಇಬ್ಬರ ಬಂಧನ, ಯುವತಿ ರಕ್ಷಣೆ]

School girl missing in Hunasur, help to trace her

ಈಕೆ ಅಲ್ಲಿನ ಸರ್ಕಾರಿ ಬಾಲಕಿಯರ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದಳು. ಈ ನಡುವೆ ಎಂದಿನಂತೆ ಶಾಲೆಗೆಂದು ಮನೆಯಿಂದ ತೆರಳಿದವಳು ಸಂಜೆ ಮರಳಿ ಬಂದಿಲ್ಲ.

ಮಗಳು ಶಾಲೆಯಿಂದ ಮರಳಿ ಮನೆಗೆ ಬಾರದ್ದರಿಂದ ಆತಂಕಗೊಂಡು ಎಲ್ಲೆಡೆ ಹುಡುಕಾಡಿದ ಹೆತ್ತವರಿಗೆ ಯಾವುದೇ ರೀತಿಯ ಸುಳಿವು ಸಿಕ್ಕಿಲ್ಲ. ಮಗಳ ಯೋಚನೆಯಲ್ಲೇ ಕಂಗಾಲಾಗಿರುವ ಪೋಷಕರು ಬೇರೆ ದಾರಿ ಕಾಣದೆ ನಾಪತ್ತೆಯಾಗಿರುವ ಮಗಳನ್ನು ಹುಡುಕಿಕೊಡಿ ಎಂದು ಹುಣಸೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪತ್ರಿಕೆಗಳಿಗೆ ಪ್ರಕಟಣೆ ನೀಡಿದ್ದು, ವಿದ್ಯಾರ್ಥಿನಿಯ ಸುಳಿವು ಸಿಕ್ಕರೆ ಹುಣಸುರು ಪೊಲೀಸ್ ಠಾಣೆ(9480805055, 08222253133)ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಎಸ್‌ಐ ಷಣ್ಮುಗಂ ತಿಳಿಸಿದ್ದಾರೆ. [ಯುವತಿಯರೇ ಫೇಸ್ಬುಕ್ ನಲ್ಲಿ ಚಾಟ್ ಮಾಡೋ ಮುನ್ನ ಎಚ್ಚರ!]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A school going girl Pooja (15) is reportedly gone missing in Hunasur in Mysuru district. She was studying in 9th standard in government school. Parents have complained to Hunasur police. If anyone finds here can contact the police. ಕಾಣೆಯಾಗಿರುವ ಈ ತರುಣಿ ಕಣ್ಣಿಗೆ ಬಿದ್ದರೆ ಕರೆ ಮಾಡಿ!
Please Wait while comments are loading...