ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮುಂಡೇಶ್ವರಿ ಕೃಪೆಯಿಂದ ವಿವಾಹ ಸಂಪನ್ನ: ಪ್ರಮೋದಾದೇವಿ

By Madhusoodhan
|
Google Oneindia Kannada News

ಮೈಸೂರು, ಜೂನ್, 27: ತಾಯಿ ಚಾಮುಂಡೇಶ್ವರಿಯ ದಯೆಯಿಂದ ವಿವಾಹಕಾರ್ಯ ಯಾವುದೇ ತೊಡಕಿಲ್ಲದೆ ನಿರ್ವಿಘ್ನವಾಗಿ ನಡೆದಿದೆ ಎಂದು ರಾಜಮಾತೆ ಪ್ರಮೋದಾದೇವಿ ಹರ್ಷ ವ್ಯಕ್ತಪಡಿಸಿದರು.

ಅರಮನೆಯ ಕಲ್ಯಾಣಮಂಟಪದಲ್ಲಿ ಪುತ್ರ ಯದುವೀರ್ ಮತ್ತು ತ್ರಿಷಿಕಾ ಅವರ ಧಾರಾಮುಹೂರ್ತ ಮತ್ತು ಮಾಂಗಲ್ಯ ಧಾರಣೆಯ ಬಳಿಕ ಭೋಜನಕ್ಕೂ ಮುನ್ನ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.[ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ಯದುವೀರ್-ತ್ರಿಷಿಕಾ]

mysuru

ಎಲ್ಲವೂ ಸಾಂಗವಾಗಿ ನಡೆದಿದೆ ಎನ್ನುವುದಾದರೆ ಅದಕ್ಕೆ ತಾಯಿ ಚಾಮುಂಡೇಶ್ವರಿಯ ಕೃಪೆಯೇ ಕಾರಣವಾಗಿದೆ. ಕಳೆದ ಎರಡು ವರ್ಷಗಳಿಂದ ಅರಮನೆಯಲ್ಲಿ ಯಾವುದೇ ಶುಭ ಕಾರ್ಯಗಳು ನಡೆದಿರಲಿಲ್ಲ. ಈ ಹಿಂದೆ ಯದುವೀರ್ ದತ್ತು ಕಾರ್ಯಕ್ರಮ, ಪಟ್ಟಾಭೀಷೇಕ ಹಾಗೂ ಇನ್ನಿತರ ಕಾರ್ಯಕ್ರಮಗಳು ನಡೆದಿತ್ತು. ಇದೀಗ ವಿವಾಹ ಕಾರ್ಯವೂ ತಾಯಿ ಚಾಮುಂಡೇಶ್ವರಿಯ ಆಶೀರ್ವಾದದಿಂದ ನಡೆದಿದೆ ಎಂದು ಹೇಳಿದರು.[ಮದುವೆಯ ಚಿತ್ರಗಳು]

ಊಟದ ವಿಶೇಷ
ವಿವಾಹಕ್ಕೆ ಆಗಮಿಸಿದ ಅತಿಥಿಗಳಿಗೆ ವಿವಿಧ ಬಗೆಯ ತಿನಿಸುಗಳ ದಕ್ಷಿಣ ಭಾರತದ ಅಡುಗೆಯನ್ನು ಬಡಿಸಲಾಯಿತು. ಊಟದಲ್ಲಿ ಶ್ಯಾವಿಗೆ ಪಾಯಸ, ಹೆಸರು ಬೇಳೆ, ಕಡಲೆಬೇಳೆ ಕೋಸಂಬರಿ, ಮಾವಿನಕಾಯಿ ಚಟ್ನಿ, ದ್ರಾಕ್ಷಿ ಗೊಜ್ಜು, ಮೆಣಸಿನಕಾಯಿ ಬಜ್ಜಿ, ಆಲೂಗೆಡ್ಡೆ ಬೋಂಡ, ಆಂಬೊಡೆ, ಹಪ್ಪಳ ಸಂಡಿಗೆ, ಉಪ್ಪಿನಕಾಯಿ, ಬಾದಾಮಿ ಕೀರು, ಸೇವ್ ಲಾಡು, ಬಾದಾಮಿ ಹಲ್ವ, ಅಕ್ಕಿ ರೊಟ್ಟಿ, ಎಣಗಾಯಿ ಗೊಜ್ಜು, ವೆಜಿಟೇಬಲ್ ಪಲಾವ್, ಬೀನ್ಸ್ ಪಲ್ಯ, ಚೆನ್ನಬತೂರ, ಬಿಸಿಬೇಳೆ ಬಾತು, ಕಾರಬೂಂದಿ, ಅನ್ನಸಾಂಬಾರ್, ತೊವ್ವೆ, ಮಜ್ಜಿಗೆ ಹುಳಿ, ರಸಂ, ಜಹಂಗೀರು, ಮಜ್ಜಿಗೆ, ಮೈಸೂರು ವೀಳ್ಯದೆಲೆ ಸೇರಿದಂತೆ ಹಲವು ತಿನಿಸುಗಳಿದ್ದವು.[ಯದುವಂಶದ ಉತ್ತರಾಧಿಕಾರಿ ಯದುವೀರ್, ಒಂದು ಪರಿಚಯ]

English summary
Royal Wedding: Mysuru's Wadiyar dynasty is hosting a royal wedding as "King" Yaduveer Wadiyar tied the knot with Rajasthani royalty Trishika Kumari Singh on Monday. The historic Mysore Palace witnessed a royal wedding for the first time 40 years. This is all the blessings of goddess chamundeshwari, after the marriage Rani Pramoda Devi said,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X