ಮೈಸೂರು: ಪೊಲೀಸರ ಶೂಟೌಟ್ ನಲ್ಲಿ ಗಂಧದ ಮರ ಸ್ಮಗ್ಲರ್ ಸಾವು

Posted By:
Subscribe to Oneindia Kannada

ಮೈಸೂರು, ಫೆಬ್ರವರಿ 12: ಜಿಲ್ಲೆಯ ದತ್ತಗಳ್ಳಿಯ ಬಳಿಯಿರುವ ಲಿಂಗಬಂಧಿ ಕೆರೆಯ ಬಳಿ ಶನಿವಾರ ರಾಜ್ಯ ಅರಣ್ಯಾಧಿಕಾರಿಗಳು ಹಾಗೂ ಗಂಧದ ಮರ ಕಳ್ಳ ಸಾಗಣೆದಾರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಕಳ್ಳಸಾಗಣೆದಾರ ಸಾವಿಗೀಡಾಗಿದ್ದಾನೆಂದು ಮೂಲಗಳು ತಿಳಿಸಿವೆ.

ಇತ್ತೀಚೆಗೆ, ಲಿಂಗಬಂಧಿ ಕೆರೆಯ ಬಳಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದ ಹಿನ್ನೆಲೆಯಲ್ಲಿ ಆ ಜಾಗದಲ್ಲಿ ಪಂಜರವೊಂದನ್ನು ಇರಿಸಿದ್ದ ಅರಣ್ಯಾಧಿಕಾರಿಗಳು, ಅದರ ಮೇಲೆ ದಿನದ 24 ಗಂಟೆ ನಿಗಾ ವಹಿಸಿದ್ದರು.

ಹೀಗೆಯೇ, ಶನಿವಾರವೂ ಅರಣ್ಯಾಧಿಕಾರಿಗಳು ದೂರದಿಂದ ಪಂಜರದ ಕಡೆಗೆ ಗಮನವಿಟ್ಟಿದ್ದಾಗ, ಸುಮಾರು ಎಂಟು ಮಂದಿಯುಳ್ಳ ತಂಡ ಕೆರೆಯ ಬಳಿಯಲ್ಲಿದ್ದ ಗಂಧದ ಮರಗಳನ್ನು ಕಡಿಯಲು ಮುಂದಾಗಿರುವುದು ಗಮನಕ್ಕೆ ಬಂದಿತ್ತು. ತಕ್ಷಣವೇ ಕಾರ್ಯ ಪ್ರವೃತ್ತರಾದ ಅಧಿಕಾರಿಗಳು ಅವರನ್ನು ತಡೆದು, ಬಂಧಿಸಲು ಮುಂದಾಗುವಷ್ಟರಲ್ಲಿ ಇದನ್ನು ಗಮನಿಸಿದ ಕಳ್ಳರು ಪೊಲೀಸರತ್ತ ಗುಂಡಿನ ದಾಳಿ ನಡೆಸಿದ್ದಾರೆನ್ನಲಾಗಿದೆ.

ಆಗ, ಪೊಲೀಸರಿಂದ ನಡೆದ ಪ್ರತಿ ದಾಳಿಯಲ್ಲಿ ಒಬ್ಬ ಗಂಧದ ಮರದ ಕಳ್ಳಸಾಗಣೆಕೋರ ಮೃತ್ತಪಟ್ಟಿದ್ದಾನೆಂದು ಮೂಲಗಳು ಹೇಳಿವೆ. ಆದರೆ, ಈ ವೇಳೆ ಉಳಿದ ಏಳು ಜನರು ಸ್ಥಳದಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸುವ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a gun battle that happened between Forest Department officials and sandalwood thieves in Lingabudhi Lake near Dattagalli in Mysore, one alleged sandalwood thief has succumbed to death.
Please Wait while comments are loading...