ಮೈಸೂರಿನಲ್ಲಿ ದಾಖಲೆ ಇಲ್ಲದ 22 ಲಕ್ಷ ವಶ: ಇಬ್ಬರ ಬಂಧನ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಡಿಸೆಂಬರ್ 10 : ಯಾವುದೇ ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ ರು 22,26,000 ಗಳನ್ನು ಮೈಸೂರಿನ ವಿದ್ಯಾರಣ್ಯಪುರಂ ಪೊಲೀಸರು ವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಕೆಸರೆ ಕೆ.ಆರ್.ಮಿಲ್ ಕಾಲೋನಿಯ ಗುರುಲಿಂಗ(42), ಹುಣಸೂರು ತಾಲೂಕಿನ ಹಳೆಬೀಡು ಗ್ರಾಮದ ಶ್ರೀನಿವಾಸ(38) ಎಂದು ಗುರುತಿಸಲಾಗಿದೆ. ಇವರು ತಮ್ಮ ಕಾರಿನಲ್ಲಿ ಹಣವನ್ನು ಕೊಂಡೊಯ್ಯತ್ತಿದ್ದು ಅನುಮಾನಾಸ್ಪದವಾಗಿ ವಿದ್ಯಾರಣ್ಯಪುರಂ ವ್ಯಾಪಿಯಲ್ಲಿ ವಾಹನವನ್ನು ನಿಲ್ಲಿಸಲಾಗಿತ್ತು ಆ ವೇಳೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.[ಕೋಟ್ಯಂತರ ರುಪಾಯಿ ನೋಟು ಬದಲಾವಣೆ ದಂಧೆ ನಡೆದದ್ದು ಹೀಗೆ]

Rs 22.26 lakh black money transpoting two arrested in mysuru

ಇಬ್ಬರು ಬಂಧಿತರು ಸ್ವಿಫ್ಟ್ ಕಾರಿನಲ್ಲಿ 2000 ಮುಖಬೆಲೆಯ ಒಟ್ಟು ರು 22.26 ಲಕ್ಷ ಗಳನ್ನು ಕೊಂಡೊಯ್ಯುತ್ತಿದ್ದರು. ದಾಖಲೆ ಕೇಳಲಾಗಿ ಸಮರ್ಪಕ ಉತ್ತರ ನೀಡದೇ ಇರುವುದರಿಂದ ಆರೋಪಿಗಳನ್ನು ದಸ್ತಗಿರಿ ಮಾಡಿ ಹಣವನ್ನು ವಶಕ್ಕೆ ಪಡೆಯಲಾಗಿದೆ. ತನಿಖೆ ಮುಂದುವರಿದಿದೆ.[ಐಟಿ ದಾಳಿ: ಅಕ್ರಮದ ವಿರುದ್ಧ ಜನಪ್ರತಿನಿಧಿಗಳ ಆಕ್ರೋಶ]

ಹಣವನ್ನು ಬದಲಾವಣೆ ದಂಧೆಗೆ ತೆಗೆದುಕೊಂಡು ಹೋಗುತ್ತಿದ್ದರು ಎಂಬ ಶಂಕೆ ವ್ಯಕ್ತವಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
two persons who were allegedly transporting Rs 22.26 lakh black money , were arrested by vidyaranyapuram police in mysuru.
Please Wait while comments are loading...