ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡೆತ್ ನೋಟ್ ಬರೆದಿಟ್ಟು ಆರ್ ಎಸ್‌ಎಸ್ ಕಾರ್ಯಕರ್ತ ಆತ್ಮಹತ್ಯೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜನವರಿ 12 : ವಿವೇಕಾನಂದರ ಚಿಂತನೆಯಲ್ಲಿ ತೊಡಗಿಸಿಕೊಂಡಿದ್ದ ಸಿವಿಲ್ ಎಂಜಿನಿಯರ್, ಆರ್ಎಸ್ಎಸ್ ಕಾರ್ಯಕರ್ತ ಡೆತ್ ನೋಟ್ ಬರೆದಿಟ್ಟು ಸಾವಿಗೀಡಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ವಿವೇಕಾನಂದರ ಜನುಮದಿನದ ಹಿಂದಿನ ದಿನ ಈ ಘಟನೆ ನಡೆದಿರುವುದು ವಿಪರ್ಯಾಸ.

ಮೃತ ಯುವಕನನ್ನು ಜೆ.ಪಿ.ನಗರ ನಿವಾಸಿ ಬಾಬು (22) ಎಂದು ಗುರುತಿಸಲಾಗಿದೆ. ಚಿಕ್ಕಂದಿನಿಂದಲೇ ಅಣ್ಣನ ಜೊತೆ ಮೈಸೂರಿನ ಮಾವನ ಮನೆಯಲ್ಲಿ ಬಂದಿದ್ದು ವ್ಯಾಸಂಗ ಮಾಡುತ್ತಿದ್ದ. ಸಿವಿಲ್‌ ಇಂಜಿನಿಯರಿಂಗ್‌ ಓದಿದ್ದ ಈತ ಆರ್‌ಎಸ್ಎಸ್ ನ ಸಕ್ರಿಯ ಕಾರ್ಯಕರ್ತನಾಗಿದ್ದ.[ಶೃಂಗೇರಿ ವಿದ್ಯಾರ್ಥಿ ಆತ್ಮಹತ್ಯೆ: ಮಂಗ್ಳೂರಲ್ಲಿ ಎಬಿವಿಪಿ ಬೃಹತ್ ಪ್ರತಿಭಟನೆ]

RSS activist committed suicide before he write Death Note in mysuru

ನಗರದಲ್ಲಿ ನಡೆಯುವ ಆರ್‌ಎಸ್ಎಸ್ ಹಾಗೂ ಬಿಜೆಪಿ ಕಾರ್ಯಕ್ರಮದಲ್ಲಿ ಸಕ್ರಿಯನಾಗಿ ಭಾಗವಹಿಸುತ್ತಿದ್ದು, ಇತ್ತೀಚೆಗೆ ಜೀವನ ನಡೆಸಲು ತುಂಬಾ ಕಷ್ಟ ಪಡುತ್ತಿದ್ದ ಹಿನ್ನೆಲೆಯಲ್ಲಿ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ. ಈತ ಆರೆಸ್ಸೆಸ್ ನಲ್ಲೂ ಸಕ್ರಿಯನಾಗಿದ್ದು, ವಿವೇಕಾನಂದರ ಚಿಂತನೆಗಳಿಂದ ಪ್ರಭಾವಿತನಾಗಿದ್ದ ಎನ್ನಲಾಗಿದೆ.[ರುದ್ರೇಶ್ ಕೊಲೆ ಪ್ರಕರಣ: ಭುಗಿಲೆದ್ದ ಬಿಜೆಪಿ ಆಕ್ರೋಶ]

ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ಈ ದೇಹ ನಶ್ವರ, ವಿವೇಕಾನಂದರಂತೆ ನಾನು ನನ್ನ ದೇಹವನ್ನು ತ್ಯಜಿಸುತ್ತಿದ್ದೇನೆ. ಮರಣಾನಂತರ ಚಾಮುಂಡೇಶ್ವರಿ ದೇವಿಯ ತೀರ್ಥವನ್ನು ನನ್ನ ದೇಹಕ್ಕೆ ಪ್ರೋಕ್ಷಣೆ ಮಾಡಬೇಕು. ದೇಹಕ್ಕೆ ಕೇಸರಿ ಬಟ್ಟೆ ಹೊದಿಸಿ ಅಂತ್ಯಕ್ರಿಯೆ ನಡೆಸಿ. ದೇಹ ದಹಿಸಿದ ನಂತರ ಚಿತಾಭಸ್ಮವನ್ನು ಕನ್ಯಾಕುಮಾರಿಯಲ್ಲಿ ವಿಸರ್ಜಿಸಿ ಎಂದು ಬರೆಯಲಾಗಿದೆ.[ಸ್ವಾಮಿ ವಿವೇಕಾನಂದರ ಶಿಕಾಗೋ ಭಾಷಣ, ವಿಡಿಯೋ]

ಈತ ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆವ್ಯಕ್ತವಾಗಿದ್ದು, ಮೈಸೂರು ದಕ್ಷಿಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
RSS activist committed suicide before he write Death Note in mysuru. activist have no money to lead life Within the depressed committed suicide.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X