ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ಸಾಂಸ್ಕೃತಿಕ ನಗರಿಯ ಬಾನಂಗಳದಲ್ಲಿ ಹಾರಾಡಲಿವೆ ಬಣ್ಣಬಣ್ಣದ ಗಾಳಿಪಟ

Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಮೈಸೂರು, ಸೆಪ್ಟೆಂಬರ್ 28: ದಸರೆಗೆ ಪೂರ್ವಭಾವಿಯಾಗಿ ನಾಳೆ ರಾತ್ರಿ ಬಣ್ಣಬಣ್ಣದ ತರಹೇವಾರಿ ಗಾಳಿಪಟಗಳು ಸಾಂಸ್ಕೃತಿಕ ನಗರಿಯ ಬಾನಂಗಳದಲ್ಲಿ ಹಾರಾಡಲಿವೆ.

  ಈ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಅಭಿರಾಂ ಶಂಕರ್, ಪ್ರವಾಸೋದ್ಯಮ ಇಲಾಖೆ ವತಿಯಿಂದ ಮೈಸೂರಿನಲ್ಲಿ ಮೊದಲ ಬಾರಿಗೆ ಇಂಥ ಪ್ರಯೋಗ ಲಲಿತಮಹಲ್ ಅರಮನೆಯ ಹೆಲಿಪ್ಯಾಡ್ ಮೈದಾನದಲ್ಲಿ ನಡೆಯಲಿದೆ.

  ದಸರಾ ಕಾರ್ ರೇಸ್ ನಲ್ಲಿ ಪಾಲ್ಗೊಳ್ಳಲಿದ್ದಾರೆ ಕೊಡಗಿನ ಬೆಡಗಿ ನಿಧಿ ಸುಬ್ಬಯ್ಯ

  ನಾಳೆ ಸೆ. 29 ಹಾಗೂ 30ರಂದು ಪತಂಗೋತ್ಸವ ಆಯೋಜಿಸಲಾಗಿದ್ದು, ಎಲ್‌ಇಡಿ ಬೆಳಕು ಹಾಗೂ ಆಕಾಶ ದೀಪಗಳಿಂದ ಕೂಡಿದ ಗಾಳಿಪಟಗಳ ಹಾರಾಟ ಪ್ರದರ್ಶನವಿರಲಿದೆ. ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವ ಗಾಳಿಪಟ ಹಾರಾಟಗಾರರು ಉತ್ಸವದಲ್ಲಿ ಭಾಗವಹಿಸಿ ವಿಶಿಷ್ಟ ವಿನ್ಯಾಸದ ಗಾಳಿಪಟ ಪ್ರದರ್ಶಶನದ ಮೂಲಕ ಉತ್ಸವದಲ್ಲಿ ಕೌಶಲ ತೋರಲಿದ್ದಾರೆ ಎಂದರು.

  Saturday night colorful kites will fly in Mysore

  ಅಷ್ಟೇ ಅಲ್ಲ ಅವರು ಬಗೆಬಗೆಯ ಗಾಳಿಪಟಗಳನ್ನು ಹಾರಿ ಬಿಟ್ಟು ಗಾಳಿಪಟ ಪ್ರಿಯರ ಉತ್ಸವಕ್ಕೆ ಮೆರುಗು ತುಂಬಲಿದ್ದಾರೆ. ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ಚಾಲನೆ ನೀಡಲಿದ್ದಾರೆ.
  ಎರಡು ದಿನಗಳ ಉತ್ಸವದಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರಿಗೂ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದರು.

  ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಎಚ್‌.ಪಿ.ಜನಾರ್ಧನ್ ಮಾತನಾಡಿ ಉತ್ಸವದಲ್ಲಿ ಪಾಲ್ಗೊಳ್ಳುವವರು ಇಲಾಖೆಯಲ್ಲಿ ಹೆಸರು ನೋಂದಣಿ ಮಾಡಿಸಿಕೊಳ್ಳಬೇಕು.

  ದಸರೆ ರಂಗೇರಿಸಲು ಸಜ್ಜು: ಈ ಬಾರಿ 'ಮನೆ ಮನೆಗೆ ಯೋಗ'

  30ರಂದು ಪತಂಗೋತ್ಸವದ ಜೊತೆ ಗಾಳಿಪಟ ತಯಾರಿಕೆ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಲು ಕಾರ್ಯಾಗಾರ ಆಯೋಜಿಸಲಾಗುತ್ತಿದೆ. ಗಾಳಿಪಟ ಹಾರಿಸುವ ಬಗ್ಗೆಯೂ ಪರಿಣತರು ತರಬೇತಿ ನೀಡಲಿದ್ದಾರೆ. 2 ಇಂಚಿನಿಂದ ಹಿಡಿದು 30 ಅಡಿ ಎತ್ತರದವರೆಗಿನ ಗಾಳಿಪಟಗಳು ಉತ್ಸವದಲ್ಲಿ ಮೋಡಿ ಮಾಡಲಿವೆ.

  Saturday night colorful kites will fly in Mysore

  ಪರಿಣಿತ ಗಾಳಿಪಟ ಕಲಾವಿದರನ್ನು ಉತ್ಸವಕ್ಕೆ ಆಹ್ವಾನಿಸಲಾಗುತ್ತಿದೆ. ಸೂರತ್‌, ಅಹಮದಾಬಾದ್‌, ಹೈದರಾಬಾದ್‌, ಮುಂಬೈ, ಮಂಗಳೂರಿನಿಂದ ಗಾಳಿಪಟ ಹಾರಾಟಗಾರರು ಬರಲಿದ್ದಾರೆ. ಮಂಗಳೂರು ತಂಡವು ಫ್ರಾನ್ಸ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಪಾಲ್ಗೊಂಡು ಗಮನ ಸೆಳೆದಿತ್ತು ಎಂದು ಮಾಹಿತಿ ನೀಡಿದರು.

  ಈ ಬಾರಿ ದಸರಾ ಮಹೋತ್ಸವಕ್ಕೆ ಸ್ವಾಗತ ಗೀತೆ ರಚಿಸಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದ್ದು, ನಟ ಪುನೀತ್ ರಾಜಕುಮಾರ್ ಹಾಡಲಿದ್ದಾರೆ. ಮಣಿಕಾಂತ್ ಕದ್ರಿ ಅವರು ಸಂಗೀತ ಸಂಯೋಜಿಸಲಿದ್ದು, ವಿ.ನಾಗೇಂದ್ರಪ್ರಸಾದ್ ಸಾಹಿತ್ಯ ರಚಿಸಲಿದ್ದಾರೆ.

  ವಿದೇಶದಲ್ಲಿ ದಸರಾ ಮಹೋತ್ಸವದ ಪ್ರಚಾರ ಕೈಗೊಂಡ ಸಚಿವ ಸಾ.ರಾ.ಮಹೇಶ್

  ದಸರೆಗೆ ಮೆರುಗು ತುಂಬಲು ಸ್ವಾಗತ ಗೀತೆ ಅಳವಡಿಸುವ ಯೋಜನೆ ಇದೆ. ಸದ್ಯದಲ್ಲೇ ಸಿದ್ಧತೆ ಆರಂಭವಾಗಲಿದ್ದು, ಕಲಾವಿದರನ್ನು ಸಂಪರ್ಕಿಸಲಾಗುವುದೆಂದು ಜನಾರ್ಧನ್ ತಿಳಿಸಿದರು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Saturday night (september 28) color colorful kites will fly in Mysore. Program is organised for Preliminary Dasara festival.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more