ಮಾಜಿ ಸಚಿವ ರಾಮ್ ದಾಸ್ ಗೆ ಮತ್ತೆ 'ಪ್ರೇಮ' ಸಂಕಟ?

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಏಪ್ರಿಲ್ 21 : ತಣ್ಣಗಾಗಿದ್ದ ಮಾಜಿ ಸಚಿವ ರಾಮದಾಸ್-ಪ್ರೇಮಕುಮಾರಿ ಪ್ರೇಮ ಪ್ರಕರಣಕ್ಕೆ ಮತ್ತೆ ಜೀವಬಂದಿದೆ! ಹೌದು, ಇವರಿಬ್ಬರಿಗೆ ಸಂಬಂಧಿಸಿದ ಎರಡು ಪ್ರಕರಣಗಳನ್ನು ಒಂದೇ ಕೋರ್ಟ್ ನಲ್ಲಿ ವಿಚಾರಣೆ ನಡೆಸಲು ನ್ಯಾಯಾಲಯ ಸಮ್ಮತಿ ಸೂಚಿಸಿದೆ.

ರಾಮದಾಸ್ ಹಾಗೂ ಪ್ರೇಮಕುಮಾರಿ ಇಬ್ಬರೂ ಪರಸ್ಪರ ಒಬ್ಬರನ್ನೊಬ್ಬರು ದೂರಿಕೊಂಡಿರುವ ಎಲ್ಲಾ ಪ್ರಕರಣಗಳನ್ನೂ ಒಂದೇ ಕೋರ್ಟ್ ನಲ್ಲಿ ವಿಚಾರಣೆ ನಡೆಸುವಂತೆ ಪ್ರೇಮಕುಮಾರಿ ಪರ ವಕೀಲ ಅಮೃತೇಶ್ ಮನವಿ ಮಾಡಿದ್ದರು. ಹಿರಿಯ ವಕೀಲ ಅಮೃತೇಶ್ ಮನವಿ ಮಾನ್ಯ ಮಾಡಿ, ಮೈಸೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಪಿ.ಜಿಎಂ. ಪಾಟೀಲ್ ಆದೇಶ ಹೊರಡಿಸಿದ್ದಾರೆ.[ಚುನಾವಣೆಗೆ ಪ್ರೇಮಕುಮಾರಿ ರೆಡಿ: ರಾಮ್ ದಾಸ್ ವಿರುದ್ಧ ಕಿಡಿ]

S A Ramdas and Premakumari issue is in picture again!

ಸಿಐಡಿ ತನಿಖೆ ನಡೆಸಿದ ಎರಡೂ ಪ್ರಕರಣಗಳ ವಿಚಾರಣೆ ಇನ್ನು ಮುಂದೆ ಒಂದೇ ಕೋರ್ಟ್ ನಲ್ಲಿ ನಡೆಯಲಿದ್ದು, ಸಿಐಡಿ ಅಧಿಕಾರಿಗಳು ಪ್ರೇಮಕುಮಾರಿ ವಿರುದ್ಧ ಚಾರ್ಜ್ ಶೀಟ್ , ರಾಮದಾಸ್ ವಿರುದ್ಧ ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಇದನ್ನು ಪ್ರಶ್ನೆ ಮಾಡಿ ವಕೀಲ ಅಮೃತೇಶ್ ಸಲ್ಲಿಸಿದ್ದ ಅರ್ಜಿಯನ್ನ ಕೋರ್ಟ್ ಪುರಸ್ಕರಿಸಿದೆ. ಇದರಿಂದ ಮಾಜಿ ಸಚಿವ ರಾಮದಾಸ್ ಅವರಿಗೆ ಕಾನೂನು ಸಂಕಟ ಆರಂಭವಾದಂತಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former minister S A Ramdas and Premakumari issue has come into the picture again. The all cases between both should be inquired by only one court, A couurt in Mysuru ordered today.
Please Wait while comments are loading...